Wednesday, March 29, 2023
Homeಭಟ್ಕಳಭಟ್ಕಳ ತಾಲೂಕ 10 ನೇ ಕನ್ನಡ ಸಾಹಿತ್ಯ ಸಮ್ಮೆಳನ ಸಂಪನ್ನ

ಭಟ್ಕಳ ತಾಲೂಕ 10 ನೇ ಕನ್ನಡ ಸಾಹಿತ್ಯ ಸಮ್ಮೆಳನ ಸಂಪನ್ನ

ಕನ್ನಡ ರಥಯಾತ್ರೆಯಲ್ಲಿ ಪಾಲ್ಗೋಂಡ ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳದ ಮಲ್ಲಿಗೆ ರಕ್ತಸಿಕ್ತವಾಗಿರುವುದು ಬೇಸರದ ಸಂಗತಿ-ಸಾಹಿತಿ ಶ್ರೀಪಾದ ಶೆಟ್ಟಿ  ಕಳವಳ

ಭಟ್ಕಳ: ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುರ್ಡೇಶ್ವರದ ಆರ್. ಎನ್. ಶೆಟ್ಟಿ ಸಭಾಭವನದ ಡಾ. ಆರ್. ಎನ್. ಶೆಟ್ಟಿ ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅವರು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಭಟ್ಕಳದ ಜನತೆ ಅತ್ಯಂತ ಪ್ರೀತಿ, ವಿಶ್ವಾಸಕ್ಕೆ ಸಾಕ್ಷಿಯಾದವರು. ವೈರತ್ವವನ್ನು ವೈರತ್ವದಿಂದ ಮುಗಿಸಲು ಸಾಧ್ಯವಾಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವೈರತ್ವ ಹೆಚ್ಚುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಭಟ್ಕಳದ ಮಲ್ಲಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಆದರೆ ಭಟ್ಕಳ ಮಲ್ಲಿಗೆ ರಕ್ತಸಿಕ್ತವಾಗಿರುವುದು ಬೇಸರದ ಸಂಗತಿ. ಇದು ಹೋಗಬೇಕು ಎಂದರು. ಜಿಲ್ಲೆಯ ಯಾವುದೇ ಸಾಹಿತಿಗೆ ಪಂಪ ಪ್ರಶಸ್ತಿಯನ್ನು ನೀಡದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪಂಪ ಪ್ರಶಸ್ತಿಯನ್ನು ಜಿಲ್ಲೆಯ ಸಾಹಿತಿಯೋರ್ವರಿಗೆ ಕೊಡುವಂತೆ ಚಳವಳಿ ನಡೆಸುವುದು ಅನಿವಾರ್ಯ ಎಂದರು.

ನಂತರ ಮಾನಾಸುತ ಶಂಭು ಹೆಗಡೆ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮಾತನಾಡಿ ಸಾಹಿತ್ಯದ ಶಕ್ತಿ ಅಪಾರವಾದುದು, ಸಾಹಿತ್ಯವು ಮನಸ್ಸಿನ ಆಘಾತವನ್ನು ಗುಣ ಪಡಿಸಬಲ್ಲುದಾಗಿದೆ. ನಿರಂತರ ಪುಸ್ತಕಗಳ ಓದಿನಿಂದ ಅನುಭವದ ಬೇರುಗಳು ಬಲಗೊಳ್ಳುತ್ತದೆ. ಎಲ್ಲರ ಬದುಕನ್ನು ಎತ್ತರಕ್ಕೇರಿಸುವ ಜವಾಬ್ದಾರಿ ಸಾಹಿತಿಗಳಿಗೆ ಇದೆ. ನಾವು ಸಾಹಿತ್ಯವನ್ನು ಪ್ರೀತಿಸಿದರೆ ಸಾಹಿತ್ಯ ನಮ್ಮ ವಶವಾಗುತ್ತದೆ. ಈ ಪ್ರೀತಿಯನ್ನು ಮನುಷ್ಯರು, ಪಶು ಪಕ್ಷಿಗಳಲ್ಲಿಯೂ ಕಾಣಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಸ೦ರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇದರ ಸದಸ್ಯೆ ಶಿವಾನಿ ಶಾಂತಾರಾಮ, ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ. ಎಸ್, ತಹಶೀಲ್ದಾರ್ ಅಶೋಕ್ ಭಟ್, ಸಾಹಿತಿ ಡಾ. ಆರ್.ವಿ. ಸರಾಫ್, ಮುರುಡೇಶ್ವರ ಗ್ರಾಮೀಣ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್. ಕಾಮತ್, ಮುರುಡೇಶ್ವರ ಲಯನ್ಸ್ ಕ್ಲಬ್‌ ಅಧ್ಯಕ್ಷ ಎಮ್.ವಿ. ಹೆಗಡೆ, ಮಾವಳ್ಳಿ-2 ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.

ಭಟ್ಕಳ ಕ. ಸಾ. ಪ. ಅಧ್ಯಕ್ಷ ಗಂಗಾಧರ ನಾಯ್ಕ ನಾಡ ಧ್ವಜಾರೋಹಣ ನೆರವೇರಿಸಿದರು. ಪ್ರತಿಭಾ ಕರ್ಕಿಕರ ಮತ್ತು ಶಿಕ್ಷಕ ವೃಂದ ನಾಡಗೀತೆ ಹಾಡಿದರು. ಎಮ್.ಪಿ. ಭಂಡಾರಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಪಾಂಡುರಂಗ ಅಳ್ವೆಗದ್ದೆ ವಂದಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಮಂಜುಳಾ ಶಿರೂರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!