ಅಸ್ಥಂಗತರಾದ ಖ್ಯಾತ ಹಿಂದೂಸ್ತಾನಿ ಗಾಯಕ ವಿದ್ವಾನ್ ಅನಂತ ಎಂ ಹೆಬ್ಬಾರ್

ಅನಾಥರಾದ ಸಂಗೀತ ಅಭಿಮಾನಿಗಳು ಮತ್ತು ವಿಧ್ಯಾರ್ಥಿಗಳು.

ಭಟ್ಕಳ: ಖ್ಯಾತ ಹಿಂದೂಸ್ಥಾನಿ ಗಾಯಕ, ಸಂಗೀತ ಶಿಕ್ಷಕ, ವಿದ್ವಾನ್ ಅನಂತ ಎಂ.ಹೆಬ್ಬಾರ್(53) ಕೋಟಖಂಡ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಅಸಂಖ್ಯ ಸಂಗೀತ ಅಭಿಮಾನಿಗಳು ಅನಾಥರಾಗಿ ದುಖಃದ ಮಡಿಲನ್ನು ಸೇರಿದ್ದಾರೆ.

ತಮ್ಮ ಚಿಕ್ಕ ವಯಸ್ಸಿನಿಂದಲೂ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಸಂಗೀತದ ಪ್ರಾಥಮಿಕ ಅಭ್ಯಾಸವನ್ನು ಷಡಕ್ಷರಿ ಗವಾಯಿಯವರಲ್ಲಿ ಕಲಿತು, ಉನ್ನತ ಶಿಕ್ಷಣವನ್ನು ಅಶೋಕ ಹುಗ್ಗಣ್ಣನವರು ಮತ್ತು ಪಂ. ಪರಮೇಶ್ವರ ಹೆಗಡೆ ಅವರಲ್ಲಿ ಪಡೆದುಕೊಂಡಿದ್ದರು. ಕಳೆದ 30 ವರ್ಷಗಳಿಂದ ಶಾಸ್ತ್ರೀಯ, ಸುಗಮ ಸಂಗೀತದ ಪಾಠ ಹೇಳುತ್ತಾ ಬಂದಿದ್ದು ಭಟ್ಕಳ ಮಾತ್ರವಲ್ಲದೇ ಉಡುಪಿ ಜಿಲ್ಲೆಯಲ್ಲಿ ಕೂಡಾ ಸಂಗೀತ ತರಗತಿಗಳನ್ನು ನಡೆಸುತ್ತಿದ್ದರು.

ಕಳೆದ 22 ವರ್ಷಗಳಿಂದ ದಿ.ಎನ್.ಜಿ.ಕೊಲ್ಲೆಯವರು ಸ್ಥಾಪಿಸಿದ ಕಲಾ ಸೌರಭದ ಸಂಗೀತ ಶಿಕ್ಷರಾಗಿ, ವಿದ್ಯಾಭಾರತಿ, ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್, ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿಯೂ ಮಕ್ಕಳಿಗೆ ಸಂಗೀತ ಶಿಕ್ಷಣ ಹೇಳಿಕೊಡುತ್ತಿದ್ದರು. ಮುಂಬೈ, ಕೇರಳ, ಬೆಂಗಳೂರು, ಕಾರವಾರ, ಕುಂದಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮತ್ತು ಹೊರ ರಾಜ್ಯದಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿ ಮನ್ನಣೆಗಳಿಸಿದ್ದ ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿಗಳು ಲಭಿಸಿದ್ದವು.

ಈ ಸರಳ ಸಜ್ಜನ ಸ್ವಾಭಿಮಾನಿ ದೈವ ಸ್ವರೂಪಿ ಸರಸ್ವತಿ ಪುತ್ರರಾದ ಅನಂತ ಹೆಬ್ಬಾರ್ ಅವರು ತಮ್ಮ ಇಡಿ ಜೀವನವನ್ನೆ ತಾಯಿ ಸರಸ್ವತಿಯ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಇವರ ಅಗಲುವಿಗೆ ಸಂಗೀತ ಕ್ಷೇತ್ರಕ್ಕೆ ಅಪಾರವಾದ ನಷ್ಟವನ್ನು ಉಂಟುಮಾಡಿದೆ ಇವರ ಮರಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ . ಸಂಗೀತಾಭಿಮಾನಿಗಳು ಅವರ ಪ್ರೀತಿಯ ಶಿಷ್ಯವೃಂದ ಅಕ್ಷರಶಃ ಅನಾಥರಾಗಿ ಗೋಳಿಡುತ್ತಿದ್ದಾರೆ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಪ್ರತಿಮ ಸಾಧಕ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹೊಂದಿದ್ದ ಇವರ ದಿಢೀ‌ ನಿಧನ ಸಂಗೀತಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸಂಗೀತಾಸಕ್ತರಿಗೆ ಆಘಾತವನ್ನುಂಟು ಮಾಡಿದೆ. ಮೃತರ ಪತ್ನಿ, ಇಬ್ಬರು ಪುತ್ರಿಯರು, ತಂದೆ ಸಹೋದರ ಸಹೋ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೋಮವಾರ ಬೆಳಿಗ್ಗೆ ಇವರ ನಿಧನದ ಸುದ್ದಿ ತಿಳಿದ ನೂರಾರು ಜನರು, ಅವರ ಶಿಷ್ಯರು ಕೋಟಖಂಡದ ಕಲ್ಲಬ್ಬೆಯಲ್ಲಿರುವ ಮನೆಗೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು.

WhatsApp
Facebook
Telegram
error: Content is protected !!
Scroll to Top