ಮೂಡ್ ಭಟ್ಕಳ ಅಂಡರ್ ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಸಭೆ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಅಂಡರ್ ಪಾಸ್ ನಿರ್ಮಿಸಲಾಗುತ್ತದೆ ಜಿಲ್ಲಾಧಿಕಾರಿ

ಭಟ್ಕಳ: National Highway authority ಅವರಿಂದ ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ಕರಾರು ಪತ್ರ ಬರೆದುಕೊಡಲಾಗುವುದು ನಂತರ ರಸ್ತೆ ಕಾಮಗಾರಿ ಪ್ರಾರಂಬಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು

ತಾಲೂಕ ಮೂಡ ಭಟ್ಕಳ ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ಜಿಲ್ಲಾಧಿಕಾರಿಗಳನ್ನೊಳಗೊಂಡಂತೆ ಸಭೆ ಎರ್ಪಡಿಸಿದ್ದು ಸಾರ್ವಜನಿಕರು ತಮಗೆ ಅಂಡರ್ ಪಾಸ್ ನಿರ್ಮಿಸಿಕೊಡದೆ ನಾವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಬಿಡಲಾರೆವು ಎಂದು ಪಟ್ಟುಹಿಡಿದರು ಇದಕ್ಕೆ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಸಮಜಾಯಿಸಿ ನೀಡುತ್ತಾ ನಮ್ಮ ಉದ್ದೇಶ ಅಭಿವೃದ್ದಿಯಾಗಿರುತ್ತದೆ ಸಾರ್ವಜನಿಕರಿಗೆ ಅಂಡರ್ ಪಾಸ್ ನಿರ್ಮಿಸಿಕೊಡಲಾಗುತ್ತದೆ ಆದರೆ ಮೊದಲು ರಸ್ತೆ ಕಾಮಗಾರಿ ನಡೆಸಲು ಸಾರ್ವಜನಿಕರು ಅವಕಾಶವನ್ನು ನಿಡಬೇಕು National Highway authority ಅವರ ಮೂಲಕ ಸಾರ್ವಜನಿಕರಿಗೆ ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ಕರಾರು ಪತ್ರವನ್ನು ಮಾಡಿಕೊಡಲಾಗುವುದು ಭಟ್ಕಳ ಮೂಡ ಭಟ್ಕಳದಲ್ಲಿ ಅಂಡರ್ ಪಾಸ್ ನಿರ್ಮಿಸಲಾಗುತ್ತದೆ ಸಾರ್ವಜನಿಕರು ಅಂಡರ್ ಪಾಸ್ ನಿರ್ಮಿಸಲು ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ನಿಮ್ಮ‌ ಮೇಲೆ ಭರವಸೆ ಇದೆ ನೀವು ರಕಾರು ಪತ್ರವನ್ನು ಮೊದಲು ಮಾಡಿಕೊಡುವಂತೆ ಮಾಡಿ ನಂತರ ಕಾಮಗಾರಿ ನಡೆಸಲು ನಮ್ಮದೆನ್ನು ಅಭ್ಯಂತರವಿಲ್ಲ ನಮ್ಮ‌ ಉದ್ದೇಶ ಮೂಡ ಭಟ್ಕಳದಲ್ಲಿ ಅಂಡರ್ ಪಾಸ್ ನಿರ್ಮಾಣವಾಗಬೇಕು ಎನ್ನುವುದಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಸ್ಥಳಿಯರೋರ್ವರು ಮಾಧ್ಯಮದೊಂದಿಗೆ ಮಾತನಾಡಿ ಮೂಡಭಟ್ಕಳದಲ್ಲಿ ಅಂಡರ್ ಪಾಸ್ ನಿರ್ಮಾಣವಾಗ ಬೇಕು ಎನ್ಬುವುದಷ್ಟೆ ನಮ್ಮ ಉದ್ದೇಶ ಕಾಮಗಾರಿಗೆ ನಮ್ಮ ವಿರೋದವಿಲ್ಲಾ ಅಂಡರ್ ಪಾಸ್ ನಿರ್ಮಾಣ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹಿಂದೆ ಶಿರಾಲಿಯಲ್ಲಿ ಸಾರ್ವಜನಿಕರು 45 ಮಿಟರ್ ರಸ್ತೆಗೆ ಬೇಡಿಕೆಯನ್ನಿಟ್ಟ ಪ್ರತಿಭಟನೆಯನ್ನು ಮಾಡಲಾಗಿತ್ತು ಆ ಸಂದರ್ಬದಲ್ಲಿ ಶಾಸಕ ಸುನಿಲ್ ನಾಯ್ಕ ಅವರನ್ನು ಒಳಗೊಂಡಂತೆ ಸಮಿತಿಯನ್ನು ನಿರ್ಮಿಸಲಾಗಿತ್ತು ಮತ್ತು 45 ಮಿಟರ್ ರಸ್ತೆ ನಿರ್ಮಿಸುವ ಬರವಸೆಯನ್ನು ನಿಡಲಾಗಿತ್ತು ಕಾರಣ ಅಂದು ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು ಆದರೆ ವರ್ಷ ಉರುಳಿದರು ಶಿರಾಲಿಯಲ್ಲಿ 45 ಮಿಟರ್ ರಸ್ತೆ ನಿರ್ಮಾಣವಾಗಲೆ ಇಲ್ಲಾ ಎನ್ನುವುದು ಗಮನಾರ್ಹ ಸಂಗತಿಯಾಗಿದೆ ಈಗಲೂ ಕೂಡ ಮೂಡ ಭಟ್ಕಳದಲ್ಲಿ ಅಂಡರ್ ಪಾಸ್ ನಿರ್ಮಾಣದ ಬರವಸೆಯ ಮಹಾಪೂರವೆ ಹರಿದು ಬರುತ್ತಿದೆ ಕರಾರು ಪತ್ರ ಮಾಡಿಕೊಡುವ ಮಾತನ್ನು ಹೇಳಲಾಗುತ್ತದೆ ಮುಂದಿನ ದಿನದಲ್ಲಿ ಈ ಕರಾರು ಪತ್ರ ಕೇವಲ ಕರಾರು ಪತ್ರವಾಗಿ ಉಳಿಯದೆ ಸಾರ್ವಜನಿಕ ಉಪಯೋಗಿ ಅಂಡರ್ ಪಾಸ್ ನಿರ್ಮಾಣವಾಗಲಿ ಎನ್ನುವುದು ಸಾರ್ವಜನಿಕರ ಮಾತಾಗಿದೆ.

WhatsApp
Facebook
Telegram
error: Content is protected !!
Scroll to Top