ಭಟ್ಕಳ ಮಾವಳ್ಳಿ 2 ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಅವಿಶ್ಚಾಸ ಗೊತ್ತುವಳಿ ಮೂಲಕ ಅಧಿಕಾರದಿಂದ ಕೆಳಗಿಳಿಸಿದ ಪಂಚಾಯತ್ ಸದಸ್ಯರು

ಅಧ್ಯಕ್ಷ ಮಹೇಶ ನಾಯ್ಕ ಹಿಟ್ಲರ್ ತನವೆ ಮುಳುವಾಯಿತೆ

ಪಕ್ಷಾತಿತವಾಗಿ ಒಗ್ಗೂಡಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿದ ಸದಸ್ಯರು

ಭಟ್ಕಳ ತಾಲೂಕ ಮಾವಳ್ಳಿ 2 ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ನಾಯ್ಕ ಅವರನ್ನು ಅವಿಶ್ವಾಸ ಗೊತ್ತುವಳಿಯ ಮೂಲಕ ಪಂಚಾಯತ್ ಸದಸ್ಯರು ಅಧಿಕಾರದಿಂದ ಕೆಳಗಿಳಿಸಿದ ಘಟನೆ ನಡೆದಿದೆ

ಬಿಜೆಪಿ ಪ್ರಾಬಲ್ಯವನ್ನು ಹೊಂದಿರುವ ಗ್ರಾಮ ಪಂಚಾಯತಲ್ಲೆ ಶಾಸಕ ಸುನಿಲ್ ನಾಯ್ಕ ಆಪ್ತ ಅಧ್ಯಕ್ಷ ಮಹೇಶ ನಾಯ್ಕ ಅವರನ್ನು ಅಧಿಕಾರದಿಂದ ಕೆಳಗಸಿದ ಸದಸ್ಯರು

ಮಾವ಼ಳ್ಳಿ 2 ಇದೊಂದು ಬಿಜೆಪಿ ಪ್ರಾಭಲ್ಯವನ್ನು ಹೊಂದಿರು ಪಂಚಾಯತ್ ಆಗಿದ್ದು ಈ ಪಂಚಾಯತ್ ಅಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗು ಹಾಲಿ ಶಾಸಕ ಸುನಿಲ್ ನಾಯ್ಕ ಅವರ ಪರಮಾಪ್ತ ಮಹೇಶ ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಹೇಶ ನಾಯ್ಕ ಅವರ ವಿರುದ್ದ ಪಂಚಾಯತ್ ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು ಕಾರಣ ಮಹೇಶ ನಾಯ್ಕ ಅವರ ಹಿಟ್ಲರ್ ಮನೋಭಾವದ ಆಡಳಿತವಾಗಿತ್ತು ಎಂದು ಪಂಚಾಯತ್ ಸದಸ್ಯರು ಹೇಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಇವರ ವಿರುದ್ದ ಅವಿಶ್ವಾಸ ಗೊತ್ತುವಳಿಯನ್ನು ಸಹಾಯಕ ಆಯುಕ್ತರಲ್ಲಿ ಮಂಡಿಸಲಾಗಿತ್ತು ಇದರ ಮುಂದುವರಿದ ಬಾಗವೆನ್ನುವಂತೆ ಇಂದು ಅಂದರೆ ಜನವರಿ 11 ರಂದು ಅಧ್ಯಕ್ಷ ಮಹೇಶ ನಾಯ್ಕ ಅವರ ವಿರುದ್ದ 12 ಜನ ಪಂಚಾಯತ್ ಸದಸ್ಯರು ಪಕ್ಷಾತೀತವಾಗಿ ಅವಿಶ್ವಾಸ ಮತ ಚಲಾಯಿಸುವುದರ ಮೂಲಕ ಅಧ್ಯಕ್ಷ ಮಹೇಶ ನಾಯ್ಕ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು.

ಮಹೇಶ ನಾಯ್ಕ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮುಖ್ಯ ಕಾರಣ ಯಾವುದೇ ನಿರ್ದಾರವನ್ನು ತೆಗೆದುಕೊಳ್ಳುವಾಗ ಹಿಟ್ಲರ್ ಅಂತೆ ಎಕಪಕ್ಷಿಯವಾಗಿ ನಿರ್ದಾರವನ್ನು ತೆಗೆದುಕೊಳ್ಳುತ್ತಾರೆ ಇದನ್ನು ಸಹಿಸಲು ಆಗದೆ ಅವಿಶ್ವಾಸ ಗೊತ್ರುವಳಿಯ ಮೂಲಕ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೆವೆ ಎಂದು ಪಂಚಾಯತ್ ಸದಸ್ಯರು ಹೇಳುತ್ತಿದ್ದಾರೆ

ಇಲ್ಲಿ ಮುಖ್ಯವಾಗಿ ಗಮನಿಸಬಹುದಾದ ಅಂಶವೆಂದರೆ ಈ ಅವಿಶ್ವಾಸ ಗೊತ್ತುವಳಿ ಪರ ಮತದಾನ ಮಾಡಿ 12 ಜನ ಸದಸ್ಯರಲ್ಲಿ ಬರೊಬ್ಬರಿ 8 ಜನ ಸದಸ್ಯರು ಬಿಜೆಪಿ ಬೆಂಬಲಿತರು ಎನ್ನುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ ಕೇವಲ ೪ ಜನ ಮಾತ್ರ ಕಾಂಗ್ರೇಸ್ ಬೆಂಬಲಿತರಾಗಿದ್ದಾರೆ ವಿಕ್ಷಕರೆ ನೀವೆ ಊಹಿಸಿಕೊಳ್ಳಿ ಆಡಳಿತ ಪಕ್ಷದ ಬಿಜೆಪಿ ಶಾಸಕ ಸುನಿಲ್ ನಾಯ್ಕ ಅವರ ಪರಮಾಪ್ತ ಮಹೇಶ ನಾಯ್ಕ ಅವರನ್ನು ಬಿಜೆಪಿ ಬೆಂಬಲಿತರೆ ಅಧಿಕಾರದಿಂದ ಇಳಿಸುತ್ತಾರೆ ಎಂದರೆ ಇಲ್ಲಿ ಯಾವ ಪ್ರಮಾಣದಲ್ಲಿ ಸದಸ್ಯರು ರೋಸಿಹೊಗಿರಬಹುದು ಎಂದು

ಈ ಅವಿಶ್ವಾಸ ಗೊತ್ತುವಳಿಯನ್ನು ನಿಲ್ಲಿಸಲು ಹಾಲಿ ಶಾಸಕ ರು ಶತಾಯಗತಾಯ ಪ್ರಯತ್ನವನ್ನು ನಡೆಸಿದ್ದರು ಆದರೆ ಶಾಸಕರು ತಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ಸೋತು ಹೊದರು ನಮ್ಮ ಪರಮಾಪ್ತನ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ವಿಪಲರಾದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ ಮಾವಳ್ಳಿ 2 ಪಂಚಾಯತ್ ನ ಅಧ್ಯಕ್ಷ ಶಾಸಕರ ಆಪ್ತರಾದ ಮಹೇಶ ನಾಯ್ಕ ಅವರನ್ನು ಬಿಜೆಪಿ ಬೆಂಬಲಿತ ಸದಸ್ಯರೆ ಅವಿಶ್ವಾಸ‌ ಗೊತ್ತುವಳಿ ಮೂಲಕ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಿರುವದು ಭಟ್ಕಳ ಹೊನ್ನಾವರ ರಾಜಕಿಯ ಕ್ಷೇತ್ರದಲ್ಲಿನ ನೈಜ ಚಿತ್ರಣದ ಬಗ್ಗೆ ವಿವರಣೆಯನ್ನು ನಿಡುತ್ತದೆ

WhatsApp
Facebook
Telegram
error: Content is protected !!
Scroll to Top