ಭಟ್ಕಳ ಮುಟ್ಟಳ್ಳಿಯಲ್ಲಿ ಜನ ಜಾಗ್ರತಾ ಸಭೆ

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ಹಿಂದೂತ್ವ : ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳ : ಬಾಯಿಯಲ್ಲಿ ಹಿಂದೂತ್ವದ ಮಾತನಾಡಿದರೆ ಅದು ಹಿಂದೂತ್ವ ಅಲ್ಲ ಸಮಾಜದ ದೀನ ದಲಿತರ ಕಣ್ಣೋರೆಸುವ ಕೆಲಸ ಮಾಡುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಕರ್ಯ ಒದಗಿಸುವುದೆ ಹಿಂದೂತ್ವ ಎಂದು ತಾಲೂಕಿ ಮುಟ್ಟಳ್ಳಿ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ನಡೆದ ಜನ ಜಾಗ್ರತಾ ಸಭೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರು ಹೇಳಿದರು .

ಈ ಸಭೆಯಲ್ಲಿ ಜನ ಸಾಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮಾಜಿ ಶಾಸಕ ಮಂಕಾಳ ವೈದ್ಯರಲ್ಲಿ ಹೇಳಿಕೊಂಡು ತಮಗಾಗುತ್ತಿರುವ ಸಮಸ್ಯೆಯನ್ನು ಅಸಹಾಯಕತೆಯನ್ನು ತೊಡಿಕೊಂಡು ತಮ್ಮ ಸಮಸ್ಯೆ ಬಗೆ ಹರಿಸುವಂತೆ ವಿನಂತಿಸಿಕೊಂಡರು

ಇದೆ ಸಂದರ್ಬದಲ್ಲಿ ಸ್ಥಳಿಯ ಮುಖಂಡರು ಯುವಕರು ಚುನಾವಣಾ ಸಂಬಂದ ಅನೇಕ ಸಲಹೆಗಳನ್ನು ಮಾಜಿ ಶಾಸಕ ಮಂಕಾಳ ವೈದ್ಯರ ಎದುರು ಇಟ್ಟಿದ್ದು ಈ ಬಗ್ಗೆ ಕ್ರಮ ಜರುಗಿಸುವ ಬಗ್ಗೆ ಮಂಕಾಳ ವೈದ್ಯರು ಕಾರ್ಯಕರ್ತರಿಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮಂಕಾಳ ವೈದ್ಯರಿಗೆ ಪೇಟತೊಡಿಸಿ ಸನ್ಮಾನಿಸಿದರು

ಈ ಸಂದರ್ಬದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ನನ್ನ ಅವದಿಯಲ್ಲಿ ಜನ ಸಾಮಾನ್ಯರಿಗೆ ಅನೇಕ ಮನೆಗಳನ್ನು ಮಂಜುರು ಮಾಡಿಸಿದ್ದೆನೆ ಆದರೆ ಈಗಿನ ಅವದಿಯಲ್ಲಿ ಒಂದೆ ಒಂದು ಮನೆ ಕೂಡ ಮಂಜೂರು ಮಾಡಿಸಲು ಸಾದ್ಯವಾಗಿಲ್ಲಾ ಅಬಿವೃದ್ದಿ ಮಾಡದೇ ಬಾಯಲ್ಲಿ ಮಾತ್ರ ಹಿಂದೂತ್ವದ ಮಾತನಾಡುತ್ತಿದ್ದಾರೆ ಹಿಂದೂತ್ವ ಬಾಯಲ್ಲಿ ಮಾತ್ರ ಇರಬಾರದು ಕ್ರತಿಯಲ್ಲಿ ಇರಬೇಕು ಸಮಾಜದಲ್ಲಿನ ಅಸಹಾಯಕರ ಅಮಾಯಕರ ಕಣ್ಣೋರೆಸುವುದು ಸಾರ್ವಜನಿಕರ ಸೇವೆಯನ್ನು ಮಾಡುದೆ ಹಿಂದೂತ್ವ ಎಂದು ಹೇಳಿದರು

ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರು ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ದೈವ ಕ್ರಪೇಗೆ ಪಾತ್ರರಾದರು

ಈ ಸಂದರ್ಬದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮಂಕಾಳ ವೈದ್ಯರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top