Wednesday, March 29, 2023
Homeಭಟ್ಕಳಕನ್ನಡ ಸಾಹಿತ್ಯ ಸಮ್ಮೆಳನದ ಪ್ರಯುಕ್ತ ಸುದ್ದಿಗೋಷ್ಟಿ

ಕನ್ನಡ ಸಾಹಿತ್ಯ ಸಮ್ಮೆಳನದ ಪ್ರಯುಕ್ತ ಸುದ್ದಿಗೋಷ್ಟಿ

ಭಟ್ಕಳ ತಾಲೂಕಾ ೧೦ನೇ ಸಾಹಿತ್ಯ ಸಮ್ಮೇಲನವು ಮಾನಾಸುತ ಶಂಭು ಹೆಗಡೆ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ: ಗಂಗಾಧರ ನಾಯ್ಕ

ಮುರುಡೇಶ್ವರದಲ್ಲಿ ಮಾರ್ಚ ಒಂದನೇ ತಾರಿಕಿನಂದು ಭಟ್ಕಳ ತಾಲೂಕಾ ೧೦ನೇ ಸಾಹಿತ್ಯ ಸಮ್ಮೇಳನ.
ಭಟ್ಕಳ : ಭಟ್ಕಳ ತಾಲೂಕಾ ೧೦ನೇ ಸಾಹಿತ್ಯ ಸಮ್ಮೇಲನವು ಇಲ್ಲಿನ ಮುರ್ಡೇಶ್ವರದ ಡಾ.ಆರ್.ಎನ್.ಶೆಟ್ಟಿ ಸಭಾಭವನದ ಡಾ.ಆರ್.ಎನ್.ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ. ಮಾನಾಸುತ ಶಂಭು ಹೆಗಡೆ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರೀಷತ್ತಿನ ಅಧ್ಯಕ್ಷರಾದ ಗಂಗಾಧರ ನಾಯ್ಕ ಹೇಳಿದರು

ಅವರು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಸಮ್ಮೇಳನದ ದಿನ ಮುಂಜಾನೆ ೮ ಗಂಟೆಗೆ ರಾಷ್ಟಧ್ವಜಾರೋಹಣವನ್ನು ಶ್ರೀಮತಿ ಮಾದೇವಿ ಮೊಗೇರ್ ಗ್ರಾ.ಪಂ.ಮಾವಳ್ಳಿ ೧ ಅಧ್ಯಕ್ಷರು, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಡ ದ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಲಿದ್ದಾರೆ. ಈ ವೇಳೆ ರಾಘವೇಂದ್ರ ನಾಯ್ಕ, ಅಧ್ಯಕ್ಷರು ಮಾವಳ್ಳಿ ೨, ಉಪಾಧ್ಯಕ್ಷೆ ನಾಗರತ್ನ ಮೊಗೇರ್, ಗ್ರಾ.ಪಂ.ಮಾವಳ್ಳಿ ೧ರ ಉಪಾಧ್ಯಕ್ಷೆ ಸಬೀನಾ ಅಬ್ದುಲ ಸತ್ತಾರ ಸಯ್ಯದ ಉಪಸ್ಥಿತರಿರಲಿದ್ದಾರೆ. ನಂತರ ೮.೩೦ಕ್ಕೆ ಜನಪದ ಕಲಾ ತಂಡಗಳು, ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮುರ್ಡೇಶ್ವರದ ಜನತಾ ವಿದ್ಯಾಲಯದಿಂದ ಹೊರಟು ಆರ್.ಎನ್.ಎಸ್. ಸಭಾಂಗಣವನ್ನು ತಲುಪಲಿದೆ. ಮೆರವಣಿಗೆಗೆ ಪೋಲೀಸ ಉಪಾಧೀಕ್ಷಕ ಶ್ರೀಕಾಂತ ಕೆ ಚಾಲನೆ ನೀಡಲಿದ್ದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಶಂಕ್ರಳ್ಳಿ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ ಉಪಸ್ಥಿತರಿರಲಿದ್ದಾರೆ. ೧೦ಗಂಟೇಗೆ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಶ್ರೀಪಾಧ ಶೆಟ್ಟಿ ನೆರವೇರಿಸಲಿದ್ದು , ಶಾಸಕ ಸುನಿಲ ನಾಯ್ಕ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯನುಡಿಗಳನ್ನಾಡಲಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಶ್ರೀಪಾಧ ಕಾಮತ್ ದ್ವಾರವನ್ನು, ಕಾರ್ಮಿಕ ಇಲಾಖೆೆಯ ರಾಜ್ಯಪ್ರತಿನಿಧಿ ಸದಸ್ಯೆ ಶಿವಾನಿ ಶಾಂತಾರಾಮ ಕಿಶೋರ ನಾಯ್ಕ ದ್ವಾರವನ್ನು ಹಾಗೂ ಸಹಾಯP ಆಯುಕ್ತೆ ಮಮತಾ ದೇವಿ ಜಿ.ಎಸ್. ಶ್ರೀ ಮಂಜುನಾಥ ದೇವಾಡಿಗ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಮುಡೇಶ್ವರ ಗ್ರಾಮೀನ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್.ಕಾಮತ್ ಚಿತ್ರಕಲಾ ಪ್ರದರ್ಶನವನ್ನು, ಹಿರಿಯ ಸಾಹಿತಿ ಡಾ.ಆರ್.ವಿ ಸರಾಫ್ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಧ್ವಜ ಹಸ್ತಾಂತರಿಸಲಿರುವ ನಿಕಟಪುರ್ವ ಸಮ್ಮೇಳನಾಧ್ಯಕ್ಷ ಶ್ರೀ ಶ್ರೀಧರ ಶೇಟ್ ಶಿರಾಲಿ, ಮುಖ್ಯ ಅತಿಥಿಗಳಾಗಿ ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಸತೀಶ ಆರ್. ಶೆಟ್ಟಿ, ತಹಸೀಲ್ದಾರ ಅಶೋಕ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ ಫರ್ನಾಮಡೀಸ್, ಜೊಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಗೌರವ ಆಮಂತ್ರಿತರಾಗಿ ಯಕ್ಷರಕ್ಷೆಯ ಐ.ಆರ್.ಭಟ್, ಲಯನ್ಸ ಕ್ಲಬ್‌ನ ಅಧ್ಯಕ್ಷ ಎಂ.ವಿ.ಹೆಗಡೆ, ಸರ್ಕಾರಿ ನೌಕರರ ಸಂWದ ಅಧ್ಯಕ್ಷ ಮೋಹನ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂWದ ಅಧ್ಯಕ್ಷ ಉಲ್ಲಾಸ ನಾಯ್ಕ, ಉಪಸ್ಥಿತರಿರಲಿದ್ದಾರೆ. ಈ ಸಂದರ್ಬದಲ್ಲಿ ಸಮ್ಮೇಲನಾಧ್ಯಕ್ಷ ಮಾನಾಸುತ ಅವರ ಪುಟ್ಟದೀಪ ಕವನ ಸಂಕಲನ, ಗಂಗಾಧರ ನಾಯ್ಕ ಅವರ ಭಾನುಭಾವ ಹನಿಗವಿತೆಗಳ ಸಂಕಲನ, ಶ್ರೀಧರ ಶೇಟ್ ಶಿರಾಲಿಯವರ ಕಾವ್ಯಜ್ಯೋತಿ ಬದುಕು ಬೆಲಗುವ ಬರಹಲ ಕೃತಿ, ಶಂಕರ ಕೆ.ನಾಯ್ಕ ಅವರ ನೆನಪುಗಳು ಕೃತಿಗಳು ಬಿಡುಗಡೆಗೊಳ್ಳಲಿವೆ. ಮಧ್ಯಾಹ್ನ ೨ ರಿಂದ ೩ಗಂಟೆಯವರೆಗೆ ವಿಚಾರಗೋಷ್ಠಿ ನಡೆಯಲಿದ್ದು. ಆರ್.ಎನ್.ಎಸ್.ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಟ್ಕಳದ ಐತಿಹಾಸಿಕ ಹಿನ್ನೆಲೆಯ ಕುರಿತು ಡಾ.ಭಾಗೀರತಿ ನಾಯ್ಕ ಹಾಗೂ ಬಟ್ಕಳ ತಾಲೂಕಿನ ಪ್ರವಾಸೊದ್ಯಮದ ಅಭಿವೃದ್ದಿಯ ಸಾಧ್ಯತೆ ಮತ್ತು ಸವಾಲುಗಳ ಕುರಿತು ವಿರೇಂದ್ರ ಶಾನಭಾಗ ವಿಷಯಮಂಡನೆ ಮಾಡಲಿದ್ದಾರೆ. ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರಿನಾಥ ಪೈ, ಆರ್.ಎನ್.ಎಸ್.ಪದವಿ ಕಾಲೇಜಿನ ಪ್ರಾಂಶುಪಾಲ ಸಂಜಯ ಕೆ.ಎಸ್., ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಬ್ಬಿರ ದಫೇದಾರ ಇವರ ಗೌರವ ಉಪಸ್ಥಿತಿ ಇರಲಿದೆ. ೩ಗಂಟೆಯಿAದ ೪.೩೦ರ ತನಕ ಕವಿಗೋಷ್ಠಿ ನಡೆಯಲಿದೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕಲಾಸಕ್ತರು ಹಾಜರಿದ್ದು ನಮ್ಮ ಹರಸಬೇಕು ಕನ್ನಡವನ್ನು ಉಳಿಸಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಶ್ರಿಧರ ಶೆಟ್ ಶಿರಾಲಿ, ಪ್ರಕಾಶ ಶಿರಾಲಿ, ನಾರಾಯಣ ನಾಯ್ಕ, ಸಂತೋಷ ಆಚಾರ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!