ಹೊನ್ನಾವರ ತಾಲೂಕ ಆಡಳಿತ ಸೌದದ ಮುಂದೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಪ್ರತಿಭಟನೆ

ರಾಜ್ಯದಾಧ್ಯಂತ ಕನಿಷ್ಟ ಕೂಲಿ ಪಿಂಚಣಿ ನೀಡುವಂತೆ ಹೊರಾಟಕ್ಕೆ ಇಳಿದ ಕಾರ್ಯಕರ್ತೆಯರು

ಹೊನ್ನಾವರ : ಕನಿಷ್ಟ ಕೂಲಿ ಹಾಗು ಸುಪ್ರೀಮ್ ಕೊರ್ಟ ಆದೇಶದಂತೆ ಪಿಂಚಣಿಯನ್ನು ನೀಡುವಂತೆ ರಾಜ್ಯದಾಂತ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ ಹೊರಾಟಕ್ಕೆ ನಿಂತಿದ್ದು ಈ ಹಿನ್ನೆಲೆಯಲ್ಲಿ ಹೊನ್ನಾವರ ತಾಲೂಕ ಆಡಳಿತ ಸೌದದ ಮುಂದೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ತಮ್ಮ ಸಂಘಟನೆ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ಸಂದರ್ಬದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅನೀತಾ ಶೇಟ್ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯಲ್ಲಿ 1973 ರಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ . ಆದರೆ ಸರಕಾರ ನಮ್ಮನ್ನು ಈಗ ಕಡೆಗಣಿಸುತ್ತಿದ್ದೆ ಕಾರಣ ನಮ್ಮ ಸ್ವತಂತ್ರ ಅಂಗನವಾಡಿ ಕಾರ್ಯಕರ್ತೆರು ಸಹಾಯಕಿಯರ ಸಂಘಟನೆ ಜನವರಿ 18 ರಿಂದ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು ಕಾರಣ ಹೊನ್ನಾವರದಲ್ಲೂ ಕೂಡಾ ನಾವು ಪ್ರತಿಭಟನೆ ನಡೆಸುತ್ತಿದ್ದೆವೆ ನಮ್ಮ ಹೊರಾಟ ನಮಗೆ ನ್ಯಾಯ ಸಿಗುವವರೆಗೂ ಮುಂದುವರಿಯುತ್ತದೆ ಎಂದು ಹೇಳಿದರು.

ಇದೆ ಸಂದರ್ಬದಲ್ಲಿ ಹೊನ್ನಾವರ ತಾಲೂಕ ಅಧ್ಯಕ್ಷರಾದ ಮಮತಾ ಶೇಟ್ಟಿ ಮಾತನಾಡಿ ರಾಜ್ಯದಾದ್ಯಂತ ನಮ್ಮ ಹೊರಾಟ ನಡೆಯುತ್ತಿದೆ ಹೊರಾಡದಲ್ಲಿ ಇಬ್ಬರು ಕಾರ್ಯಕರ್ತೆಯರು ತಮ್ಮ ಜಿವವನ್ನು ಕಳೆದುಕೊಂಡಿದ್ದಾರೆ ನಮ್ಮ ಹೊರಾಟ ಇಲ್ಲಿಗೆ ನಿಲ್ಲುವುದಿಲ್ಲಾ ನ್ಯಾಯ ಸಿಗುವವರೆಗೂ ಹೊರಾಟ ನಡೆಯುತ್ತದೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಹೊರಾಟಕ್ಕೆ ರಾಜ್ಯದ ರಾಜದಾನಿಯಲ್ಲಿ ಪೊಲೀಸ್ ಇಲಾಖೆಯ ಅಸಹಕಾರದ ವಿರುದ್ದ ಆಕ್ರೋಶಗಳು ಕೇಳಿಬಂದರು ಹೊನ್ನಾವರ ತಾಲೂಕಿನಲ್ಲಿ ಪೊಲಿಸ್ ಇಲಾಖೆ ಹೊರಾಟ ನಿರತ ಕಾರ್ಯಕರ್ತೆಯರಿಗೆ ಸಂಪೂರ್ಣ ಸಹಕಾರವನ್ನು ಮತ್ತು ಪೋಲಿಸ್ ಪ್ರೋಟೆಕ್ಷನ್ ನಿಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ

ಪ್ರತಿಭಟನೆಯಲ್ಲಿಜಿಲ್ಲಾ ಉಪಾಧ್ಯಕ್ಷೆ ನಾಗವೇಣಿ ನಾಯ್ಕ ಖಜಾಂಚಿ ಮಂಗಳಾ ನಾಯ್ಕ ತಾಲೂಕ ಕಾರ್ಯದರ್ಶಿ ಸಾವಿತ್ರಿ ಮೂಕ್ರಿ, ಹಾಗು ಅನೇಕ ಕಾರ್ಯಕರ್ತೆಯರು ಸಹಾಯಕಿಯರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top