ಭಟ್ಕಳ ಬೆಳ್ಕೆ ಕಾನಮದ್ಲು ಕೊಚ್ರೆ ದುರ್ಗಾಪರಮೇಶ್ವರಿ ದೇವಸ್ಥಾನದ 95 ನೇ ವರ್ಷದ ವರ್ದಂತಿ ಉತ್ಸವ

ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದು ಪುನೀತರಾದ ಭಕ್ತಾಧಿಗಳು

ಭಟ್ಕಳ ತಾಲೂಕ ಬೆಳ್ಕೆ ಕಾನಮದ್ಲು ಕೊಚ್ರೆ ದುರ್ಗಾ ಪರಮೇಶ್ವರಿ ದೇವಸ್ಥಾನದ 95 ವರ್ದಂತಿ ಉತ್ಸವವು ಅತಿ ವಿಜ್ರಂಬಣೆಯಿಂದ ನಡೆಯಿತು.

ತಾಲೂಕಿನ ಬೆಳ್ಕೆ ಕಾನಮದ್ಲು ಕೊಚ್ರೆ ದುರ್ಗಾಪರಮೇಶ್ವರಿ ದೇವಸ್ಥಾನ ಇದೊಂದು ಅತಿ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನದ 95 ನೆ ವರ್ಷದ ವರ್ದಂತಿ ಉತ್ಸವವು ಅತಿ ವಿಜ್ರಂಬಣೆಯಿಂದ ರವಿವಾರ ಬೆಳಿಗ್ಗೆಯಿಂದ ಪೂಜಾ ಕೈಂಕರ್ಯ ಪ್ರಾರಂಬವಾಗಿದ್ದು ಕಲಶಾಭಿಷೇಕ ಮಧ್ಯಾನ ಮಹಾ ಅನ್ನ ಸಂತರ್ಪಣೆ, ರಾತ್ರಿ ದೇವಿ ಮಹಾತ್ಮೆ ಎನ್ನುವ ಪೌರಾಣಿಕ ಯಕ್ಷಗಾನ ಪ್ರದರ್ಶನ ಮಾಡಲಾಯಿತು ಈ ಸಂದರ್ಬದಲ್ಲಿ ನೂರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರಿ ದೇವಿಯ ಕ್ರಪೇಗೆ ಪಾತ್ರರಾದರು . ಈ ಸಂದರ್ಬದಲ್ಲಿ ಭಕ್ತರೊಬ್ಬರು ಮಾತನಾಡಿ ದುರ್ಗಾಪರಮೇಶ್ವರಿ ಅಮ್ಮನವರು ಗ್ರಾಮದ ಅಭಿವೃದ್ದಿಗೆ ಯಾವತ್ತು ನಿಂತಿದ್ದು ಸಕಲ ಭಕ್ತಗಣಕ್ಕೆ ಆಶಿರ್ವಾದವನ್ನು ಮಾಡುತ್ತಿದ್ದು ನಂಬಿದವರನ್ನು ಯಾವತ್ತು ಕೈಬಿಡಲಾರಳು ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top