ಭಟ್ಕಳ ಪುರಸಭೆ 18 ಅಂಗಡಿ ಮಳಿಗೆ ಟೆಂಡರ್ ನಡೆಸಲು ಕಾನೂನು ಬಾಹಿರವಾಗಿ ಮರು ಅರ್ಜಿ ಕರೆಯಲು ಷಡ್ಯಂತ್ರ: ಪುರಸಭಾ ಸದಸ್ಯ ಶೀಕಾಂತ ನಾಯ್ಕ ಸೇರಿದಂತೆ ಏಳು ಸದಸ್ಯರ ಆಕ್ರೋಶ

ಹೊಸದಾಗಿ ಟೆಂಡರ್ ಅರ್ಜಿ ಕರೆಯಲು ಅವಕಾಶ ಇಲ್ಲಾ ಹಾಗೊಂದು ವೇಳೆ ಮರು ಟೆಂಡರ್ಗೆ ನೋಟಿಪಿಕೇಶನಗೆ ಮುಂದಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು: ಪುರಸಭಾ ಮುಖ್ಯಾಧಿಕಾರಿ ಸುರೇಶ್ ನಾಯ್ಕ ಎಚ್ಚರಿಕೇ

ಭಟ್ಕಳ ತಾಲೂಕಿನ ಪುರಸಭೆಯ 18 ಅಂಗಡಿ ಮಳಿಗೆ ಹರಾಜು ನಡೆಸಲು ಟೆಂಡರ್ ಕರೆದು ಹರಾಜಿಗೆ ಅಣಿಯಾಗಲಾಗಿತ್ತು ಆದರೆ ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶಿಮ್ ವಿನಾಕಾರಣ ಹರಾಜು ಪ್ರಕ್ರಿಯೆ ಮುಂದುಡಿದಲ್ಲದೆ ಬುದುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಂಗಡಿ ಮಳಿಗೆ ಟೆಂಡರ್ ಪ್ರಕ್ರಿಯೆಯನ್ನೆ ರದ್ದುಗೊಳಿಸಿ ಕಾನೂನು ಭಾಹಿರವಾಗಿ ಟೆಂಡರ್ ಪ್ರಕ್ರಿಯೆಗೆ ಮರು ಅರ್ಜಿ ಕರೆದು ಮೊದಲು ಟೆಂಡರ್ ಹಾಕಿದ ಟೆಂಡರ್ದಾರರಿಗೆ ಅನ್ಯಾಯ ಮಾಡುವ ಶಡ್ಯಂತ್ರವನ್ನು ನಡೆಸಲಾಗುತ್ತಿದೆ ಎಂದು ಪುರಸಭೆಯ ಕೆಲವು ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಹೌದು ವಿಕ್ಷಕರೆ ಈ ಹಿಂದೆ ಪುರಸಭೆಯ ೨೧ ಅಂಗಡಿ ಮಳೀಗೆ ಹರಾಜು ನಡೆಸುವ ಸಲುವಾಗಿ ತಿರ್ಮಾನ ಮಾಡಿ ಪೇಪರ್ ನೋಟಿಪಿಕೇಶನ ಮಾಡಿ ಅದರಂತೆ ೪೬ಜನ ಟೆಂಡರದಾರರು ಟೆಂಡರ್ ಹಾಕಿದ್ದು ದಿನಾಂಕ 7/02/2023 ರಂದು ಹರಾಜು ಕರೆಯಲಾಗುವುದು ಎಂದು ಪುರಸಭೆ ಘೊಷಿಸಿತ್ತು ಆದರೆ ನಮ್ಮ ಪುರಸಭೆಯ ಅಧ್ಯಕ್ಷರಾದ ಪರ್ವೇಜ್ ಕಾಶಿಮ್ ಅವರು ತಮ್ಮ ಹಳೆಯ ಚಾಳಿಯಂತೆ ವಿನಾಕಾರಣ ಏಕಪಕ್ಷಿಯವಾಗಿ ಹರಾಜು ಪ್ರಕ್ರಿಯೇಯನ್ನು ಮುಂದುಡುತ್ತಾರೆ ಇದಲ್ಲದೆ ಸಾಮಾನ್ಯ ಸಭೆಯ ಅಜೇಂಡದಲ್ಲಿ ಇಲ್ಲದಿದ್ದರು ಸ್ವಹಿತಾಸಕ್ತಿಯಿಂದ ಪೆಬ್ರವರಿ 7 ಕ್ಕೆ ಕರೆಯ ಬೇಕಾಗಿದ್ದ ಟೆಂಡರ್ ಪ್ರಕ್ರಿಯ ವಿಷಯವನ್ನು ಏಕಾಏಕಿ ಸಭೆಯಲ್ಲಿ ಇಡುತ್ತಾರೆ ಈ ಸಂದರ್ಬದಲ್ಲಿ ಸಭೇಯಲ್ಲಿದ್ದ ಶ್ರೀಕಾಂತ ನಾಯ್ಕ ಸೇರಿದಂತೆ ಏಳು ಮಂದಿ ಸದಸ್ಯಗಳು ಮುಂದುಡಲ್ಪಟ್ಟ ಹರಾಜು ಪ್ರಕ್ರಿಯೆಯನ್ನು ನಾಳೆ ಅಥವಾ ನಾಡಿದ್ದು ನಡೆಸಿ ಎಂಬ ಸಲಹೆಯನ್ನು ನೀಡುತ್ತಾರೆ ಆಗ ಸಭೆಯಲ್ಲಿ ಟೆಂಡರ್ ಪ್ರಕ್ರಿಯೇಯ ಚಿತ್ರಣವನ್ನೆ ಬದಲಾಯಿಸುವ ಪ್ರಯತ್ನ ನಡೆಸಲಾಗುತ್ತದೆ ಕೆಲವು ಸದಸ್ಯರು ಟೆಂಡರಿಗಾಗಿ ಮರು ಅರ್ಜಿ ಕರೆಯುವ ಮಾತನಾಡಲು ಪ್ರಾರಂಬಿಸುತ್ತಾರೆ ಇದನ್ನು ಈ ಏಳು ಜನ ಸದಸ್ಯರು ಖಡಾಖಂಡಿತವಾಗಿ ವಿರೋದಿಸುತ್ತಾರೆ ಆಗಲೆ ನೋಡಿ ನಮ್ಮ ಪುರಸಭಾ ಅಧ್ಯಕ್ಷ ಸಂಖ್ಯಾಬಲದಿಂದ ನಿರ್ದಾರ ಮಾಡೋಣ ಎಂಬ ನಾಟಕಕ್ಕೆ ಶುರುವಿಟ್ಟುಕೊಂಡಿದ್ದು ಈ ಸಂಖ್ಯಾಬಲದ ಆಯ್ಕೆಯ ಪ್ರಕ್ರಿಯೆಯನ್ನು ಕೂಡ ಆ ಏಳು ಜನ ಸದಸ್ಯರು ಖಡಾಖಂಡಿತವಾಗಿ ವಿರೋದಿಸುತ್ತಾರೆ ಆದರೆ ನಮ್ಮ ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶಿಮ್ ಅತಿ ಬುದ್ದಿವಂತಿಕೆಯಿಂದ ಆ ಏಳು ಸದಸ್ಯರ ವಿರೋದವನ್ನೆ ಸಂಖ್ಯಾಬಲದ ಓಟಿಂಗ್ ಎಂದು ಪರಿಗಣಿಸುತ್ತಾರೆ ಹಾಗು ಸಹಜವಾಗಿ ಉಳಿದ ಪುರಸಭಾ ಸದಸ್ಯರು ಮರು ಅರ್ಜಿ ಕರೆಯುದರ ಪರ ಬ್ಯಾಟಿಂಗ್ ಬೀಸುತ್ತಾರೆ ಒಟ್ಟಾರೆ ಪುರಸಭಾ ಅಧ್ಯಕ್ಷ ಹಿಂದೊಮ್ಮೆ ಕಾನೂನು ಬಾಹಿರವಾಗಿ ಪುರಸಭೆಗೆ ಉರ್ದು ಬೋರ್ಡ ಅಳವಡಿಸಿ ನಂತರ ಜಿಲ್ಲಾಡಳಿತದ ಅದೇಶದಂತೆ ಉರ್ದು ಬೊರ್ಡನ್ನು ತೇರವುಗೊಳಿಸಲಾಗಿತ್ತು ಇದರಿಂದ ಅವಮಾನಕ್ಕೊಳಗಾದ ಈ ಅಧ್ಯಕ್ಷ ಪರ್ವೇಜ್ ಖಾಶಿಮ್ ಅದರಿಂದ ಬುದ್ದಿಯನ್ನೆ ಕಲಿಯದೆ ಈ ಅಧ್ಯಕ್ಷರು ಕಾನೂನು ಬಾಹಿರವಾಗಿ ಪುರಸಭಾ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿ ಮರು ಅರ್ಜಿಕರೆಯುವ ಶಡ್ಯಂತ್ರವನ್ನು ತುಂಬಿದ ಸಾಮಾನ್ಯ ಸಭೆಯಲ್ಲಿ ಮಾಡುತ್ತಾರೆ ಇದೆಂತ ವರಸೆ ಸ್ವಾಮಿ ಆಗಲೆ ನೋಡಿ ನಮ್ಮ ಪುರಸಭಾ ಮುಖ್ಯಾಧಿಕಾರಿ ತಮ್ಮ ನಿರ್ದಾರವನ್ನು ಪ್ರಕಟಿಸುತ್ತಾರೆ ಮರು ಟೆಂಡರ್ ಅರ್ಜಿ ಕರೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಹಾಗೊಂದು ವೇಳೆ ನೀವು ಟೆಂಡರಿಗೆ ಕಾನೂನು ಬಾಹಿರವಾಗಿ ಮರು ಅರ್ಜಿ ಕರೆಯಲು ನನ್ನ ಮೇಲೆ ಒತ್ತಡ ತಂದಿದ್ದೆ ಆದಲ್ಲಿ ನಾನು ಈ ತಪ್ಪಿನ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೆನೆ ನಾನು ಈ ಕಾನೂನು ಭಾಹಿರ ಚಟುವಟಿಕೆಯಲ್ಲಿ ಬಾಗಿಯಾಗಲಾರೆ ಎಂದು ಅತಿ ಸ್ಪಷ್ಟವಾಗಿ ಸಾಮಾನ್ಯ ಸಭೆಯಲ್ಲಿ ತಮ್ಮ ನಿರ್ದಾರವನ್ನು ಪ್ರಕಟಿಸಿ ಕಾನೂನಿನ ಪರ ಬ್ಯಾಂಟಿಂಗ್ ನಡೆಸುತ್ತಾರೆ ಆದರೂ ಕೂಡ ನಮ್ಮ ಪುರಸಭಾ ಅಧ್ಯಕ್ಷ ಪರ್ವೆಜ್ ಖಾಶಿಮ್ ಅಜ್ಞಾನಿಯಂತೆ ಟೆಂಡರ್ ಮರು ಅರ್ಜಿಕರೆಯುದರಪರವೇ ಬ್ಯಾಟಿಂಗ್ ಬೀಸುತ್ತಾರೆ ಇದೆಂತ ವರಸೆ ಸ್ವಾಮಿ ಅಧ್ಯಕ್ಷರಿಗ್ಯಾಕೆ ಈ ಬುದ್ದಿಗೇಡಿತನ ಎಂದು ಕೆಲವು ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಒಂದು ವೇಳೆ ಟೆಂಟರ್ ಮರು ಅರ್ಜಿ ಕರೆದಿದ್ದೆ ಆದಲ್ಲಿ ನಾವು ಉಗ್ರ ಪ್ರತಿಭಟನೆ ನಡೆಸುತ್ತೆವೆ ಹಾಗು ಕಾನೂನಿನ ಮೋರೆಯನ್ನು ಕೂಡ ಹೊಗುತ್ತೆವೆ ಮುಂದೆ ಯಾವುದೇ ಅನಾಹುತಗಳು ಸಂಬವಿಸಿದರೂ ಅದಕ್ಕೆ ಫುರಸಭೆ ಮತ್ತು ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶೀಮ್ ಅವರೆ ಹೋಣೆಯನ್ನು ಹೊರಬೇಕಾಗುತ್ತದೆ ಎಂದು ಈ ಮೊದಲು ಟೆಂಡರ್ ಸಲ್ಲಿಸಿದ ಟೆಂಡರದಾರರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ಸಾಮಾನ್ಯ ಸಭೆಯ ಕೊನೆಯಲ್ಲಿ ಪುರಸಭೆಯ ಏಳು ಸದಸ್ಯರು ಟೆಂಡರ್ ಮರು ಅರ್ಜಿ ಕರೆಯುದರ ವಿರುದ್ದ ತಮ್ಮ ವಿರೋದವಿದೆ ಎಂದು ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸುತ್ತಾರೆ

ಒಟ್ಟಾರೆ ಪುರಸಭೆ ಅಭಿವೃದ್ದಿಗಿಂತ ಯಾವಾಗಲೂ ವಿವಾದದಲ್ಲೆ ಕಾಲ ಕಳೆಯುತ್ತಿದೆ ಹಾಗಾದರೆ ಭಟ್ಕಳ ಪುರಸಭೆ ಅಭಿವೃದ್ದಿಯ ಕಾರ್ಯ ಯಾವಾಗ ಪ್ರಾರಂಬಿಸಿತು ಎಂದು ಕಾದು ನೋಡಬೇಕಾಗಿದೆ ಪುರ ಸಭಾ ಅಧ್ಯಕ್ಷ ಪರ್ವೇಜ್ ಖಾಶಿಮ್ ಅವರ ಏಕಪಕ್ಷಿಯ ನಿರ್ದಾರ ಇನ್ನೆಷ್ಟು ದಿ‌ನ ಎನ್ನುವುದೆ ಯಕ್ಷಪ್ರಶ್ನೇಯಾಗಿದೆ.

WhatsApp
Facebook
Telegram
error: Content is protected !!
Scroll to Top