Wednesday, March 29, 2023
Homeವಿಶೇಷ ವರದಿಭಟ್ಕಳ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಲಲಿತಾ ಹೋಮ

ಭಟ್ಕಳ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಲಲಿತಾ ಹೋಮ

ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ಪೂರ್ಣಕುಂಭಗಳಿಂದ ಸ್ವಾಗತಿಸಿದ ಭಗಿನಿಯರು

ಭಟ್ಕಳ: ತಾಲೂಕಿನ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಗಣಪತಿ ಮತ್ತು ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಲಲಿತಾ ಹೊಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ನಿಮಿತ್ತ ಮಾತಾ ಭಗನೀಯರು ಪೂರ್ಣಕುಂಭದೊಂದಿಗೆ ಭಟ್ಕಳದ ಮುಖ್ಯ ರಸ್ತೆಯ ಅರ್ಬನ್ ಬ್ಯಾಂಕ್‌ ನಿಂದ ಶ್ರೀ ದೇವಸ್ಥಾನದವರೆಗೆ ಶ್ರೀಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ಸ್ವಾಗತಿಸಿದರು ನಂತರ ಶ್ರೀಗಳಿಂದ ಲಲಿತಾ ಹೋಮದ ಪೂರ್ಣಾಹುತಿ

ಮಧ್ಯಾಹ್ನ 12-00 ರಿಂದ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ದೈವಜ್ಞ ವೆಂಕಟೇಶ ಸಂಸ್ಥೆ(ರಿ.), ಸೋನಾರಕೇರಿ, ಭಟ್ಕಳ. ಇದರ ಅಧ್ಯಕ್ಷರಾದ ಸುಧಾಕರ ಪಾಂಡುರಂಗ ಶೇಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಕುಮಾರ ಶೇಟ್, ಕಾರವಾರ , ದೈವಜ್ಞ ಮಹಿಳಾ ಸಂಘ,ಅಧ್ಯಕ್ಷರಾದ ಶ್ರೀಮತಿ ನಯನಾ ನೀಲಾವರ ಅವರು ಉಪಸ್ಥಿತರಿದ್ದರು

ಸಂಜೆ 5-00 ರಿಂದ 9-00 ಗಂಟೆಯವರೆಗೆ ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು

ಈ ಸಂದರ್ಬದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಸಮಸ್ತ ಬಂದು ಭಗಿನಿಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!