Wednesday, March 29, 2023
Homeಭಟ್ಕಳಅಭಿವೃದ್ದಿಯೇ ನಮ್ಮ ಗುರಿ ಸಿದ್ದಾಪುರದಲ್ಲಿ ಮುಖ್ಯಮಂತ್ರಿ ಹೇಳಿಕೆ

ಅಭಿವೃದ್ದಿಯೇ ನಮ್ಮ ಗುರಿ ಸಿದ್ದಾಪುರದಲ್ಲಿ ಮುಖ್ಯಮಂತ್ರಿ ಹೇಳಿಕೆ

ಸಿದ್ದಾಪುರ:- ಹಿಂದಿನ ಭಾರತಕ್ಕಿಂತ ಇಂದಿನ ಭಾರತ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಬದಲಾಗುತ್ತಿದೆ. ಕೆಲವು ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ ಜಿಡ್ಡುಗಟ್ಟಿತ್ತು. ಆದರೆ ಇಂದು ಅಭಿವೃದ್ಧಿಗೆ ವೇಗ ಕೊಟ್ಟಿದ್ದೇವೆ. ದೇಶದಲ್ಲಿ ಯಾವೆಲ್ಲಾ ಅಭಿವೃದ್ಧಿ ಕೆಲಸ ಆಗುವುದಿಲ್ಲ ಎಂದುಕೊಂಡಿದ್ದೆಯೋ ಇಂದು ಅವೆಲ್ಲವೂ ಆಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ನೆಹರೂ ಮೈದಾನದಲ್ಲಿ ವಿವಿಧ ಇಲಾಖೆಗಳ 55 ಕೋಟಿ ರೂಗಳ ಕಾಮಗಾರಿ ಶಂಕುಸ್ಥಾಪನೆ/ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಇಂದು ದೇಶದಲ್ಲಿ ಸರ್ವೋದಯ ಮತ್ತು ನವೋದಯ ಎರಡೂ ಇದೆ. ಆಡಳಿತ, ಉದ್ಯೋಗದಲ್ಲಿ ವಿಜ್ಞಾನದ ಬಳಕೆ ಮಾಡುವ ಬದಲಾವಣೆಯ ಪರ್ವ ಇದೆ. ಅಮೇರಿಕಾ, ಐರೋಪ್ಯ ರಾಷ್ಟ್ರಗಳೆ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಈ ಸಮಯದಲ್ಲಿ ೬.೫ ಅಭಿವೃದ್ಧಿ ದರ ದಾಖಲಿಸುವುದು ನೋಡಿ ಹಣಕಾಸಿನ ವಲಯದಲ್ಲಿರುವವರು ಆಶ್ಚರ್ಯ ಪಡುವಂತಾಗಿದೆ.
ವಿದೇಶಿ ಬಂಡವಾಳದಲ್ಲಿ ನಂ: ೧ ಆಗಿದ್ದೇವೆ. ಆರೋಗ್ಯ ಶಿಕ್ಷಣ, ಪೌಷ್ಟಿಕ ಆಹಾರ, ಬಡತನ ನಿರ್ಮೂಲನೆಯಲ್ಲಿ ಕೆಲವೆಡೆ ಅಸಮಾನತೆ ಇದೆ. ಈ ವರ್ಷ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ದೊರೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಇನ್ಫಾ ಸ್ಟ್ರಕ್ಚರ್ ನೀಡಿ, ವೈದ್ಯರು, ನರ್ಸ್ ಗಳನ್ನು ನೇಮಕಮಾಡಿ ಅಭಿವೃದ್ಧಿ ಮಾಡಲಾಗಿದೆ. ಡಯಾಲಿಸಿಸ್ ಸೆಂಟರ್, ಕ್ಯಾನ್ಸರ್ ಕಿಮೊಥೆರಪಿ ಸೆಂಟರ್ ದ್ವಿಗುಣಗೊಳಿಸಿದ್ದೇನೆ, ಒಂದೇ ವರ್ಷದಲ್ಲಿ ೮೦೦೦ ಕೊಠಡಿ ಕಟ್ಟುವ ಮೂಲಕ ದಾಖಲೆ ಮಾಡಲಾಗಿದೆ. ಬಜೆಟಿನ ೧೦% ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ.
ಇವೆಲ್ಲವನ್ನು ಅರಿತು ಕೆಲವು ಯೋಜನೆಗಳನ್ನು ಜಾರಿಮಾಡಲಾಗಿದೆ. ಎಂದು ಹೇಳಿದರು

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಗೋವಿಂದ ಕಾರಜೋಳ ಶಾಸಕ ದಿನಕರ್ ಶೆಟ್ಟಿ, ಜಿಲ್ಲಾಧಿಕಾರಿ ಪ್ರಭುಲಿಂಗ ಅವಳಿಕಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!