Wednesday, March 29, 2023
Homeವಿಶೇಷ ವರದಿದಿಟ್ಟ ನಿರ್ಬಿತ ವರದಿಗಾರ ಮಾಧ್ಯಮ ಸ್ನೇಹಿತ ರಾಘವೇಂದ್ರ ಭಟ್ಟ ಇನ್ನಿಲ್ಲಾ

ದಿಟ್ಟ ನಿರ್ಬಿತ ವರದಿಗಾರ ಮಾಧ್ಯಮ ಸ್ನೇಹಿತ ರಾಘವೇಂದ್ರ ಭಟ್ಟ ಇನ್ನಿಲ್ಲಾ

ತನ್ನ ಕೊನೆಗಾಲದವರೆಗೂ ತನ್ನ ಜೀವನವನ್ನೆ ಪತ್ರಿಕೋಧ್ಯಮಕ್ಕೆ ದಾರೆಯೆರೆದ ರಾಘು ಭಟ್ಟ ಜಾಲಿ ನೈಪತ್ಯಕ್ಕೆ

ಪ್ರಜಾವಾಣಿ ಪತ್ರಿಕೆಯ ಮಾಜಿ ವರದಿಗಾರರು ಹಾಗೂ ಹಾಲಿ ಕನ್ನಡ ಜನಾಂತರಂಗ ಪತ್ರಿಕೆಯ ವರದಿಗಾರರಾದ ರಾಘವೇಂದ್ರ ಭಟ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ.

ತಮ್ಮ ಪತ್ರಿಕಾ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡು ಮೆಲದ್ದ ಪತ್ರಕರ್ತರು ರಾಘವೇಂದ್ರ ಭಟ್ಟ ಜಾಲಿ ಆಗಿರುತ್ತಾರೆ ಇವರು ಹಟವಾದಿ ಪತ್ರಕರ್ತರು ಎಂದರೆ ತಪ್ಪಾಗಲಿಕಿಲ್ಲಾ ತಮ್ಮ ವೃತ್ತಿ ಜಿವನದಲ್ಲಿ ಹಲವಾರು ಪ್ರತಿಷ್ಟರ ವಿರುದ್ದ ತಮ್ಮ ಬರವಣಿಗೆಯ ಮೂಲಕ ಬೆವರು ಹರಿಸಿ ಬೆಚ್ಚಿಬಿಳುವಂತೆ ಮಾಡಿರುವ ಪ್ರತ್ರಕರ್ತರಲ್ಲಿ ರಾಘವೇಂದ್ರ ಭಟ್ಟ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುತ್ತಾರೆ ಇವರು ಇಂದು ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡು ಪತ್ರಿಕೋದ್ಯಮ ಎಂಬ ಕುಟುಂಬಕ್ಕೆ ತುಂಬಲಾದರ ನಷ್ಟವನ್ನು ಉಂಟುಮಾಡಿದ್ದಾರೆ ಇವರ ಮರಣದ ಪ್ರಯುಕ್ತ

ಭಟ್ಕಳ ತಾಲ್ಲೂಕಿನ ಪತ್ರಕರ್ತರು ಹಾಗೂ ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಲ್ಲಿಸಿದರು
ರಾಘವೇಂದ್ರ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಂತಾಪ ಸೂಚಿಸಲಾಯಿತು.

ಈ ಸಂದರ್ಬದಲ್ಲಿ ಪತ್ರಕರ್ತರಾದ ವಿಷ್ಣು ದೇವಡಿಗ, ಮನಮೋಹನ ನಾಯ್ಕ, ರಾಘವೇಂದ್ರ ಹೆಬ್ಬಾರ, ಮೋಹನ ನಾಯ್ಕ, ಸತೀಶಕುಮಾರ, ಮುಬಾಶ್ಯಿರ ಹಲ್ಲಾರೆ,ಶಂಕರ ನಾಯ್ಕ, ಅರ್ಜುನ ಮಲ್ಯ, ತಾ.ಪಂ. ಸಿಬ್ಬಂದಿ ಕರಿಯಪ್ಪ ನಾಯ್ಕ, ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ದೇವಿದಾಸ ಆಚಾರ್ಯ ಮುಂತಾದವರು ರಾಘವೇಂದ್ರ ಭಟ್ಟ ಅವರ ನಿಧನ ನೋವು ತಂದಿರುವುದರ ಜೊತೆಗೆ ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತ ಉದಯ ನಾಯ್ಕ, ಶೈಲೇಶ ವೈದ್ಯ, ರಾಜಕುಮಾರ ಶೆಟ್ಟಿ, ಪ್ರಮೋದ ಜೋಷಿ, ಸತೀಶ ಆಚಾರಿ, ವೆಂಕಟೇಶ ಶೆಟ್ಟಿ, ದೇವೇಂದ್ರ ನಾಯ್ಕ, ವೀರೇಂದ್ರ ಜೈನ್, ನಾಗೇಂದ್ರ ನಾಯ್ಕ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!