ಭಟ್ಕಳ ತಾಲೂಕ ಬೆಳ್ಕೆ ಗ್ರಾಮ ಸಭೆ ಯಲ್ಲಿ ನಿದಿ 2 ವರದಿ ಒಪ್ಪಿಸುವಂತೆ ಸಾರ್ವಜನಿಕರೊರ್ವರ ಆಗ್ರಹ

ಕೊನೆಗೂ ನಿದಿ 2 ಬಗ್ಗೆ  ಸೊಲ್ಲೆತ್ತದ ಗ್ರಾಮ ಪಂಚಾಯತ್  ಎಲ್ಲೊ ಎನೋ ಎಡವಟ್ಟಾಗಿದೆ ಸಾರ್ವಜನಿಕರೊರ್ವರ ಗೊಣಗಾಟ

ಭಟ್ಕಳ: ತಾಲೂಕಿನ ಬೆಳ್ಕೆ ಪಂಚಾಯತ 2022 -23ರ ಸಾಲಿನ ಒಂದನೇ ಹಂತದ ಗ್ರಾಮ ಸಭೆಯೂ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ಬೆಳಕೆಯಲ್ಲಿ 56 ಎಂಡೋಸಲ್ಪಾನ್ ಪೀಡಿತ ರೋಗಿಗಳು ಇದ್ದು, ಅವರಿಗೆ ಅಭಾ ಕಾರ್ಡ್ ಮೂಲಕ ಹೆಚ್ಚಿನ ಚಿಕಿತ್ಸೆ ತೆಗೆದುಕೊಳ್ಳಲು ಸಹಕಾರಿಯಾಗುವುದು. ಬೂಸ್ಟರ್ ಡೋಸ್ ಗೆ ಭಾರಿ ಬೇಡಿಕೆಯಿದ್ದು ಲಸಿಕೆ ಬಂದ ಕ್ಷಣ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಅರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಗೊರಟೆ, ಸೋಡಿಗದ್ದೆ ಭಾಗಗಳಲ್ಲಿ ಪ್ರತಿನಿತ್ಯ ಪೊಲೀಸ್ ಗಸ್ತು ತಿರುಗುತ್ತಿದ್ದು, ಊರಿನಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಯದೆ ಇರುವ ಹಾಗೆ ನೋಡಿಕೊಳ್ಳಬೇಕು. ಒಸಿ, ಮಟ್ಕಾ ಆಡುವುದು ಅಕ್ಷಮ್ಯ ಅಪರಾಧ ಎಂದು ಪೊಲೀಸ ಇಲಾಖೆ ತಿಳಿ ಹೇಳಿದರು.
ಇಂಟರ್ನೆಟ್ ಅಲ್ಲಿ ಒಸಿ ಮಟ್ಕಾ ಆಡುವುದು ಬಂದಿದೆ ಅದಕ್ಕೆ ಏನು ಮಾಡುತ್ತೀರಿ ಎಂದು ಸದಸ್ಯರೋರ್ವರು ಕೇಳಿದ ಪ್ರಶ್ನೆಗೆ ಸಭೆಯಲ್ಲಿ ನೆರೆದಿರುವವರು ನಕ್ಕು ಸುಮ್ಮನಾದರು.

ಐ ಆರ್ ಬಿ ಅವಸ್ಥೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು:

ಬೆಳ್ಕೆ ಪಂಚಾಯತ್ ವ್ಯಾಪ್ತಿಯಲ್ಲಿ ಐ ಆರ್ ಬಿ ಇಂದ ಯಾವುದೇ ಪೂರಕ ವ್ಯವಸ್ಥೆಗಳು ಆಗಿಲ್ಲ, ಈ ಮೊದಲೇ ಇದ್ದಂತಹ ಗೊರಟೆ, ಗೊಳಿಮರ ಹಾಗೂ ಪಂಚಾಯತ ಎದುರುಗಿನ ರಾಷ್ಟ್ರೀಯ ರಸ್ತೆ ಪಕ್ಕ ಯಾವುದೇ ಬಸ್ ತಂಗುದಾಣ ಇಲ್ಲದೆ ಇರುವುದು ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ. ಬೀದಿ ದೀಪವಿಲ್ಲದೆ ಅನಾಹುತಗಳು ದಿನನಿತ್ಯ ಸರ್ವೇ ಸಾಮನ್ಯವಾಗಿದೆ. ರಸ್ತೆಯ ಪಕ್ಕ ಊರಿನ ಹೆಸರುಗಳನ್ನೂ ತಪ್ಪು-ತಪ್ಪಾಗಿ ಬರೆದಿರುವುದು ನಾಚಿಕೆಗೇಡುತನ ಎಂದರು. ಆದಷ್ಟು ಬೇಗನೆ ಸಮಸ್ಯೆ ಇತ್ಯರ್ಥ ಪಡಿಸದೆ ಇದ್ದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಮೂಖರಂತೆ ಕುಳಿತ ಅಧ್ಯಕ್ಷರು ಹಾಗೂ ನೋಡಲಾಧಿಕಾರಿ:

ಗ್ರಾಮೀಣ ಪ್ರದೇಶಗಳ ಸಮಗ್ರ ಮತ್ತು ಪರಿಣಾಮಕಾರಿ ಅಭಿವೃದ್ಧಿಯನ್ನು ನೆರವೇರಿಸಲು ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ನಡೆಸುತ್ತವೆ. ಆ ಗ್ರಾಮ ಸಭೆಗೆ ಆಯಾ ಪಂಚಾಯತ ಅಧ್ಯಕ್ಷರು ಗ್ರಾಮ ಸಭೆಯ ಅಧ್ಯಕ್ಷರಾಗಿದ್ದು. ಇಲಾಖೆಯ ಓರ್ವರು ನೋಡಲಾಧಿಕಾರಿ ಆಗಿ ಬಂದು ಗ್ರಾಮ ಸಭೆ ನಡೆಸುತ್ತಾರೆ. ಆದರೆ ಬೆಳ್ಕೆ ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆ ಬಗೆಗಿನ ಮಾಹಿತಿ ನೀಡುತ್ತಿರುವಾಗ ಗ್ರಾಮಸ್ಥರಿಗೆ ಜಟಾಪಟಿ ನಡೆಯುತ್ತಾ ಸಮಯ ಕಳೆಯುತ್ತಾ ಇದ್ದರು. ಇದರ ಯಾವುದೇ ಗೊಜಿಗೆ ಹೋಗದೆ ಮೂಖರಂತೆ ಕುಳಿತಿದ್ದು ಸಭಾ ನಡೆಗೆ ಒಂದು ಕಪ್ಪು ಚುಕ್ಕೆಯಂತೆ ಕಂಡುಬಂತು.

ಪಂಚಾಯತ ನಿಧಿ-2 ಲೆಕ್ಕಾಚಾರ ಕೊಡುತ್ತಿಲ್ಲ – ಮಂಜುನಾಥ ನಾಯ್ಕ ಆರೋಪ:
2001 ರಿಂದ ನಾನು ಮಾಹಿತಿ ಕೇಳುತ್ತಿದ್ದೇನೆ, ನನಗೆ ಮಾಹಿತಿ ನೀಡುತ್ತಿಲ್ಲ. ಗ್ರಾಮ ಸಭೆ ಶುರುವಿನಲ್ಲಿ ಪಂಚಾಯತ ಅಭಿವೃದ್ದಿ ಮೂನ್ನೋಟದ ಬಗ್ಗೆ ತಿಳಿಸಿ, ನಂತರ ನಿಧಿ2 ಬಗ್ಗೆ ವಿವರವಾದ ಲೆಕ್ಕ ನೀಡಿ ಸಭೆ ನಡೆಸಬೇಕಿತ್ತು. ಇವರು ಯಾಕೆ ನಿಧಿ 2 ಲೆಕ್ಕದಲ್ಲಿ ಗ್ರಾಮ ಪಂಚಾಯತ ಮುಳುಗಿಸಿದ್ದಾರೆ. ಇದಕ್ಕೆ ನೇರಹೊಣೆ ಪಂಚಾಯತ ಅಧ್ಯಕ್ಷರು ಎಂದು ಆರೋಪಿಸಿದರು.

ಕೊನೆಗೂ ನಿದಿ 2 ವರದಿಯನ್ನು ಗ್ರಾಮ ಪಂಚಾಯತ್ ಮಂಡಿಸಲೆ ಇಲ್ಲಾ ಎನ್ನುವುದು ಗಮನಾರ್ಹ ಸಂಗತಿಯಾಗಿದ್ದು ಒಟ್ಟಾರೆ ಎಲ್ಲೊ ಎಡವಟ್ಟು ನಡೆದಿದೆ ಎನ್ನುವುದು ನಿಶ್ಚಿತ ಎಂದು ಸಾರ್ವಜನಿಕರು ಗೊಣಗಾಡುತ್ತಿದ್ದಾರೆ ಸಾಋವಜನಿಕರ ಈ ಗೊಣಗಾಟಕ್ಕೆ ಮುಂದಿನ ದಿನದಲ್ಲಿ ಉತ್ತರ ಸಿಕ್ಕಿತೆ ಎಂದು ಕಾದುನೊಡಬೇಕಾಗಿದೆ

ಈ ಸಂದರ್ಬದಲ್ಲಿ ಪಂಚಾಯತ್ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top