ಭಟ್ಕಳ ರಾಜಾಂಗಣ ನಾಗಬನ ಆಡಳಿತ ಕಮಿಟಿಯವರಿಂದ ಸುದ್ದಿಗೋಷ್ಟಿ

ನಾಗಬನ ಪುನರ್ ಪ್ರತಿಷ್ಠಾಪನೆಗೆ ಸರಕಾರದ ಅನುದಾನ ಮಂಜೂರಾಗಿಲ್ಲಾ ಆಡಳಿತ ಕಮಿಟಿ

ಭಟ್ಕಳ : ತಾಲೂಕಿನ ರಾಜಾಂಗಣ ನಾಗಬನ ಪುನರ್ ಪ್ರತಿಷ್ಠಾಪನೆಗೆ ಸರಕಾರದ ಯಾವುದೆ ಅನುದಾನ ಮಂಜುರಾಗಿಲ್ಲಾ ಸಾರ್ವಜನಿಕರು ಮತ್ತು ಶಾಸಕ ಸುನಿಲ್ ನಾಯ್ಕ ಅವರ ಸ್ವಂತ ಹಣದಿಂದ ಪುನರ್ ಪ್ರತಿಷ್ಟಾಪನೆ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ನಾಗಬನ ಆಡಳಿತ ಕಮಿಟಿಯವರು ಹೇಳಿದರು

ಸುದ್ದಿಗೋಷ್ಟಿಯಲ್ಲಿ ರಾಮನಾಥ ಬಳೆಗಾರ ಮಾತನಾಡಿ ನಮ್ಮ ಭಟ್ಕಳದ ಗತ ಇತಿಹಾಸವನ್ನು ಹೊಂದಿರುವ ರಾಜಾಂಗಣ ನಾಗಬನ ಪುನರ್ ಪ್ರತಿಷ್ಟಾಪನಡಯನ್ನು ಕಂಡಿದೆ ಇದು ನಮಗೆ ತುಂಬ ಸಂತಸವನ್ನು ತಂದಿದೆ ಇದು ಹಿಂದೂ ಕಾರ್ಯಕರ್ತರ ಶ್ರಮದ ಫಲವಾಗಿದೆ ಸಾರ್ವಜನಿಕರು ಶಾಸಕರು ಸ್ವಂತ ಹಣವನ್ನು ಖರ್ಚು ಮಾಡಿ ನಾಗಬನ ಪುನರ್ ಪ್ರತಿಷ್ಟಾಪನೆ ನಡೆಸಲಾಗಿದೆ ಎಲ್ಲರಿಗೂ ನಾವು ಧನ್ಯವಾದವನ್ನು ಅರ್ಪಿಸುತ್ತೆವೆ ಸರಕಾರದಿಂದ ಅನುಧಾನ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ ಆದರೆ ನಮ್ಮ ಬ್ಯಾಂಕ್ ಖಾತೆಗೆ ಯಾವುದೆ ಹಣ ಬಂದಿರುವುದಿಲ್ಲಾ ಎಂದು ಹೇಳಿದರು ಈ ಬಗ್ಗೆ ಸರಕಾರದ ಅನುಧಾನ ನಿಮ್ಮ ಖಾತೆ ಬಂದಿಲ್ಲಾ ಅನುದಾನ ಸರಕಾರದಿಂದ ಮಂಜುರಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಮಂಜುರಾಗಿರುವುದು ನಿಮಗೆನಾದರು ತಿಳಿದಿದೆಯೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ನಮಗೆ ಆ ಬಗ್ಗೆ ಏನು ತಿಳಿದಿಲ್ಲಾ ಆದರೆ ನಮ್ಮ ಖಾತೆಗೆ ಯಾವುದೆ ಹಣ ಮಂಜುರಾಗಿಲ್ಲಾ ಎಂದು ಹೇಳಿದರು

ಕೆಂದ್ರ ಹಾಗು ರಾಜ್ಯದಲ್ಲಿ ಎರಡು ಕಡೆ ಬಿಜೆಪಿ ಸರಕಾರವೆ ಇದೆ ಯಾಕೆ ಹಿಂದೂ ದೇವಸ್ಥಾನ ರಾಜಾಂಗಣ ನಾಗಬನಕ್ಕೆ ಅನುಧಾನ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ಮಾಧ್ಯ ಕೇಳಿದಾಗ ಅನುದಾನ ಬಿಡುಗಡೆ ಮಾಡುವ ವರೆಗೆ ಸಮಯ ಇಲ್ಲಾ ಆದ್ದರಿಂದ ಅರ್ಜೆಂಟಾಗಿ ನಾಗಬನ ಪುನರ್ ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಹೇಳಿದರು ಆಡಳಿತ ಕಮಿಟಿಯವರು ಹೇಳಿದರು.

ಈ ಸಂದರ್ಬದಲ್ಲಿ ರಾಜಾಂಗಣ ನಾಗಬನ ಆಡಳಿತ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top