ಭಟ್ಕಳದಲ್ಲಿ ಹೆಚ್ಚಾಗುತ್ತಿರುವ ಗೊ ಸಾಗಾಟ ಹಾಗು ಗೋ ಹತ್ಯೆಗಳು

700 ಕೆ.ಜಿ ಗೊ ಮಾಂಸ ಸಾಗಾಟಕ್ಕೆ ಯತ್ನ : ಗೊ ಮಾಂಸ ವಶಕ್ಕೆ ಪಡೆದ ಪೊಲೀಸ್ ಇಲಾಖೆ

ಭಟ್ಕಳ ತಾಲೂಕಿನಲ್ಲಿ ಡೊಂಗರಪಳ್ಳಿಯ ಕ್ರಾಸ್ ಸಮೀಪ ಎಳು ಟನ್ ಅಕ್ರಮ ಗೋ ಮಾಂಸ ಸಾಗಾಟ ಮಾಡುವ ಸಂದರ್ಬದಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಏಕಾ ಎಕಿ ದಾಳಿ ನಡೆಸಿ ವಾಹನ ಸಹಿತ ಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ತಾಲೂಕಿನಲ್ಲಿ ಇತ್ತೀಚಿಗೆ ಈ ಗೋವುಗಳ ಸಾಗಾಟ ಹಾಗು ಗೋ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಶುಕ್ರವಾರ ಬೆಳಿಗ್ಗೆ 7,40 ರ ಸುಮಾರಿಗೆ ತಾಲೂಕಿನ ಡೊಂಗರಪಳ್ಳಿ ಕ್ರಾಸ್ ಸಮೀಪ 140,000 ಮೌಲ್ಯದ ಎಳು ಟನ್ ಮಾಂಸವನ್ನು ಕೆ ಎ 34 ಎ 2704 ನಂಬರಿನ ವಾಹನದಲ್ಲಿ ಅಕ್ರಮವಾಗಿ ತುಂಬಿಕೊಂಡು ಸಾಗಾಟ ಮಾಡುತ್ತಿರುವ ಸಂದರ್ಬದಲ್ಲಿ ನಗರ ಪೋಲಿಸ್ ಠಾಣಾ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಏಕಾಎಕಿ ದಾಳಿ ನಡೆಸಿದರು ಈ ಸಂದರ್ಬದಲ್ಲಿ ಈ ಸಂದರ್ಬದಲ್ಲಿ ವಾಹನ ಚಾಲಕ ಭಟ್ಕಳದ ಮೂಸಾ ನಗರದ ಮುಜಾಪರ್ ಹುಸೆನ್ ಪಕ್ರು ಇವರು ವಾಹನವನ್ನು ಬಿಟ್ಟು ಓಡಿಹೊಗಿದ್ದಾರೆ ಎಂದು ಪೊಲಿಸ್ ಮೂಲದಿಂದ ತಿಳಿದು ಬಂದಿದೆ . ಈ ಬಗ್ಗೆ ಭಟ್ಕಳ ಉಪ ವಿಬಾಗದ ಪೊಲೀಸ್ ಉಪ ಅಧಿಕ್ಷಕರಾದ ಶ್ರೀ ಕಾಂತ ಕೆ ದೂರನ್ನು ನೀಡಿರುತ್ತಾರೆ ಆರೋಪಿತರ ಮೇಲೆ The Karnataka prevention of slaughter and preservation of cattle ordinance 2020 ಹಾಗು ಮೊಟಾರ್ ಕಾಯ್ದೆ 192 ಮತ್ತು ಐ.ಪಿ.ಸಿ 429 ಸಹಿತ ಐಪಿಸಿ 43 ದಾಖಲಿಸಲಾಗಿದೆ ನಗರ ಪೊಲೀಸ್ ಠಾಣೆಯ ಪಿ ಎಸ್ ಐ ದಿವಾಕರ್ ರೈ ಅವರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ ನಗರ ಪೊಲಿಸ್ ಠಾಣೆಯ ಅಧಿಕಾರಿಗಳ ಹಾಗು ಸಿಬ್ಬಂದಿಗಳ ಈ ಕ್ಷೀಪ್ರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ತಾಲೂಕಿನಲ್ಲಿ ನಡೆಯುತ್ತಿರುವ ಗೊ ಸಾಗಾಟ ಹಾಗು ಗೊ ಮಾಂಸ ಸಾಗಾಟದ ಬಗ್ಗೆ ವಿಶ್ವನಾಥ ಮಹಾಲೆ ಮಾತನಾಡಿ ತಾಲೂಕಿನಲ್ಲಿ ಅಕ್ರಮ ಗೊ ಸಾಗಾಟ ಗೊ ಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ ಇದು ನಡೆಯ ಬಾರದು ಪೊಲಿಸ್ ಇಲಾಖೆ ಈ ಬಗ್ಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ಗೋವು ಸಾಗಾಟ ಗೊ ಮಾಂಸ ಸಾಗಾಟದ ಬಗ್ಗೆ ಗಮನಹರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top