ಮೂಡ ಭಟ್ಕಳದಲ್ಲಿ ಯಶಸ್ವಿನಿ ಮಹಿಳಾ ಮಂಡಳ ಉದ್ಗಾಟನೆ

ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಂದೆ ಕಾರ್ಯಕ್ರಮ ಉದ್ಗಾಟಿಸಿದ ಗೊವಿಂದ ನಾಯ್ಕ

ಭಟ್ಕಳ: ತಾಲೂಕಿನ ಮೂಡ ಭಟ್ಕಳದಲ್ಲಿ ಯಶಸ್ವಿನಿ ಮಹಿಳಾ ಮಂಡಳವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಅವರು ಉದ್ಗಾಟಿಸಿದರು

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ಇಂದು ನಮ್ಮ ದೇಶದಲ್ಲಿ ಮಹಿಳೆಯರು ಪುರಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲೂ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ನಾವು ಮಹಿಳೆಯರಿಗೆ ಗೌರವವನ್ನು ಕೊಡುವುದು ನಮ್ಮ ಕರ್ತವ್ಯದಲ್ಲಿ ಒಂದಾಗಿದೆ ಇಂದು ನಮ್ಮ ಅಸ್ತಿತ್ವ ಇದೆ ಎಂದಾದರೆ ಅದು ಹೆಣ್ಣಿನಿಂದ ಅವಳು ನಮ್ಮ ಹುಟ್ಟಿನಿಂದ ತಾಯಿಯಾಗಿ ಸಹೋದರಿಯಾಗಿ ಹೆಂಡತಿಯಾಗಿ ಸಾವಿನವರಗೂ ಜೊತೆಯಲ್ಲಿದ್ದು ನಮ್ಮನ್ನು ಪೋಷಿಸುತ್ತಾಳೆ ಹೆಣ್ಣನ್ನು ಗೌರವಿಸುವುದು ಪ್ರತಿಯೋಬ್ಬನ ಕರ್ತವ್ಯವಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷರಾದ ಗೊವಿಂದ ನಾಯ್ಕ. ಭಟ್ಕಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾ ಶ್ರೀನಿವಾಸ ನಾಯ್ಕ ಮತ್ತು ಮುಟ್ಟಳ್ಳಿ ಪಂಚಾಯತ್ ಅಧ್ಯಕ್ಷರಾದ ಶೆಷಗೀರಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು .

ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಮಹಿಳಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು ಈ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದಂತ ಗೀತಾ ಶಿರೂರು ಮೇಡಂ ಹಾಗೂ ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಅಂಗನವಾಡಿ ಶಿಕ್ಷಕಿಯಾದ ವಾಣಿ ನಾರಾಯಣ ನಾಯ್ಕ ನೇರವೇರಿಸಿ ಕೊಟ್ಟರು

. ಕಾರ್ಯಕ್ರಮದ ಅಧ್ಯಕ್ಷತೆ ಮಹಿಳಾಮಂಡಲದ ಅಧ್ಯಕ್ಷರಾದ ಸುಶೀಲಾ ಭಾಸ್ಕರ್ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಟ್ಟಳ್ಳಿ ಪಂಚಾಯತ್ ಅಧ್ಯಕ್ಷರಾದ ಶೇಷಗಿರಿ ನಾಯ್ಕ, ಭಟ್ಕಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯ್ಕ, ಮೂಡ ಭಟ್ಕಳ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಹೆಗಡೆ, ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಮುಟ್ಟಳ್ಳಿ ಪಂಚಾಯಿತಿನ ಸದಸ್ಯರಾದ ರಾಜೇಶ್ ಫರ್ನಾಂಡಿಸ್, ಲಕ್ಷ್ಮಿ ನಾರಾಯಣ ನಾಯ್ಕ್ ಇವರುಗಳು ವೇದಿಕೆಯಲ್ಲಿ ಉಪಸ್ಥಿರಿದರು.

WhatsApp
Facebook
Telegram
error: Content is protected !!
Scroll to Top