ನಮ್ಮ ಸಮೂದಾಯದವರು ರಾಜಕಿಯವಾಗಿ ತುಂಬ ಹಿಂದುಳಿದಿದ್ದೆವೆ ಪ್ರಣವಾನಂದ ಸ್ವಾಮಿಜಿ

ಸಿದ್ದಾಪುರ:- ನಮ್ಮ ಒಳಿತಿಗಾಗಿ ಹೋರಾಟ ಮಾಡಲು ಹೊರಟರೆ ಅದಕ್ಕೆ ಕೆಲವರು ಸಹಕಾರ ನೀಡಿದರೆ ಕೆಲವರು ಅಡ್ಡಗಾಲು ಹಾಕುತ್ತಾರೆ. ಹಾಗಾಗಿ ಸಣ್ಣ ಸಮುದಾಯದವರಾವ ನಾವು ರಾಜಕೀಯವಾಗಿ ತುಂಬಾ ಹಿಂದುಳಿದಿದ್ದೇವೆ ಎಂದು ಕಲಬುರಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾದ್ಯಕ್ಷರಾದ ಪ್ರಣವಾನಂದ ಸ್ವಾಮಿಜಿ ಹೇಳಿದರು.


ಅವರು ಈಡಿಗ, ಬಿಲ್ಲವ, ನಾಮದಾರಿ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಏಳಿಗೆಗಾಗಿ ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ತನಕ ಹಮ್ಮಿಕೊಂಡಿದ್ದ ಪಾದಯಾತ್ರೆಯು ಸಿದ್ದಾಪುರ ತಲುಪಿದ ಸಂದರ್ಭದಲ್ಲಿ ತಾಲೂಕಿನ ಕೊಂಡ್ಲಿಯ ಮಾರಿಕಾಂಬಾ ಮೈದಾನದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರದಲ್ಲಿ ಜಾತಿ ಆಧಾರದಮೇಲೆ ಹಾಗೂ ಸಂಘಟನೆಯ ಆದಾರದ ಮೇಲೆ ನಿಗಮಂಮಡಳಿ ರಚನೆ ಮಾಡುತ್ತಾರೆ. ಆದರೆ ನಮ್ಮ ಸಮುದಾಯದ ಸಂಘಟನೆಯಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ವಂಚಿತರಾಗುತ್ತಿದ್ದೇವೆ.
ನಮ್ಮ ರಾಜ್ಯದಲ್ಲಿ 26 ಉಪ ಪಂಗಡಗಳು ಸೇರಿ ಸುಮಾರು 70 ಲಕ್ಷ ಜನಸಂಖ್ಯೆ ಇರುವ ನಮಗೆ ಕೆಲವು ಸಂದರ್ಭದಲ್ಲಿ ಕ್ಯಾಬಿನೆಟ್ ಮತ್ತು ನಿಗಮಂಡಳಿಗಳಲ್ಲಿ ವಿಚಾರ ದಲ್ಲೂ ಅನ್ಯಾಯವಾಗುತ್ತಿದೆ.
ಸರ್ಕಾರ ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ಸಿಗಂದೂರು ದೇವಾಲಯ ಮೇಲ್ವರ್ಗದವರ ಕೈಗೆ ನೀಡಲು ಹುನ್ನಾರ ನಡೆಸಿದೆ.
ನಾವು ಎಚ್ಚೇತ್ತುಕೊಳ್ಳದಿದ್ದರೆ ಇಂದು ಸಿಗಂದೂರು ದೇವಾಲಯಕ್ಕೆ ನೋಟೀಸ್ ನೀಡಿದಂತೆ ನಾಳೆ ಬಿಲ್ಲವ ಸಮುದಾಯದ ಎರಡು ಕಣ್ಣುಗಳಾದ ಮಂಗಳೂರಿನ ಕುದ್ರೋಳಿ ಮತ್ತು ಉಡುಪಿ ಕಟ್ಟಪ್ಪಾಡಿ ದೇವಾಲಯಕ್ಕೂ ನೋಟೀಸ್ ನೀಡುತ್ತಾರೆ.
ನಿಮ್ಮ ರಾಜಕೀಯ ಲಾಭಕ್ಕೋಸ್ಕರ, ಅಧಿಕಾರಕ್ಕೋಸ್ಕರ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮುದಾಯದ ಧಾರ್ಮಿಕ ಕೇಂದ್ರಗಳನ್ನು ಬಲಿಕೊಡುತ್ತಿದ್ದೀರಿ. ನೀವು ಹಾಕಿರುವ ಕೇಸುಗಳನ್ನು ವಾಪಸ್ ಪಡೆದು ಕ್ಷಮೆ ಕೇಳದಿದ್ದಲ್ಲೀ ಪರಿಣಾಮ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಸೇಂದಿ ಬಂದ್ ಮಾಡಿ ನಾಮಧಾರಿಗಳು, ಬಿಲ್ಲವರು, ದೀವರು ಎಲ್ಲಾ ಸಮುದಾಯ ಒಗ್ಗಟ್ಟಾಗದಂತೆ ಮಾಡಿದ್ದಾರೆ ಇಂದು ಧಾರ್ಮಿಕ ಕೇಂದ್ರಗಳ ಮೇಲೆ ಕಣ್ಣು ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ.
ಸಿದ್ದಾಪುರ ತಾಲೂಕಿನಲ್ಲಿ ನಾಮದಾರಿ ಸಮುದಾಯದವರು 48 ಸಾವಿರ ಜನ ಇದ್ದೀರಾ ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಮೇಲವರ್ಗದ ನಾಯಕರು ನಮ್ಮ ನಮ್ಮಲ್ಲೆ ಒಳ ಜಗಳಗಳನ್ನು ಹಚ್ಚಿ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ನಮ್ಮ ಸಮುದಾಯದ ವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮೂರು ಪಕ್ಷದವರು ನಮಗೆ ಟಿಕೆಟ್ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಪಾದಯಾತ್ರೆ ಸಮಿತಿಯ ಗೌರವಾಧ್ಯಕ್ಷ ವೀರಭದ್ರ ನಾಯ್ಕ, ಅಧ್ಯಕ್ಷ ಕನ್ನೇಶ್ವರ ನಾಯ್ಕ, ಕೆ ಜಿ ನಾಯ್ಕ, ಹೊನ್ನಗೋಡ ರತ್ನಾಕರ, ಸಿ ಎಫ್ ನಾಯ್ಕ, ರವೀಂದ್ರ ನಾಯ್ಕ, ಡಾ. ವೆಂಕಟೇಶ ನಾಯ್ಕ, ಕೆ ಜಿ ನಾಗರಾಜ, ವಿ  ಎನ್ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಉಲ್ಲಾಸ ನಾಯ್ಕ ಅಂಕೋಲಾ, ನಾಗರಾಜ ನಾಯ್ಕ ಬೇಡ್ಕಣಿ ಮೊದಲಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top