Wednesday, March 29, 2023
Homeಭಟ್ಕಳತಲ್ವಾರಿನಿಂದ ಕಡಿದುಒಂದೇ ಕುಟುಂಬದನಾಲ್ವರ ಹತ್ಯೆ -ಅನಾಥವಾದವು ಮಕ್ಕಳು

ತಲ್ವಾರಿನಿಂದ ಕಡಿದು
ಒಂದೇ ಕುಟುಂಬದ
ನಾಲ್ವರ ಹತ್ಯೆ –
ಅನಾಥವಾದವು ಮಕ್ಕಳು

ಅಂಗನವಾಡಿಗೆ ತೆರಳಿದ ಕಾರಣ ಮಕ್ಕಳು ಬಚಾವ್

ಭಟ್ಕಳ : ಹಾಡವಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ

ಹಾಡುವಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರದ ಸಲುವಾಗಿ ಶಂಭು ಭಟ್ 72 ವರ್ಷ
ಹೆಂಡತಿ ಮಾದೇವಿ ಶಂಭು ಭಟ್ 65 ವರ್ಷ
ರಾಜು ಭಟ್ 39 ವರ್ಷ
ಸುಷ್ಮಾ ರಾಜು ಭಟ್ 32 ವರ್ಷ
ರವರನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿರುವುದು ತಿಳಿದು ಬಂದಿದೆ

ಶಂಭು ಭಟ್ ಹಿರಿಯ ಮಗ ಶ್ರೀಧರ್ ಭಟ್ 6 ತಿಂಗಳ ಹಿಂದೆ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಈತನ ಹೆಂಡತಿ ವಿದ್ಯಾ ಶ್ರೀಧರ್ ಭಟ್ ಅವಳ ತಂದೆ ಶ್ರೀಧರ್ ಭಟ್ ಮತ್ತು ಸಹೋದರ ವಿನಯ್ ಭಟ್ ವಿದ್ಯಾ ಇವಳಿಗೆ ಸರಿಯಾಗಿ ಆಸ್ತಿಯನ್ನು ಹಂಚಿ ಕೊಡಲಿಲ್ಲ ಎಂದು ಈ ದಿವಸ ಶಂಭು ಭಟ್ ರವರ ಮನೆಗೆ ಬಂದು ಜಗಳ ಮಾಡಿ ಇಬ್ಬರು ಸೇರಿ ತಲ್ವಾರ್ ನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.ತನಗೆ ಗಂಡನ ಆಸ್ತಿ ನೀಡಬೇಕು ಎಂದು ವಿಧ್ಯಾ ಇವರು ಜಗಳವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಈ ಕೊಲೆಯ ಸಂಬಂದ ವಿಧ್ಯಾ ಭಟ್ಟ ತಂದೆ ಶ್ರೀದರ ಭಟ್ಟ ಮತ್ತು ಸಹೋದರ ವಿನಯ್ ಭಟ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ

ಆರೋಪಿ ವಿಧ್ಯಾ ಭಟ್ಟ ತಲೆ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ

ಒಟ್ಟಾರೆ ಈ ಸರಣಿ ಕೊಲೆ ಇಡಿ ಭಟ್ಕಳಿಗರನ್ನೆ ಬೆಚ್ಚಿ ಬೀಳಿಸಿದೆ ಕೊಲೆಗಾರರಿಗೆ ತಕ್ಕ ಶಿಕ್ಷೇಯಾಗ ಬೇಕು ಎನ್ನುವುದು ಭಟ್ಕಳಿಗರ ಮಾತಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!