ಭಟ್ಕಳ ಹೆಬಳೆ ಗ್ರಾ.ಪಂ, ಹಣಕಾಸು ಅವ್ಯವಹಾರ ಪ್ರಕರಣ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಂಗಳಕ್ಕೆ

ಈ ಭ್ರಷ್ಟ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕು ಎಂದರೆ ಅನರ್ಹತೆಯೆ ಸರಿಯಾದ ಕ್ರಮ : ಸಾರ್ವಜನಿಕರ ಆಕ್ರೋಶ

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ . ಪ್ರಕರಣ ವಿಚಾರಣೆ ನಡೆಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಉತ್ತರಕನ್ನಡ ಜಿಲ್ಲಾ ಪಂಚಾಯತಗೆ ಮುಖ್ಯಕಾರ್ಯನಿರ್ವಹಣ ಅಧಿಕಾರಿಗಳು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ವರದಿ ಒಪ್ಪಿಸಿದ್ದಾರೆ.

ಗ್ರಾಮ ಪಂಚಾಯತ ದಾಖಲೆಗಳನ್ನು ಕ್ರಮ ಬದ್ಧವಾಗಿ ನಿರ್ವಹಿಸದೇ ಹಣಕಾಸಿನ ಅವ್ಯವಹಾರ ನಡೆಸಿರುವ ಬಗ್ಗೆ ಈ ಹಿಂದೆ ಹೆಬಳೆ ಗ್ರಾಮ ಪಂಚಾಯತ ಅಧ್ಯಕ್ಷೆ ಕುಪ್ಪು ಮಂಗಳ ಗೊಂಡರವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಅವರು ನೀಡಿರುವ ವಿವರಣೆ ಸಮಂಜಸ ಇರುವಂತೆ ಕಂಡು ಬಂದಿಲ್ಲ. ಅಲ್ಲದೇ ಗ್ರಾಮ ಪಂಚಾಯತ ಸದಸ್ಯೆ ಭಾರತಿ ಮಾದೇವ ನಾಯ್ಕ ಇವರ ಪತಿಯ ಹೆಸರಿಗೆ ಗ್ರಾಮ ಪಂಚಾಯತನಿಂದ ರೂ 29200 ಮೊತ್ತದ ಚೆಕ್‌ ಪಾವತಿ ಮಾಡಿರುವುದು ಹಾಗೂ ಪಂಚಾಯತ ಉಪಾಧ್ಯಕ್ಷೆ ಮಾದೇವಿ ಮಾಸ್ತಯ್ಯ ನಾಯ್ಕ ಅವರ ಪತಿ ಮಾಸ್ತಯ್ಯ ದುರ್ಗಪ್ಪ ನಾಯ್ಕ ಇವರ ಹೆಸರಿಗೆ ರು. 4400 ಮೊತ್ತವನ್ನು ಪಾವತಿಸಿರುವುದು, ಪಂಚಾಯತ ಸದಸ್ಯ ರಾಮ ಗೋವಿಂದ ನಾಯ್ಕ ಇವರು ತಮ್ಮ ತಂದೆಯಾದ ಗೋವಿಂದ ನಾಗಪ್ಪ ನಾಯ್ಕ ಹೆಸರಿನಲ್ಲಿ ಆದ ಕಾಮಗಾರಿ ಬಿಲ್ಲಿನ ಮೊತ್ತ ರು. 8500 ಚೆಕ್ ಅನ್ನು ಸದಸ್ಯರೇ ಸಹಿ ಹಾಕಿ ಪಡೆದಿರುವುದು, ಪಂಚಾಯತ ಸದಸ್ಯ ವಿಜೇತ ರಾಧಾಕೃಷ್ಣ ಶೆಟ್ಟಿ ಇವರು ತಮ್ಮ ತಂದೆಯವರ ಹೆಸರಿನಲ್ಲಿ ಆದ ಕಾಮಗಾರಿ ಅನ್ನು ಸದಸ್ಯರೇ ಸಹಿ ಹಾಕಿ ಪಡೆದಿರುವುದು, ಪಂಚಾಯತ ಸದಸ್ಯ ಚಂದ್ರು ಸೋಮಯ್ಯ ಗೊಂಡ ಇವರ ಚಿಕ್ಕಪ್ಪನಾದ ಸಂಕಯ್ಯ ಮಾಸ್ತಿ ಗೊಂಡ ಅವರಿಗೆ ಕಾಮಗಾರಿಗಳನ್ನು ನಿರ್ವಹಿಸಿದ ಬಗ್ಗೆ ಮುಂಗಡ ಬಿಲ್ಲುಗಳ ಮೂಲಕ 27000ಗಳನ್ನು ಪಾವತಿಸಿರುವುದು ಹಾಗೂ ಕುಟುಂಬದ ಸದಸ್ಯರು ಕಾಮಗಾರಿ ನಿರ್ವಹಿಸಿ ಹಣ ಸ್ವೀಕರಿಸಿದ್ದು ಕಂಡು ಬರುತ್ತದೆ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದು, ಕರ್ನಾಟಕ ಸರಕಾರದ ಆದೇಶದಂತೆ ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4), 48(5)ರಂತೆ ಕ್ರಮ ಕೈಗೊಳ್ಳುವ ಸಲುವಾಗಿ ಯುಕ್ತ ಮಾದರಿಯಲ್ಲಿ ವಿಚಾರಣೆ ನಡೆಸುವ ಕಂದಾಯ ವಿಭಾಗಗಳ ಪ್ರಾದೇಶಿಕ – ಆಯುಕ್ತರುಗಳಿಗೆ ವಹಿಸಿ ಆದೇಶಿಸಿರುವುದರಿಂದ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಮಗ್ರ ದಾಖಲೆಗಳೊಂದಿಗೆ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಈ ಗ್ರಾಮ ಪಂಚಾಯತ್ ವಿವಾದದ ಸರಮಾಲಗಳನ್ನೆ ಹೆಗೆಲೆರಿಸಿಕೊಂಡಿದ್ದು ಈ ಗ್ರಾಮ ಪಂಚಾಯತ್ ಹಣದ ಅವ್ಯವಹಾರ ತನಿಖೆ ನಡೆಯುತ್ತಿದ್ದರು ಕೂಡ ಇನ್ನು ಬುದ್ದಿಕಲಿತಂತೆ ಕಾಣುವುದಿಲ್ಲಾ ಈಗ ಮತ್ತೊಮ್ಮೆ ಹೊಸದಾಗಿ ವರ್ಕ ಆರ್ಡರ್ ಇಲ್ಲದೆ ಕಾಮಗಾರಿಯೊಂದನ್ನು ನಡೆಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಹಣದ ಗೋಲ್ ಮಾಲ್ ನಲ್ಲಿ ಭಾಗಿಯಾದ ಗ್ರಾಮ ಪಂಚಾಯತ್ನ ಎಲ್ಲಾ ಭ್ರಷ್ಟ ಜನಪ್ರತಿನಿದಿಗಳೆಂದೆನ್ನಿಸಿಕೊಂಡವರನ್ನು ಮುಂದಿನ ಚುನಾವಣೆಗಳಿಗೆ ಅನರ್ಹಗೊಳಿಸಿ ಮುಂದೆ ಯಾವೋಬ್ಬ ಜನ ಪ್ರತಿನಿದಿಯು ಇಂಥ ಭ್ರಷ್ಟಾಚಾರಕ್ಕೆ ಮುಂದಾಗಬಾರದು ಎನ್ನುವುದೆ ಭಟ್ಕಳದ ಪ್ರಜ್ಞಾವಂತ ನಾಗರಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top