ಭಟ್ಕಳ ಶಾಸಕ ಸುನಿಲ್ ನಾಯ್ಕ ಗೂಂಡಾವರ್ತನೆಯಿಂದ ಜನ ಸಾಮಾನ್ಯ ಕಂಗೆಟು ಹೊಗಿದ್ದಾನೆ : ಮಂಕಾಳು ವೈದ್ಯ ಆಕ್ರೋಶ

ಭಟ್ಕಳ: ತನ್ನ ಕ್ಷೇತ್ರದ ಜನರು ಶಾಸಕ ಸುನೀಲ ನಾಯ್ಕ ಅವರ ಬಳಿ ಮಾತನಾಡಲು ಹಿಂದೆಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಿಸಿಕೊಡಿ ಎಂದು ಅಳಲು ತೋಡಿಕೊಂಡವರ ಬಳಿ ಗೂಂಡಾಗಿರಿ, ಅಸಭ್ಯ ವರ್ತನೆ ಮೂಲಕ ಅವರ ದರ್ಪವನ್ನು ಮೆರೆಯುತ್ತಾರೆ
ಈ ಬಾರಿ ಮತದಾರರು ಜಾಗೃತರಾಗಬೇಕಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.

ಮಾರುಕೇರಿಯ ಕಿತ್ರೆಯಲ್ಲಿ ಬುಧವಾರ ಕಾಂಗ್ರೆಸ್ಸಿನ ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಸಲದ ಚುನಾವಣೆಯಲ್ಲಿ ಪರೇಶ ಮೇಸ್ತ ಸಾವು, ಮಾಗೋಡ ಪ್ರಕರಣ ಸೇರಿದಂತೆ ಧಾರ್ಮಿಕವಾಗಿಯೂ ನನ್ನ ಮೇಲೆ ನಿರಂತರ ಅಪಪ್ರಚಾರ ಮಾಡಿದ್ದರು. ಆದರೆ ಈ ಸಲ ಬಿಜೆಪಿಗೆ ಕ್ಷೇತ್ರದಲ್ಲಿ ಗೆಲ್ಲಲು ಯಾವುದೇ ವಿಷಯ ಇಲ್ಲವಾಗಿದೆ. ಡಬ್ಬಲ್ ಇಂಜಿನ್ ಸರಕಾರ ಹೊಂದಿರುವ ಬಿಜೆಪಿ ಕ್ಷೇತ್ರದಲ್ಲಿ ನಾನು ತಂದಿದ್ದ 1500 ಕೋಟಿ ಅನುದಾನಕ್ಕಿಂತ ಹೆಚ್ಚು ಅಂದರೆ ಇವರು 3 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಬೇಕಿತ್ತು. ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 7 ಸಾವಿರ ಮನೆ ತಂದಿದ್ದು, ಕ್ಷೇತ್ರದಲ್ಲಿ ಸರಕಾರದಿಂದ ಒಂದೇ ಒಂದು ಮನೆ ಬಂದಿಲ್ಲ. ಭಟ್ಕಳ ಶಾಸಕರಿಗೆ ಅಭಿವೃದ್ಧಿ ಎಂದಿಗೂ ಬೇಡ. ಅವರದ್ದೇನಿದ್ದರೂ ಲೂಟಿ, ಭ್ರಷ್ಟಾಚಾರ, ದಾದಾಗಿರಿ ಮಾಡುವುದು, ಕಮಿಷನ್ ಹೊಡೆಯುವುದೆ ಆಗಿದೆ.

ನಾನು ಶಾಸಕನಿದ್ದ ಸಂದರ್ಭದಲ್ಲಿ ರಾಜಾಂಗಣ ನಾಗಬನದ ಜೀರ್ಣೋದ್ಧಾರಕ್ಕೆ ಸರಕಾರದಿಂದ 7.50 ಲಕ್ಷ ರೂ ಮಂಜೂರಿಸಿಕೊಂಡು ಬಂದಿದ್ದೆ. ನಾಗಭನ ನಿರ್ಮಾಣಕ್ಕೆ ವಿಪುಲ ಅವಕಾಶ ಇತ್ತು ಯಾವುದೆ ವಿರೋದಗಳು ಇಲ್ಲವಾಗಿತ್ತು ಆದರೆ ಅಂದು ನಾಗಬನದ 3.12 ಗುಂಟೆ ಜಾಗವಿದ್ದು ಇದಕ್ಕೆ ಕಂಪೌಂಡ್ ನಿರ್ಮಿಸಿ ಜೀರ್ಣೋದ್ದಾರ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಆದರೆ ಇದೀಗ ನಾಗಬನ ಇದ್ದ ಜಾಗದಲ್ಲೇ ಹಿಂದೆ ಮಂಜೂರಿಯಾಗಿದ್ದ 7.50 ಲಕ್ಷ ಅನುದಾನದಲ್ಲೇ ಜೀರ್ಣೋದ್ದಾರ ಮಾಡಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ 3.12 ಗುಂಟೆ ಜಾಗ ಏನಾಯಿತು? ಹಿಂದುತ್ವದ ಕುರಿತು ಮಾತನಾಡುವ ಇವರು ಅಂದು ನಾನು ಶಾಸಕನಾಗಿದ್ದಾಗ ನಾಗಬನದ 3.12 ಗುಂಟೆ ಸಂಪೂರ್ಣ ಸ್ವಾದೀನದ ಮಾತನಾಡಿದ ಇವರು ಕೇಂದ್ರ ಮತ್ತು ರಾಜ್ಯದಲ್ಲೂ ತಮ್ಮದೇ ಸರ್ಕಾರವಿದ್ದರೂ ದೇವಸ್ಥಾನದ ಜಾಗ ಯಾಕೆ ಉಳಿಸಿಕೊಳ್ಳಲು ಮನಸ್ಸು ಮಾಡಲಿಲ್ಲ ಈಗ ನಾಗಬನ ನಿರ್ಮಾಣವಾಗಿದ್ದು ಕೇವಲ ಎಂಟಾಣೆ ಜಾಗದಲ್ಲಿ ಉಳಿದ ಮೂರು ಗುಂಟೆ ಜಾಗ ಎಲ್ಲಿ ಇವರ ಹಿಂದೂತ್ವ ಕೆವಲ ಚುನಾವಣಾ ಸಂದರ್ಬದಲ್ಲಿ ಧರ್ಮಗಳ ಮದ್ಯ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುವುದೆ ಶಾಸಕ ಸುನಿಲ್ ನಾಯ್ಕ ಅವರ ಕೆಲಸವಾಗಿದೆ

ಭಟ್ಕಳ ಕ್ಷೇತ್ರದಲ್ಲಿ ಬಿಜೆಪಿ ಚುನಾವಣೆ ಗೆದ್ದಿದ್ದು ಚಿತ್ತರಂಜನ್, ತಿಮ್ಮಪ್ಪ ನಾಯ್ಕ ಪರೇಶ ಮೇಸ್ತ ಸಾವಿನ ಪ್ರಕರಣ, ನಿರಂತರ ಅಪಪ್ರಚಾರದಿಂದಲೇ ಹೊರತು ಸರಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿ ಗೆದ್ದಿಲ್ಲ ಎಂದು ಆರೋಪಿಸಿದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ನಾಯ್ಕ ಮುಖಂಡರಾದ ಶ್ರೀಕಂಠ ಹೆಬ್ಬಾರ, ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ಮಾಸ್ತಿ ಗೊಂಡ, ಗ್ರಾ.ಪಂ. ಸದಸ್ಯೆ ಮೋಹಿನಿ ಗೊಂಡ, ಸದಾಶಿವ ಹೆಗಡೆ ಮಾತನಾಡಿ, ಮಂಕಾಳ ವೈದ್ಯರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿಸಿ ಮತ್ತೊಮ್ಮೆ ಅವರನ್ನು ಗೆಲ್ಲಿಸುವಂತೆ ಕೋರಿದರು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೊಂಡ, ಗೊಂಡ ಸಮಾಜದ ಮುಖಂಡ ಗಣಪಯ್ಯ ಗೊಂಡ, ಕರಿಯಾಗೊಂಡ, ಗಣಪತಿ ಗೊಂಡ, ಲಕ್ಷ್ಮಣ ದೇಶಭಂಡಾರಿ, ಚಂದು ಮರಾಠಿ ಮುಂತಾದವರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿದರು. ಮಂಜುನಾಥ ಗೊಂಡ ಸ್ವಾಗತಿಸಿದರು.

WhatsApp
Facebook
Telegram
error: Content is protected !!
Scroll to Top