ಮುಂಡಳ್ಳಿ ಶಾಲಾ ಕಟ್ಟಡ ಕುಸಿತಕ್ಕೆ ಕಾರಣ ಶಾಲಾಭಿವೃಧ್ಧಿ ಸಮಿತಿಯ ಬೇಜವಾಬ್ದಾರಿತನ: ಪಂಚಾಯತ್ ಸದಸ್ಯ ರಾಜು ಎಲ್.‌ ನಾಯ್ಕ ಆರೋಪ

ಭಟ್ಕಳ : ಇಲ್ಲಿನ ಮುಂಡಳ್ಳಿ ಪಂಚಾಯತ್‌ ವ್ಯಾಪ್ತಿಯ ಮುಂಡಳ್ಳಿ ಪಂಚಾಯತ್‌ ಕಟ್ಟಡಕ್ಕೆ ಹೊಂದಿಕೊಂಡಿರುವ ಸ.ಹಿ.ಪ್ರಾ ಶಾಲೆ ಮುಂಡಳ್ಳಿ ನ0 -1 ಶಾಲೆಯ ಕಟ್ಟಡ ಕುಸಿತ ಕಂಡಿದೆ. ನಿರಂತರವಾಗಿ ಭಟ್ಕಳದಲ್ಲಿ ಮಳೆ ಯಾಗುತ್ತಿದೆ ಶಾಲೆಯೆ ಮಣ್ಣು ಮತ್ತು ಕಲ್ಲಿನಿಂದ ಕಟ್ಟಿದ್ದ ಹಳೆಯ ಕೋಠಡಿಯ ಗೋಡೆ ಸುಮಾರು 10 ಅಡಿ ದೂರವಿದ್ದ ಶಾಲೆಯ ಇನ್ನೊಂದು ಕಟ್ಟಡದ ಮೆಲ್ಚಾವಣಿಯ ಮೇಲೆ ಕುಸಿದು ಬಿದ್ದ ಪರಿಣಾಮ ಶಾಲೆಯ ಮೆಲ್ಚಾವಣಿ ಸಹಿತ ಕೆಲವು ಭಾಗಗಳಿಗೆ ಹಾನಿಯಾಗಿದೆ.

ಎಸ್.‌ ಡಿ.ಎಮ್‌ ಸಿ ಸದಸ್ಯ ಹಾಗೂ ಮುಂಡಳ್ಳಿ ಗ್ರಾಮ ಪಂಚಾಯತನ ಸದಸ್ಯರಾದ ರಾಜು ಎಲ್‌ ನಾಯ್ಕ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ ಗಣೇಶೊತ್ಸವದ ಸಮೀತಿ ಕಟ್ಟಡಕ್ಕೆ ಹೊಂದಿಕೊಂಡಿರುವ ಶಾಲೆಯ ಕಟ್ಟಡವು ತುಂಬ ಹಳೆಯದಾಗಿದ್ದ ಕಾರಣ ಸರ್ಕಾರ ಸುಮಾರು 10 ಲಕ್ಷರೂಗಳ ಅನುದಾನವನ್ನು ನೂತನ ಕಟ್ಟಡವನ್ನು ರಚಿಸಲು ಹಣ ಬಿಡುಗೊಳಿಸಿದ್ದ ಹಿನ್ನೆಲೆಯಲ್ಲಿ ಎಸ್ಡಿ ಎಮ್‌ ಸಿ ಅಧ್ಯಕ್ಷರು ತಮ್ಮ ಮನಸೋ ಇಚ್ಚೆ ಶಾಲಾಭಿವೃದ್ದಿ ಸಮಿತಿಯ ಸದಸ್ಯರ ಗಮನಕ್ಕೂ ಸಹ ತರದೇ ಹಳೆಯ ಕೊಠಡಿಗಳ ಮೆಲ್ಚಾವಣಿ ಹಾಗೂ ಕಿಟಕಿಗೋಡೆಗಳನ್ನು ಬೇರ್ಪಡಿಸಿ ಮಾರಿದ್ದಾರೆ ಹಾಗೂ ಕೊಠಡಿಯ ಸುತ್ತು ಗೋಡೆಗಳನ್ನು ತೆರವುಗೊಳಿಸದೆ ಬಿಟ್ಟಿದ್ದರಿಂದಾಗಿ ಸುಸಜ್ಜಿತವಾಘಿದ್ದ 10 ಅಡಿ ದೂರದ ಕಟ್ಟಡದ ಮೇಲೆ ಬಿದ್ದು ಸರಿಯಿದ್ದ ಕಟ್ಟಡವು ಸಹ ಹಾಳಾಗಿದ್ದು ಇದಕ್ಕೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಮತ್ತು ಮುಖೋಪಾದ್ಯಾಪಕರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಶಾಲೆಯ ಅನೇಕ ಕಾಮಗಾರಿಗಳು ಯಾವುದೇ ರೂಪುರೇಷೆಯಲ್ಲದ ನಡೆಯತ್ತಿವೆ ಆಧ್ಯಕ್ಷರ ಸರ್ವಾಧೀಕಾರಿ ಧೋರಣೆ ಹಾಗೂ ಮುಂಜಾಗ್ರತೆಯ ಕ್ರಮ ಆಥವಾ ಪೂರ್ವ ತಯಾರಿ ಕೈಗೊಳ್ಳದಿರುವುದರಿಂದ ಇಂತಹ ಅವಘಡಗಳು ಸಂಭವಿಸಿದೆ ಎಂದರು ನಾಳೆ ನಡೆಯುವ ಶಾಲಾಭೀವೃದ್ದಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

WhatsApp
Facebook
Telegram
error: Content is protected !!
Scroll to Top