ಪರಿಸರ ಜಾಗ್ರತಿಗಾಗಿ ಶಿಕ್ಷಕ ವೃತ್ತಿ ತೊರೆದು ದೇಶ ವ್ಯಾಪಿ ಸೈಕಲ್ ಜಾತ ಪ್ರಾರಂಬಿಸಿದ ಅನುಬು

ಸೈಕಲ್ ತುಳಿಯುವುದರಿಂದ ಆರೋಗ್ಯ ವೃದ್ದಿ ಅನುಬು

ಭಟ್ಕಳ ಃ ತಮಿಳು ನಾಡಿನ ಅನ್ಬು ಚಾರ್ಲ್ಸ ಹಿಂದೆ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದರು 2005 ರಲ್ಲಿ ಪ್ರಕ್ರತಿ ವಿಕೋಪದಿಂದ ಉಂಟಾದ ಸಾವು ನೊವುಗಳಿಂದ ಘಾಸಿಯಾಗಿ ಪರಿಸರ ಜಾಗ್ರತಿಗಾಗಿ ತನ್ನ ಶಿಕ್ಷಕ ವೃತ್ತಿಯನ್ನೆ ತೊರೆದು ಸೈಕಲ್ ಜಾತಾದ ಮೂಲಕ ದೇಶ ಪರ್ಯಟನೆ ಮೂಲಕ ಪರಿಸರ ಜಾಗ್ರತಿಗೆ ಮುಂದಾಗಿದ್ದಾರೆ.

ದೇಶದಾಧ್ಯಂತ ಸೈಕಲ್ ಮೂಲಕ ಸಂಚರಿಸಿ ವಿವಿದ ಶಾಲೆಗಳಿಗೆ ಬೇಟಿಕೊಟ್ಟು ಮಕ್ಕಳಿಗೆ ಉಪನ್ಯಾಸ ನೀಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಜಾಗ್ರತಿ ಮೂಡಿಸುತ್ತಿದ್ದಾರೆ ಅವಿವಾಹಿತರಾಗಿರುವ ಇವರು ಸತತ 18 ವರ್ಷಗಳಿಂದ ದೇಶದ ಮೂಲೆ ಮೂಲೆಗಳಲ್ಲಿರುವ ಶಾಲೆಗಳಿಗೆ ಸಂಚರಿಸಿ ಶಾಲೆ ಮಕ್ಕಳಲ್ಲಿ ಪರಿಸರದ ಜಾಗ್ರತಿಗಾಗಿ ಅರಣ್ಯದ ಮಹತ್ವ ನೀರಿನ ಮಹತ್ವ ಪರಿಸರವನ್ನು ಹೇಗೆ ರಕ್ಷಿಸಬಹುದು ಜಾಗತಿಕ ತಾಪಮಾನದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗ್ರತಿಯನ್ನು ಮೂಡಿಸುತ್ತಿದ್ದಾರೆ. ನಿತ್ಯ 20 ಕಿ.ಮಿ ಸೈಕಲ್ಲಿನಲ್ಲಿ ಸಂಚರಿಸುವ ಇವರು 65 ರ ಇಳಿ ವಯಸ್ಸಿನಲ್ಲಿಯು ಕೂಡ 18 ರ ಯುವಕನಂತೆ ಉತ್ಸಾಹಿಯಾಗಿದ್ದಾರೆ ಇಲ್ಲಿಯವರೆಗೆ 60,000 ಕ್ಕೂ ಹೆಚ್ಚು ಕಿ.ಮಿ ಗಳನ್ನು ಸೈಕಲ್ಲಿನಲ್ಲಿ ಸಂಚರಿಸಿದ್ದಾರೆ.

ಸೈಕಲ್ ಬಳಸಿ ಪರಿಸರ ಉಳಿಸಿ ದ್ಯೇಯವಾಕ್ಯದೊಂದಿಂಗೆ ಸಂಚರಿಸುವ ಇವರು ನೂರರಲ್ಲಿ 20 ಜನ ಮಕ್ಕಳು ನನ್ನ ಮಾತನ್ನು ಪಾಲಿಸಿದರೆ ನನ್ನ ಈ ಪರಿಸರದ ಕೆಲಸ ಸಾರ್ಥಕತೆ ಪಡೆದುಕೊಳ್ಳುತ್ತದೆ ತನ್ನ ಈ ಸೈಕಲ್ ಜಾತದ ಸಂದರ್ಬದಲ್ಲಿ ನೆಪಾಳದ ಗಡಿಯಲ್ಲಿ ತನ್ನನ್ನು ಪೋಲಿಸ್ ಕಡೆಯವನು ಎಂದು ನಕ್ಸಲರು ತಪ್ಪು ತಿಳಿದು ನನ್ನನ್ನು ಅಪಹರಿಸಿ 15 ದಿನಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಎಂದು ತನ್ನ ಪ್ರಾಯಾಣದ ಸಂದರ್ಬದಲ್ಲಿ ನಡೆದ ರಣರೊಚಕ ಘಟನೆಯನ್ನು ನಿಸ್ವಾರ್ಥ ಪರಿಸರ ಪ್ರೇಮಿ ಅನ್ಬು ಚಾಲ್ಸ ಬಿಚ್ಚಿಡುತ್ತಿದ್ದಾರೆ. ಇವರಿಗೆ ನಮ್ಮ ಕರಾವಳಿ ಸಮಾಚಾರದ ಕಡೆಯಿಂದ ಒಂದು ಬಿಗ್ ಸೆಲ್ಯೂಟ್ ಹೆಳೊಣವಲ್ಲವೆ

WhatsApp
Facebook
Telegram
error: Content is protected !!
Scroll to Top