ಸಿದ್ದಾಪುರದ ಕಡಕೇರಿ ಗ್ರಾಮದಲ್ಲಿ ಶೃದ್ಧಾ ಭಕ್ತಿ ಯಿಂದ ನಡೆದ ಹೊಳೆಹಬ್ಬ”


ಸಿದ್ದಾಪುರ:- ಪ್ರತಿಯೊಂದು ಹಳ್ಳಿಗಳಲ್ಲಿಯೂ ತನ್ನದೇ ಆದ ವಿಶಿಷ್ಟವಾದ ಹಬ್ಬ ಹರಿದಿನಗಳು ಆಚರಣೆಯಲ್ಲಿರುತ್ತವೆ. ಕೊಯ್ಲು ಮುಗಿದು ಚಳಿಗಾಲ ಆರಂಭವಾಗುವ ದಿನಗಳಲ್ಲಿ ಪುಷ್ಯ (ಶೂನ್ಯ) ಮಾಸದಲ್ಲಿ ಕೃಷಿಕರು ಹಾಗೂ ಕೂಲಿಕಾರ್ಮಿಕರು ಹೆಚ್ಚಿರುವ ಮಲೆನಾಡ ಹಳ್ಳಿ ಕಡಕೇರಿ ಯಲ್ಲಿ “ಹೊಳೆಹಬ್ಬ” ವನ್ನು ಶೃದ್ಧಾ ಭಕ್ತಿ ಯಿಂದ ಆಚರಿಸಲಾಗುತ್ತದೆ.
ಮಳೆ ಬೆಳೆ ಚನ್ನಾಗಿ ಆಗಲಿ. ಮನುಷ್ಯರಿಗೆ, ಜಾನುರುಗಳಿಗೆ ಯಾವುದೇ ರೋಗರುಜಿನಗಳು ಬಾರದಿರಲಿ ಎಂದು ಶ್ರೀ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.
ಗ್ರಾಮಸ್ಥರೆಲ್ಲರೂ ಸೇರಿ ಗಂಗಾ ಮಾತೆಯ ನೆನೆದು “ಹೊಳೆಯಮ್ಮ ದೇವಿ”ಯನ್ನು ಪಲ್ಲಕ್ಕಿ ಯಲ್ಲಿ ಮೆರವಣಿಗೆ ಮಾಡಿ, ಊರಿಗೆ ಸಮೀಪದ ಭಿಮನಗುಂಡಿ ಹೊಳೆಯಲ್ಲಿ ದೇವಿಯ ಪೂಜೆ ಮಾಡಲಾಗುವುದು.
ಊರಿನ ಸಮಸ್ತರೊಡಗೂಡಿ ಅಲ್ಲಿ ಪೂಜಿಸಿ ತಮ್ಮ ಹರಕೆಯನ್ನು ತೀರಿಸಿ ಸಂಭ್ರಮಿಸಿ ಪುನಿತರಾಗುತ್ತಾರೆ. ಗಣಪತಿ ಗೌಡ ರವರ ನೇತೃತ್ವದಲ್ಲಿ ಬಾವಿಕಟ್ಟೆ ಕುಟುಂಬದವರು ಸಂಪೂರ್ಣ ಪೂಜಾ ಕಾರ್ಯವನ್ನು ನೆರೆವೆರಿಸುತ್ತಾರೆ.
ಮೊದಲು ಗ್ರಾಮಸ್ಥರೆಲ್ಲರೂ ಸೇರಿ ಹೊಳೆಯಲ್ಲಿ ಅಡುಗೆಮಾಡಿ ಊಟ ಮಾಡಿ ಬರುವ ವಾಡಿಕೆ ಇತ್ತು. ಆದರೆ ಊರೂ ದೊಡ್ಡದಾದಂತೆ ಹೊಳೆಯಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮನೆಯಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಆಮಂತ್ರಿಸಿ ಹಬ್ಬದೂಟ ಮಾಡಿ ಸಂಭ್ರಮಿಸುತ್ತಾರೆ.

WhatsApp
Facebook
Telegram
error: Content is protected !!
Scroll to Top