Wednesday, March 29, 2023
Homeಭಟ್ಕಳಮಾಜಿ ಶಾಸಕ ಮಂಕಾಳ ವೈದ್ಯರು ತಂದ 900 ಕೊಟಿ ಅನುದಾನಕ್ಕೆ ಸುನಿಲ್ ನಾಯ್ಕ...

ಮಾಜಿ ಶಾಸಕ ಮಂಕಾಳ ವೈದ್ಯರು ತಂದ 900 ಕೊಟಿ ಅನುದಾನಕ್ಕೆ ಸುನಿಲ್ ನಾಯ್ಕ ಗುದ್ದಲಿ ಪೂಜೆ ಮಾಡಿ ಬೀಗುತ್ತಿದ್ದಾರೆ ವೆಂಕಟೇಶ ನಾಯ್ಕ ಆಕ್ರೋಶ

ಭಟ್ಕಳ: ತಾಲೂಕಿನಲ್ಲಿ ನಾಗಬನ ಒಂದಕ್ಕೆ ಹಿಂದಿ‌ನ ಚುನಾವಣೆ ಸಂದರ್ಬದಲ್ಲಿ ಗೊ ಮಾಂಸವನ್ನು ಹಾಕಲಾಗಿತ್ತು ಬಿಜೆಪಿ ಅಧಿಕಾರ ಹಿಡಿದು ಈಗ ಪುನಃ ಮರುಚುನಾವಣೆ ಬಂದಿದೆ ಯಾಕೆ ಈ ವರೆಗೂ ನಾಗಭನಕ್ಕೆ ಗೊ ಮಾಂಸ ಹಾಕಿದವರನ್ನು ಹಿಡಿಯಲಿಲ್ಲ ಇದರಲ್ಲೆ ಸಾಭಿತಾಗುತ್ತದೆ ನಾಗಬನಕ್ಕೆ ಗೊ ಮಾಂಸ ಹಾಕಿದವರೆ ಇವರ ಕಡೆಯವರು ಎಂದು ತಾಲೂಕಿನ ಕಾಂಗ್ರೇಸ್ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ಅವರು ಭಟ್ಕಳ ಕಾಂಗ್ರೇಸ್ ಕಛೇರಿಯಲ್ಲಿ ಕರೆದ ಸುದ್ದಿಗೊಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ

2017ರಲ್ಲಿ ಮಂಕಾಳ ವೈದ್ಯರವರು ಶಾಸರಾಗಿದ್ದ ಅವಧಿಯಲ್ಲಿ ನಾಗಬನದ ಅಭಿವೃದ್ಧಿಗಾಗಿ ಸರ್ಕಾರದಿಂದ 7,504 ರೂ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಆ ಕುರಿತು ಸರ್ಕಾರದ ಆದೇಶನವನ್ನು ನೀಡಿದೆ. ಆ ಸಂದರ್ಭದಲ್ಲಿ ಈ ನಾಗಬನಕ್ಕೆ ಸಂಬಂಧಿಸಿದಂತೆ ಕೆಲವರು ನಾಗಬನಕ್ಕೆ ಇಟ್ಟೂ ಮೂರು ಮುಕ್ಕಾಲು( 01-789 ಜಾಗವಿದ್ದು ಅದರ ಸಂಪೂರ್ಣ ಸರ್ವನಡೆಸಿ ಸಂಪೂರ್ಣ ಜಾಗವನ್ನು ನಮ್ಮ ಆಧೀನಕ್ಕೆ ಬಿಟ್ಟುಕೊಡುವವರೆಗೆ ಯಾವುದೇ ಅವೃದ್ಧಿಕಾರ್ಯ ನಡೆಸಬಾರದು ಎಂದು ಆಕ್ಷೇಪ ಎತ್ತಿದ್ದರಿಂದ ನಾಗಬನದ ಅಭಿವೃದ್ಧಿ ಕಾರ್ಯವು ಅಲ್ಲಿಗೆ ಸ್ಥಗಿತಗೊಂಡಿತು. ಇಲ್ಲದಿದ್ದಲ್ಲಿ ಅಂದಿನ ಶಾಸಕರಾಗಿದ್ದ ಮಂಕಾಳ ವೈದ್ಯರವರ ಅವಧಿಯಲ್ಲಿಯೇ ನಾಗಬನದ ಅಭಿವೃದ್ಧಿಕಾರ್ಯ ಸಂಪೂರ್ಣವಾಗಿ ನಡೆಯುತ್ತಿತ್ತು, ಆದರೆ, ಮಂಕಾಳ ವೈದ್ಯರು ಎಲ್ಲಿಯೂ ಈ ವಿಷಯವನ್ನ ತನ್ನ ರಾಜಕೀಯದ ಬೆಳವಣಿಗೆಗಾಗಿ ಬಳಸಿಕೊಂಡಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಹಿಂದೆ ಎ.ಸಿಯವರ ನೇತೃತ್ವದಲ್ಲಿ ಸಭೆ ನಡೆದಾಗ ಅಂದಿನ ಸಭೆಯಲ್ಲಿ ಹಾಜರಿದ್ದ ಹಾಲಿಶಾಸಕರಾದ ಸುನೀಲನಾಯ್ಕರುತಾನು ನಾಗಬನದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನವನ್ನ ಮಂಜೂರಿ ಮಾಡಿಸಿದ್ದೇನೆ. ಈಗ ನಾಗಬನದ ಅಭಿವೃದ್ಧಿಗೆ ಅವಕಾಶ ನೀಡದಿದ್ದಲ್ಲಿ ಮಂಜೂರಾದ ಅನುದಾನ ಸರ್ಕಾರಕ್ಕೆ ವಾಪಾಸ ಹೋಗುತ್ತದೆ ಎನ್ನುವ ಹೇಳಿಕೆಯನ್ನ ನೀಡಿದ್ದರು, ಹೀಗಿರುವಾಗ ಈಗ ಕೆಲವರು ಹಾಲಿ ಶಾಸಕರು ತನ್ನ ಸ್ವಂತ ಹಣದಿಂದ ನಾಗಬನವನ್ನು ಕಟ್ಟಿಸಿದ್ದಾರೆ. ಎನ್ನುವ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಹೀಗಾಗಿ ಹಾಲಿ ಶಾಸಕರು ತಮ್ಮ ಸ್ವಂತ ಹಣದಿಂದ ನಾಗಬನವನ್ನು ಕಟ್ಟಿಸಿದ್ದಾರೋ, ಅಥವಾ ಸರ್ಕಾರದ ಅನುದಾನದಿಂದ ಕಟ್ಟಿಸಿದ್ದಾರೋ ಎನ್ನುವುದನ್ನ ಅವರೇ ಸ್ಪಷ್ಟಪಡಿಸಬೇಕು. ನಾಗಬನದ ಅಭಿವೃದ್ಧಿಯಲ್ಲಿಯೂ ಕೂಡ ಶಾಸಕ ಸುನೀಲ ನಾಯ್ಕರು ಸುಳ್ಳು ಹೇಳಿ ಜನರವನ್ನು ದಾರಿತಪ್ಪಿಸುತ್ತಿದ್ದಾರೆನ್ನು ಆಕ್ಷೇಪಗಳಿದೆ.

ಮೊನ್ನೆ ದಿನ ಸಿ.ಟಿ.ರವಿಯವರು ಭಟ್ಕಳಕ್ಕೆ ಬಂದಾಗ ಶಾಸಕ ಸುನೀಲ ನಾಯ್ಕರ ಮನೆಯಲ್ಲಿ ಮೀನುಮಾಂಸವನ್ನು ತಿಂದಿದ್ದೇನೆ ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ ಮತ್ತು ನಾಗಬನದ ಹೊರಗಡೆಯಿಂದ ಕೈಮುಗಿದ್ದು ಬಂದಿದ್ದೇನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಅದೇದಿನ ಭಟ್ಕಳದ ಪ್ರಸಿದ್ಧ ಕರಿಭಂಟ ದೇವಸ್ಥಾನದ ಒಳಗೆ ಹೋಗಿ ದೇವರಿಗೆ ಕೈಮುಗಿದಿದ್ದಾರೆ. ಹೀಗಿದ್ದಾಗ ಹಿಂದೂಗಳಿಗೆ ಆದೇವರು ಈ ದೇವರು ಎನ್ನುವ ತಾರತಮ್ಯವಿದೇಯೇ, ಶಾಸಕ ಸುನೀಲ ನಾಯ್ಕ ಇಲ್ಲಿಯೂ ಕೂಡ ಟಿ ರವಿಯವರು ಗೋಬಿಮಂಚೂರಿ ತಿಂದಿದ್ದಾರೆ ಎನ್ನು ಸುಳ್ಳನ್ನು ಹೇಳಿ ದೇವರನ್ನೂ ಕೂಡ ವಂಚಿಸುತ್ತಿದ್ದಾರೆ.

ಮಂಕಾಳ ವೈದ್ಯರು. ಬಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 80ರಷ್ಟು ದೇವಸ್ಥಾನ, ನಾಗಬನ, ಮಠ, ಮಂದಿರಗಳಿಗೆ ಸಹಾಯಧನವನನ್ನು ನೀಡಿದ್ದರು ಕೂಡ ಎಲ್ಲಿಯೂ ಅದನ್ನು ರಾಜಕೀಯಕ್ಕಾಗಿ ಬಳಸಿಕೊಂಡಿಲ್ಲ. ಆಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಅತೀ ಹೆಚ್ಚು ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಹೀಗಾಗಿ ನಕಲಿ ಬಿಜೆಪಿಗರಿಂದ ಹಿಂದೂತ್ವದ ಪಾಠವನ್ನು ಮಂಕಾಳ ವೈದ್ಯರು ಕಲಿಯಬೇಕಾಗಿಲ್ಲ. ಎಂದು ಆಕ್ರೊಶವನ್ನು ವ್ಯಕ್ತಪಡಿಸಿದರು

ಈ ಸಂದರ್ಬದಲ್ಲಿ ಕಾಂಗ್ರೇಸ್ ಮುಖಂಡರು ಪತ್ರಕರ್ತರು ಆದ ವಿಷ್ಣು ದೇವಾಡಿಗ ,ಕಾರ್ಯದರ್ಶಿ ಸುರೇಶ ನಾಯ್ಕ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ ತಾ ಪ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಜಾಲಿ ಭ್ಯಾಂಕ್ ಅಧ್ಯಕ್ಷ ಮಂಜಪ್ಪ ನಾಯ್ಕ ಮಂಜುನಾಥ ನಾಯ್ಕ A P M C ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ ದೆವಿದಾಸ ಆಚಾರ್ಯ ರಮೇಶ ಗೊಂಡ ರಮೇಶ ನಾಯ್ಕ , ಎಸ್ ಟಿ ವಿಬಾಗ ರಾಜು ಗೊಂಡ ಕಾರ್ಮಿಕ ವೆಂಕಟ್ರಮಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!