Wednesday, March 29, 2023
Homeಭಟ್ಕಳಭಟ್ಕಳ ಸೊಡಿಗದ್ದೆ ಜಾತ್ರಾ ಪೇಟೆ ಟೆಂಟ್ಗಗಳಲ್ಲಿ ತಲೆ ಎತ್ತಿದ ಅಕ್ರಮ ಜೂಜು ಅಡ್ಡಾಗಳು

ಭಟ್ಕಳ ಸೊಡಿಗದ್ದೆ ಜಾತ್ರಾ ಪೇಟೆ ಟೆಂಟ್ಗಗಳಲ್ಲಿ ತಲೆ ಎತ್ತಿದ ಅಕ್ರಮ ಜೂಜು ಅಡ್ಡಾಗಳು

ಈ ದೇವಸ್ಥಾನ ಕಮಿಟಿ ಮಾಡುತ್ತಿರುವುದಾದರು ಏನು ಪರೋಕ್ಷವಾಗಿ ಜೂಜಿಗೆ ಸಾಥ್ ಕೊಟ್ಟಿತೆ ದೇವಸ್ಥಾನ ಕಮಿಟಿ?

ಅಕ್ರಮ ಪ್ರಶ್ನಿಸಿದರೆ ಕೊಲೆ ಪ್ರಯತ್ನ . ಭಟ್ಕಳ ಮತ್ತೊಂದು ದಂಡು ಪಾಳ್ಯವಾಗಿ ಬದಲಾಗುತ್ರಿದೆಯೆ?

ಪೋಲಿಸ್ ಇಲಾಖೆ ಮಾಡುತ್ತಿರುವುದಾದರು ಏನು ಸಾರ್ವಜನಿಕರ ಆಕ್ರೋಶದ ಪ್ರಶ್ನೆ

ಭಟ್ಕಳ: ತಡ ರಾತ್ರಿಯಲ್ಲಿ ಸೊಡಿಗದ್ದೆ ಜಾತ್ರಾ ಟೆಂಟ್ಗಳು ಜೂಜು ಅಡ್ಡಾಗಳಾಗಿ ಬದಲಾಗುತ್ತಿದ್ದು ಇದನ್ನು ಪ್ರಶ್ನೇ ಮಾಡಿದವರನ್ನು ಆಮಿಷಕ್ಕೋ ಹೆದರಿಸಿಯೋ ಸುಮ್ಮನಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು ಭಟ್ಕಳ ಮತ್ತೊಂದು ದಂಡು ಪಾಳ್ಯವಾಗಿ ಬದಲಾಗಿದೆಯೆನೊ ಎಂಬ ಮಾತುಗಳು ಸಾರ್ವಜನಿಕ ವಲಯಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.

ದಿನಗಳೆದಂತೆ ಭಟ್ಕಳ ವಿಖ್ಯಾತಿಗಿಂತ ಕುಖ್ಯಾತಿಗೆ ಪ್ರಸಿದ್ದಿಯನ್ನು ಪಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಇದಕ್ಕೆಲ್ಲಾ ಏನು ಕಾರಣ ತಾಲೂಕಿನಲ್ಲಿ ಪೋಲಿಸ್ ಇಲಾಖೆ ಮಾಡುತ್ತಿರುವುದಾದರು ಏನು . ಮಾಧ್ಯಮದ ಮೇಲೆ ಹಲ್ಲೆ ಅಮಾಯಕರ ಮೇಲೆ ಹಲ್ಲೆ , ಅಮಾಯಕ ಹಲ್ಲೆಗೆ ಒಳಗಾದಾಗ ಅವನಿಗೆ ಹಲ್ಲೆ ಮಾಡಿದವರ ಮೇಲೆ ಎಪ್ ಐ ಆರ್ ಮಾಡುವುದನ್ನು ಬಿಟ್ಟು ಹಲ್ಲೆ ನಡೆಸಿದವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಕೆಲವೊಂದು ಜನಪ್ರತಿನಿದಿಗಳು ನಡೆಸುತ್ತಿದ್ದಾರೆ. ಒಂದೆ ಎರಡೆ ಒಟ್ಟಾರೆ ಭಟ್ಕಳ ತಾಲೂಕು ದಿನಗಳೆದಂತೆ ದಂಡು ಪಾಳ್ಯವಾಗಿ ಬದಲಾಗುತ್ತಿದೆಯೆನೊ ಎಂಬ ಭಯ ಸಾರ್ವಜನಿಕ ವಲಯದಲ್ಲಿ ಮನೆ ಮಾಡುತ್ತಿದೆ

ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಉತ್ತರ ಕನ್ನಡದ ಸುಪ್ರಸಿದ್ದ ಜಾತ್ರೆಯಾದ ಸೊಡಿಗದ್ದೆ ಜಾತ್ರೆಯಲ್ಲಿ ಕೆಲವೊಂದು ಜಾತ್ರ ಟೆಂಟಗಳು ರಾತ್ರಿ ಒಂದಾಗುತ್ತಿದಂತೆ ಜೂಜು ಅಡ್ಡೆಯಾಗಿ ಬದಲಾಗುತ್ತಿದೆ ರಾಜಾರೋಷವಾಗಿ ಗರಗರ್ ಮಡ್ಲದಂತ ಜೂಜುಗಳನ್ನು ಕೆಲವೊಂದ ಪಟ್ಟ ಬದ್ರ ಹಿತಾಸಕ್ತಿಗಳು ಸಾರ್ವಜನಿಕವಾಗಿ ಯಾವುದೇ ಭಯವಿಲ್ಲದೆ ಪ್ರಶ್ನೆ ಮಾಡಿದವರನ್ನು ಕೊಂಡುಕೊಂಡೋ ಅಥವಾ ಅವರಿಗೆ ಪ್ರಾಣ ಬೇದರಿಕೆಯನ್ನು ಹಾಕಿಯೋ ರಾಜಾರೋಷವಾಗಿ ನಡೆಸಲಾಗುತ್ತದೆ ಈ ಜೂಜು ಕೊರರು ಜೂಜಿನಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದಾರೆ ಅದೆ ನೆಂದರೆ ಗರ್ ಗರ್ ಮಡ್ಲದಲ್ಲಿರುವ ಡೈಸ್ ಇಸ್ಪಿಟ್ ಹೀಗೆ ಮುಂತಾದ ಸಿಂಬೋಲ್ ಗಳನ್ನು ತಗೆದು ಅಲ್ಲಿ ಪ್ರಾಣಿಗಳ ಚಿತ್ರಗಳನ್ನು ನಂಬರ್ ಗಳನ್ನು ಅಳವಡಿಸಿ ಜಾಣತನವನ್ನು ಪ್ರದರ್ಶಿಸಿದ್ದಾರೆ ಆದರೆ ಆಡುವುದು ಮಾತ್ರ ಅದೆ ಗರ್ ಗರ್ ಮಡ್ಲದ ಜೂಜಾಟ

ಸೋಡಿಗದ್ದೆ ಜಾತ್ರಾ ಟೆಂಟಿನಲ್ಲಿ ಈ ರೀತಿಯ ಅಕ್ರಮ ಜೂಜು ಅಡ್ಡಾಗಳು ತಲೆ ಎತ್ತಿದರು ತಾಲೂಕಾಡಳಿತ ಏನು ಮಾಡುತ್ತಿದ್ದೆ ಕತ್ತೆಯನ್ನು ಕಾಯುತ್ತಿದೆಯೆ ಅಥವಾ ಇವರು ಬಾಹ್ಯ ಪ್ರಪಂಚಕ್ಕೆ ಮಾತ್ರ ಸಭ್ಯಸ್ಥರು ಒಳಗೋಳಗೆ ಇಂಥಹ ಅಕ್ರಮಗಳಿಗೆ ಸಾಥ್ ನಿಡುತ್ತಿದ್ದಾರೋ ? ವಿಕ್ಷಕರೆ ಈ ಪ್ರಶ್ನೇ ನಮ್ಮದಲ್ಲಾ ಇದು ಸಾರ್ವಜನಿಕರ ಪ್ರಶ್ನೆಯಾಗಿದೆ ಭಟ್ಕಳ ತಾಲೂಕಾಡಳಿತಕ್ಕೆ ಸ್ವಲ್ಪ ಕೂಡ ಮನ ಮರ್ಯಾದೆ ಎನ್ನುವುದು ಇಲ್ಲವೆ ?

ಈ ಅಕ್ರಮ ಕ್ರತ್ಯದ ಹಿಂದೆ ಯಾರ ಕೈವಾಡವಿ ಯಾರ ಕ್ರಪಾಕಟಾಕ್ಷವಿದೆ ಜನಪ್ರತಿನಿದಿಯದ್ದೊ ಅಥವಾ ಪೊಲಿಸ್ ಇಲಾಖೆಯ ಉನ್ನತ ಅಧಿಕಾರಿಗಳದ್ದೋ ಸಂಬಂದಿಸಿದವರು ಉತ್ತರಿಸ ಬೇಕಾಗಿದೆ

ಒಟ್ಟಾರೆ ಭಟ್ಕಳ ಮತ್ತೊಂದು ದಂಡುಪಾಳ್ಯವಾಗುವಂತ ದಾಪುಗಾಲನ್ನು ಇಡುತ್ತಿದೆ ಆದ್ದರಿಂಂದ ನಮ್ಮ ದೇಶದ ಬಗ್ಗೆ ಜಿಲ್ಲೆಯ ಯಾವುದಾದರು ಜನಪ್ರತಿನಿದಿಗಳೋ ಅಥವಾ ಅಧಿಕಾರಿಗಳಲ್ಲೊ ಕಿಂಚಿತ್ತಾದರು ಕಾಳಜಿ ಇದ್ದದ್ದೆ ಹೌದಾದಲಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎನ್ನುವುದು ನಮ್ಮ‌ಕರಾವಳಿ ಸಮಾಚಾರದ ಕಳಕಳಿಯಾಗಿದೆ ಹಾಗೆ ಇಂಥಹ ಅಕ್ರಮ ಚಟುವಟಿಕೆಗಳ ಮುಖವಾಡಗಳ ಬಯಲು ಕಾರ್ಯಕ್ರಮ ನಮ್ಮ ವಾಹಿನಿ ಮಾಡುತ್ತಲೆ ಇರುತ್ತದೆ ಯಾವುದೇ ಆಮೀಷ ಅಥವಾ ಬೇದರಿಕೆಗೆ ಮಣಿಯುವ ಮಾತೆ ಇಲ್ಲ ಮಡಿದಿತೇ ಹೊರತು ಮಣಿಯಲಾರದು ಎಂಬುವುದೇ ನಮ್ಮ ವಾಹಿನಿಯ ಮಾತಾಗಿದೆ.

RELATED ARTICLES

1 COMMENT

  1. Yaw news reporter maraya..bai tegdre onde word bhatkal mattondu dandupalya agutide antella….aa word bittu bere enu elva, vishay enu ella andre short madi news madi, Jatreyalli e tara aata yella common agbittide.

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!