ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನೆ

ಯುವ ಪೀಳಿಗೆಯನ್ನು ವ್ಯಸನದತ್ತ ತಳ್ಳುತ್ತಿರುವ ಸರಕಾರದ ಕ್ರಮಕ್ಕೆ ಖಂಡನೆ

ಭಟ್ಕಳ ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ ಪೀಳಿಗೆಯನ್ನು ಮಧ್ಯ ವ್ಯಸನಕ್ಕೆ ತಳ್ಳುತ್ತಿರುವ ಕ್ರಮ ಖಂಡನೀಯ.ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು .

ನಗರದ ಶಮ್ಸುದ್ದೀನ್ ಸರ್ಕಲ್ ಬಳಿ ಇರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಬದಲ್ಲಿವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಪಾರುಕ್ ಶೇಕ್ ಮಾತನಾಡಿ
ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು, ಯುವಕರನ್ನು ವ್ಯಸನಕ್ಕೆ ದೂಡಿ ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಿರ್ವವಾಗಿ ವಿರೋಧಿಸುತ್ತದೆ.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿತ ಹಲವು ಕುಟುಂಬಗಳನ್ನು ಬೀದಿ ಪಾಲು ಮಾಡಿದೆ.

ಕೂಡಲೇ ಸರಕಾರ ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಗಳು 1967ರ ವಿಧೇಯಕಕ್ಕೆ ತಿದ್ದುಪಡಿ ತರುವ ವಿಚಾರ ಕೈ ಬಿಡಬೇಕು. ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇವೆ.ಎಂದು ಹೇಳಿದರು

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್ ಉಪಾಧ್ಯಕ್ಷರು ಅಬ್ದುಲ್ ಜಬ್ಬಾರ್ ಅಸದಿಮುಖಂಡರಾದ: ಅಬ್ದುಲ್ ಮಾಜಿದ್ ಕೋಲಾ, ಜಹೂರ್ ಲಾಟ್, ಕಮ್ರುದ್ದೀನ್, ಸೇರಿದಂತೆ ಮುಂತಾದವರು ಉಪಸ್ತಿತರಿದ್ದರು.

WhatsApp
Facebook
Telegram
error: Content is protected !!
Scroll to Top