ಭಟ್ಕಳ ರಾಜಾಂಗಣ ನಾಗಬನ ಅಭಿವೃದ್ದಿ ಅನುದಾನ ಬಿಡುಗಡೆಯ ಬಗ್ಗೆ ವಿವಾದ ಸೃಷ್ಟಿ.

ಒಂದು ಕಡೆ ತನ್ನ ಸ್ವಂತ ಹಣದಿಂದ ನಾಗಬನ ಅಭಿವೃದ್ದಿ ಆಗಿದೆ ಎಂದು ಇನ್ನೊಂದು ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೆನೆ ಎಂದು ವಿವಾದ ಸ್ರಷ್ಟಿಸಿದ ಶಾಸಕ ಸುನಿಲ್ ನಾಯ್ಕ

ಈ ರಾಜಕಾರಣಿಗಳಿಗೆ ದೇವರ ವಿಷಯದಲ್ಲಿ ರಾಜಕೀಯ ಬೇಕೆ ಮಾನ ಮರ್ಯಾದೆ ಸ್ವಲ್ಪವೂ ಇಲ್ಲವೇ ನಿಮಗೆ  ? ಸಾರ್ವಜನಿಕರ ಆಕ್ರೋಶದ ಪ್ರಶ್ನೆ

ಭಟ್ಕಳ ತಾಲೂಕಿನ ರಾಜಾಂಗಣ ನಾಗಬನ ಅಭಿವೃದ್ದಿಯ ವಿಷಯದಲ್ಲಿ ತಾಲೂಕಿನಲ್ಲಿ ವಿವಾದಗಳು ಸೃಷ್ಟಿಯಾಗಿದ್ದು ಹಾಲಿ ಶಾಸಕ ಸುನಿಲ್ ನಾಯ್ಕ ಒಂದು ಕಡೆ, ಅಭಿವೃದ್ದಿಗೆ ತಾನು ಸ್ವಂತ ಹಣ ಹಾಕಿದ್ದೆನೆ ಎಂದು ಇನ್ನೊಂದು ಕಡೆ ಸರಕಾರದಿಂದ ಅನುಧಾನವನ್ನು ಬಿಡುಗಡೆ ಮಾಡಿಸಿ ನಾಗಬನ ಅಭಿವೃದ್ದಿ ಮಾಡಿಸಿದ್ದೆನೆ ಎಂಬ ಇಬ್ಬಗೆಯ ಹೇಳಿಕೆಯನ್ನು ನಿಡುವುದರ ಮೂಲಕ ದೇವತಾ ನಾಗಬನ ಅನುದಾನ ವಿಚಾರವಾಗಿ ವಿವಾದಗಳು ಸ್ರಷ್ಟಿಯಾಗಿದೆ ಇದು ಒಂದು ಕಡೆಯಾದರೆ ಮಾಜಿ ಶಾಸಕ ಜೇಡಿ ನಾಯ್ಕ ಅವದಿಯಲ್ಲಿ ಬಿಡುಗಡೆಯಾಗಿರುವ ಎರಡು ಲಕ್ಷ ಅನುದಾನದ ಆದೇಶ ಪತ್ರ ಹಾಗು ಮಂಕಾಳ ವೈದ್ಯರ ಶಾಸಕತ್ವದ ಸಮಯದಲ್ಲಿ ಸರಕಾರದಿಂದ ಬಿಡುಗಡೆಯಾಗಿರುವ ಏಳು ಲಕ್ಷದ ಅನುಧಾನದ ಆದೇಶ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದಲ್ಲದರ ಮದ್ಯ ರಾಜಾಂಗಣ ನಾಗಬನ ಅಭಿವೃದ್ದಿ ಸಮಿತಿಯವರು ದೇವಸ್ಥಾನ ಅಭಿವೃದ್ದಿಗೆ ಸರಕಾರದಿಂದ ಯಾವುದೆ ಅನುದಾನ ಬಿಡುಗಡೆಯಾಗಿಲ್ಲಾ ಸಾರ್ವಜನಿಕರು ಮತ್ತು ಶಾಸಕ ಸುನಿಲ್ ನಾಯ್ಕ ಅವರ ಸ್ವಂತ ಹಣದಿಂದ ನಾಗಬನ ಅಭಿವೃದ್ದಿಯನ್ನು ಕಂಡಿದೆ ಸರಕಾರ ಒಂದೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ ಎಂಬ ಹೇಳಿಕೆಯನ್ನು ಪತ್ರಿಕಾಗೋಷ್ಟಿಯನ್ನು ಕರೆದು ಹೇಳುತ್ತಾರೆ ಇದೆಂತಾ ಅವಸ್ಥೆ ಸ್ವಾಮಿ ದೇವಸ್ಥಾನ ನಿರ್ಮಾಣದ ವಿಷಯದಲ್ಲಿ ಯಾಕೀ ರಾಜಕಿಯ ಯಾವುದೋ ಮೂಲದಿಂದ ಹಣ ಬಂದಿದೆ ದೇವಸ್ಥಾನ ಅಭಿವೃದ್ದಿ ಕಂಡಿದೆ ಇದು ತುಂಬ ಸಂತೋಷದ ಸಂಗತಿಯಾಗಿದೆ ದೇವಸ್ಥಾನ ಅಭಿವೃದ್ದಿ ವಿಷಯದಲ್ಲೂ ನಿಮಗೆ ಪ್ರಚಾರ ಬೇಕೆ ದೇವಸ್ಥಾನ ಎಂದರೆ ಅದು ಪವಿತ್ರ ಆಸ್ತಾ ಕೆಂದ್ರ ಇಲ್ಲಿಯೂ ಕೂಡ ರಾಜಕಿಯ ಸ್ವಾರ್ಥ ಬೇಕೆ ಯಾಕೆ ಶಾಸಕ ಸುನಿಲ್ ನಾಯ್ಕ ಕ್ಷಣ ಕ್ಷಣಕ್ಕೆ ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ ನಾಗಬನ ಜಿರ್ಣೋದ್ದಾರ ಸಮಿತಿ ಈಗ ಈ ಹೇಳಿಕೆ ನೀಡುತ್ತಿದೆ. ಇವರುಗಳ ಈ ಹೇಳಿಕೆಯಲ್ಲಿ ಯಾವ ಹೇಳಿಕೆ ಸತ್ಯ ಸ್ವಾಮಿ

ಜವಬ್ದಾರಿಯುತ ಹುದ್ದೆಯಲ್ಲಿರುವ ಶಾಸಕ ಸುನಿಲ್ ನಾಯ್ಕ ಯಾಕೆ ಇಂಥಹ ಹೇಳಿಕೆಯನ್ನು ನಿಡುತ್ತಿದ್ದಾರೆ . ದೇವಸ್ಥಾನ ಜಿರ್ಣೋದ್ದರದಲ್ಲಿ ಶಾಸಕರು ಪ್ರಚಾರವನ್ನು ಬಯಸಿದರೆ ? ನಾಗಬನ ಅಬಿವೃದ್ದಿಗೆ ಅನುಧಾನ ಬಿಡುಗಡೆ ಯಾಗಿದೆಯೆ ಇಲ್ಲವೆ ಎಂಬ ಸ್ಪಷ್ಟತೆ ಈಗಲೂ ಇಲ್ಲ ಒಂದು ವೇಳೆ ಅನುದಾನ ಬಿಡುಗಡೆ ಆಗಿಲ್ಲದಿದ್ದರೆ ಯಾಕೆ ಶಾಸಕರು ಅನುದಾನ ತರಲು ವಿಪಲರಾದರು ಕೆಂದ್ರ ಮತ್ತು ರಾಜ್ಯದಲ್ಲಿ ಇವರದ್ದೆ ಬಿಜೆಪಿ ಸರಕಾರವಿದೆ ಕೊಟಿ ಕೊಟಿ ಅನುಧಾನ ತಂದಿದ್ದೆನೆ ಎಂದು ಬೀಗುವ ಶಾಸಕರು ಹಿಂದೂಗಳ ಆಸ್ತಾ ಕೆಂದ್ರ ನಾಗಬನ ಅಭಿವೃದ್ದಿಗೆ ಅನುದಾನ ತರುವಲ್ಲಿ ಯಾಕೆ ವಿಪಲರಾದರು , ೩.೮ ಗುಂಟೆ ಜಾಗವನ್ನು ಸಂಪೂರ್ಣವಾಗಿ ದೇವಸ್ಥಾನದ ಸುಪರ್ದಿಗೆ ಇನ್ನು ಯಾಕೆ ತೆಗೆದುಕೊಳ್ಳಲು ಸಾದ್ಯವಾಗಲಿಲ್ಲ ಇಲ್ಲಿ ಚುನಾವಣೆ ಸಂಬಂದ ಹಿಂದೂಗಳ ಬಾವನೆಗಳ ಜೊತೆ ಆಟವಾಡುವ ಕೆಲಸ ಮಾಡಲಾಗುತ್ತಿದೆಯೆ

ಒಂದು ವೇಳೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದರೆ ಶಾಸಕರು ಯಾಕೆ ಅದನ್ನು ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಾಗಬನ ನಿರ್ಮಾಣದ ಎಲ್ಲಾ ಶ್ರೇಯಸ್ಸನ್ನು ತಾವೋಬ್ಬರೆ ಪಡೆಯಲು ಬಯಸಿದರೆ ಪಕ್ಷಕಿಂತ ತಮ್ಮ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟರೆ ಇದೆಲ್ಲದಕ್ಕೂ ನಮ್ಮ ಪ್ರೀತಿಯ ಮಾನ್ಯ ಶಾಸಕ ಸುನಿಲ್ ನಾಯ್ಕ ಅವರೆ ಉತ್ತರವನ್ನು ನೀಡಬೇಕಾಗಿದೆ .

ಏನೆ ಆಗಲಿ ಒಟ್ಟಾರೆ ಭಟ್ಕಳದ ಒಂದು ವಿವಾದ ಇತ್ಯರ್ಥವಾಗಿ ಸುಖಾಂತವಾಗಿದೆ ಅಷ್ಟೇ ಸಮಾದಾನ ಹಾಗೆ ಈ ನಾಗಬನ ನಿರ್ಮಾಣದ ಖರ್ಚುವೆಚ್ಚದಲ್ಲಿ ಉಂಟಾದ ಗೊಂದಲವನ್ನು ಅಂದರೆ ಯಾವ ಅನುದಾನದಿಂದ ನಾಗಬನ ಪುನರ್ ಪ್ರತಿಷ್ಟಾಪನೆ ಅಬಿವೃದ್ದಿ ಕಂಡಿದೆ ಎಂದು ಶಾಸಕರು ಮತ್ತು ಆಡಳಿತ ಕಮಿಟಿ ಸ್ಪಷ್ಟನೆ ನಿಡಿದರೆ ಸಾಕು ಎನ್ನುವುದೆ ಸಾರ್ವಜನಿಕರ ಮಾತಾಗಿದೆ .

WhatsApp
Facebook
Telegram
error: Content is protected !!
Scroll to Top