ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರತಿಭಟನೆಗೆ ಕೊರ್ಟ ತಡೆಯಾಜ್ಞೆ

ಮಾಹಿತಿ ಹಕ್ಕು ಕಾರ್ಯಕರ್ತರಿಂದ ಸಹಾಯಕ ಆಯುಕ್ತರಿಗೆ ಮನವಿ

ನಮ್ಮ ಹೋರಾಟ ನಿಲ್ಲದು ಕಾದು ನೋಡಿ ವೇದಿಕೆಯ ಉಪಾಧ್ಯಕ್ಷ ಶಂಕರ್ ನಾಯ್ಕ ಬೆಟ್ಕೂರ್

ಭಟ್ಕಳ ತಾಲೂಕ ಬೆಳ್ಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ನಡೆಯ ಬೇಕಿದ್ದ ಪ್ರತಿಭಟನೆಗೆ ವಿರುದ್ದವಾಗಿ ಸಹಕಾರಿ ಸಂಘದ ಆಡಳಿತ ಕಮಿಟಿ ಕೊರ್ಟ ಮೋರೆ ಹೋಗಿ ಪ್ರತಿಭಟನೆಗೆ ತಡೆಯಾಜ್ಞೆಯನ್ನು ತರಲು ಯಶಸ್ವಿಯಾಗಿದ್ದು ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಸಂಘಟನೆ ಭಟ್ಕಳ ತಾಲೂಕ ಸಹಾಯಕ ಆಯುಕ್ತರ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲಿಸಿ ಉಗ್ರ ಹೊರಾಟದ ಕರೆಗಂಟೆಯನ್ನು ಒತ್ತಿದ್ದಾರೆ.

ಮನವಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿರುವ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬೆಳಕೆ  ಈ ಸಾರ್ವಜನಿಕ ಸಂಸ್ಥೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂದೇಹವಿರುವುವುದರಿಂದ ತನಿಖೆಗೆ ಒತ್ತಾಯಿಸಲು ನಮ್ಮ ವೇದಿಕೆಯ ಭಟ್ಕಳ ತಾಲೂಕು ಅಧ್ಯಕ್ಷರಾದ ನಾಗೇಂದ್ರ ಶಂಕರ ನಾಯ್ಕ ಇವರು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸದರಿ ಸಂಸ್ಥೆಯ ಹೊಸ ಕಟ್ಟಡದ ಸಂಪೂರ್ಣ ಖಚು೯  ವೆಚ್ಚದ ಮಾಹಿತಿ, ಕಟ್ಟಡದ ಅಂದಾಜು ಪತ್ರಿಕೆ ಹೊಸ ಕಟ್ಟಡದ ಉದ್ಘಾಟನೆಯ ದಿನದ ಖಚು೯  ವೆಚ್ಚ  ಮತ್ತು 2018ರ ನಂತರ ಸಿಬ್ಬಂದಿಯ ನೇಮಕಾತಿಗೆ ಸಂಬಂಧಿಸಿದಂತೆ ಸಹಕಾರಿ ಸಂಘಗಳ ಇಲಾಖೆಯವರು ನೀಡಿರುವ ವೃಂದ ಬಲದ ಆದೇಶ ಪ್ರತಿ ಮತ್ತು ಹೊಸ ಶಾಖೆಯನ್ನು  ತೆರೆಯಲು ಇಲಾಖೆಯಿಂದ  ಪಡೆದ ಅನುಮತಿ ಪ್ರತಿ  ಹಾಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಮಾಹಿತಿಯನ್ನು ಕೇಳಿದ್ದರು ನೀಡದೆ ಕತ೯ವ್ಯ ಉಲ್ಲಂಘನೆ ಮಾಡಿದ್ದಾರೆ ಮತ್ತು ಮಾಹಿತಿ ದಾಖಲೆಗಳನ್ನು ಷೇರುದಾರು ಹಾಗೂ ಸಾರ್ವಜನಿಕರಿಗೆ ಮರೆಮಾಚಿಸಿರುವುದಲ್ಲದೆ ಇದೀಗ  ಅಕ್ರಮವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹೊರಟಿರುವ  ಆಡಳಿತ ಮಂಡಳಿಯ ಕಾಯ೯ವೈಕರಿ ಹಾಗೂ ಅಕ್ರಮ ನೇಮಕಾತಿ ಮಾಡಿಕೊಳ್ಳುವ ಮೊದಲು ಸರಿಯಾದ ತನಿಖೆಯನ್ನು ಮಾಡುವಂತೆ ಮತ್ತು ಸಕಾ೯ರದ ಆದೇಶ ಸಹಕಾರಿ ಇಲಾಖೆ ಸುತ್ತೋಲೆ ಹೈಕೋರ್ಟ್ ಆದೇಶ ಪಾಲಿಸದೆ ಸಹಕಾರಿ ಸಂಘದವರು ಎ ವಿಪಲವಾಗಿರುವುರಿಂದ. ನಾವು ಸಂವಿಧಾನ ಸಾವ೯ಜನಿಕರಿಗೆ ನೀಡಿರುವ ಮೂಲಭೂತ ಹಕ್ಕು ಮೂಲಭೂತ ಕತ೯ವ್ಯದ ಜವಾಬ್ದಾರಿಯನ್ನು ಅರಿತು ಈ ದಿನ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತ ವೇದಿಕೆಯವರು ಬಂದು ಇಲ್ಲಿ ಪ್ರತಿಭಟನೆ ಮಾಡಿ ಸಕಾ೯ರಿ ಆದೇಶ ಇಲಾಖೆಯ ಸುತ್ತೋಲೆ ಹೈಕೋರ್ಟ್ ಆದೇಶ ಪಾಲನೆಮಾಡಿ ಸಂವಿಧಾನ ಉಳಿಸಿ ಎಂದು ಕೇಳಬೇಕಾಯಿತು. ಆದ್ದರಿಂದ ಈ ಮೇಲ್ಕಂಡ ಗ್ರಾಮದಲ್ಲಿರುವ ಗ್ರಾಮೀಣ ಸೇವಾ ಸಹಕಾರಿ ಸಂಘ ಬೆಳಕೆ ಇದರಲ್ಲಿ ನಡೆದಿರುವ  ಭ್ರಷ್ಟಾಚಾರದ ತನಿಖೆ ನಡೆಸಿ  ಅಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರ ಮೇಲೆ  ಕ್ರಿಮಿನಲ್ ಪ್ರಕರಣ  ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ  ಈ ಪ್ರತಿಭಟನೆ ಮೂಲಕ ಒತ್ತಾಯಿಸುತ್ತೇವೆ ಎಂದು ಮನವಿ ಸಲ್ಲಿಸಿದರು.

ಈ ಸಂದರ್ಬದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಅರ್ಜುನ್ ಮಲ್ಯ, ತಾಲೂಕ ಘಟಕದ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ಶಂಕರ್ ನಾಯ್ಕ ಬೆಟ್ಕೂರ್ , ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ , ಸಹ ಕಾರ್ಯದರ್ಶಿ ವಸಂತ ದೇವಾಡಿಗ ನಾಗಪ್ಪ ನಾಯ್ಕ , ಹನುಮಂತ ನಾಯ್ಕ ಬೆಳ್ಕೆ ಗೊವಿಂದ ಈರಪ್ಪ ನಾಯ್ಕ , ಜಗದೀಶ ಸೊಮಯ್ಯ ನಾಯ್ಕ, ದಿನೇಶ ನಾಯ್ಕ, ಜಗ್ಗು ನಾಯ್ಕ, ಗಣಪತಿ ನಾಯ್ಕ ,ತಿಮ್ಮಯ್ಯ ನಾಯ್ಯ ಸುಕ್ರಪ್ಪ ನಾಯ್ಕ , ರವಿ ನಾಯ್ಕ ಬಾಸ್ಕರ್ ಗೊಂಡ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top