ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತಲ್ಲಿ ಗ್ರಾಮ‌ಸಭೆ

ಹಳೆ ಚಾಳಿಯಂತೆ ಗ್ರಾಮ ಸಭೆಗೆ ಗೈರಾದ ಕೆಲವು ಇಲಾಖಾ ಅಧಿಕಾರಿಗಳು

ಹಿಂದಿನ ನಿದಿ 2 ಖರ್ಚು ವೆಚ್ಚ ಮೊದಲು ಮಂಡಿಸಲು ಸಾರ್ವಜನಿಕರ ಆಗ್ರಹ ಮೀನಾಮೇಷ ಏಣಿಸಿದ ಗ್ರಾಮ ಪಂಚಾಯತ್

ಭಟ್ಕಳ : ತಾಲೂಕ ಹೆಬ್ಳೇ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ನಿದಿ 2 ರ ಖರ್ಚುವೆಚ್ಚ ಮೊದಲು ಮಂಡಿಸಲು ಸಾರ್ವಜನಿಕರು ಪಟ್ಟುಹಿಡಿದಿದ್ದು ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಮೀನಾ ಮೇಷ ಏಣಿಸಿರುವುದು ನಡೆದಿದೆ.

ತಾಲೂಕಿನ ಹೆಬ್ಳೆ ಗ್ರಾಮ‌ ಪಂಚಾಯತ್ ಅಲ್ಲಿ ಶನಿವಾರ. ಗ್ರಾಮ ಸಭೆ ನಡೆದಿದ್ದು ಗ್ರಾಮ ಸಭೆಯಲ್ಲಿ ಕೆಲವು ಇಲಾಖಾ ಅಧಿಕಾರಿಗಳು ಹಾಜರಾಗದಿರುವುದು ಬೇಳಕಿಗೆ ಬಂದಿದೆ ಕೆಲವು ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಕೆಲವು ಸಿಬ್ಬಂದಿಗಳನ್ನು ಗ್ರಾಮ‌ಸಬೆಗೆ ಕಾಟಾಚಾರಕ್ಕೆ ಕಳಿಸಿದ್ದು ಅವರಲ್ಲಿ ಯಾವುದೆ ಮಾಹಿತಿಯು ಲಬ್ಯ ಇಲ್ಲದಿರುವುದು ಬೆಳಕಿಗೆ ಬಂದಿದೆ ಮುಖ್ಯವಾಗಿ ಮಿನುಗಾರಿಕಾ ಇಲಾಖೆಯ ಸಿಬ್ಬಂದಿ ಇವರು ಗ್ರಾಮ ಸಭೆಯಲ್ಲಿ ವರದಿ ಮಂಡಿಸಿರುವು ಗಮನಿಸಿದರೆ ಈ ಮಿನುಗಾರಿಕೆ ಇಲಾಖೆ ಸಾರ್ವಜನಿಕರಿಗೆ ಎಷ್ಷು ಸೌಲಬ್ಯ ಒದಗಿಸಿತು ಎಂಬುದು ತಿಳಿದುಬರುತ್ತದೆ ಯಾವುದೆ ಮಾಹಿತಿ ಇಲ್ಲದೆ ತನ್ನ ಮಾವನ ಮನೆಗೆ ಬಂದಂತೆ ಸಿಬ್ಬಂದಿ ಬಂದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಇನ್ನು ಲ್ಯಾಂಡ್ ಆರ್ಮಿ ಇಲಾಖೆ ಈ ಇಲಾಖೆ ಹಲವಾರು ಕಳಪೆ ಮಟ್ಟದ ಹಾಗು ಸರಕಾರಿ ಹಣದಿಂದ ಖಾಸಗಿ ವ್ಯಕ್ತಿಗಳ ಮನೆಗಳ ಮುಂದೆ ಸರಕಾರಿ ರಸ್ತೆಗಳನ್ನು ನಿರ್ಮಿಸಿರುವ ಆರೋಪ ಎದುರಿಸುತ್ತಿದೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ ಆದರೆ ತಾಲೂಕಿನಲ್ಲಿ ಈ ಇಲಾಖೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ತಲೆ ತಪ್ಪಿಸಿ ತಿರುತ್ತಿದ್ದಾರೋ ಎಂಬಂತೆ ವರ್ತಿಸುತ್ತಿದೆ ಈ ಬಗ್ಗೆ ತಾಲೂಕಾಡಳಿತ ಗಂಭಿರವಾಗಿ ವಿಮರ್ಷೆ ಮಾಡಬೇಕಾಗಿದೆ.

ಇನ್ನು ಗ್ರಾಮ ಸಭೆಯ ಪ್ರಾರಂಬದಲ್ಲಿ ಸಾರ್ವಜನಿಕರು ನಿದಿ 2 ಅಲ್ಲಿ ಮಾಡಿರುವ ಖರ್ಚುವೆಚ್ಚವನ್ನು ಮೊದಲು ಮಂಡಿಸುವಂತೆ ಪಟ್ಟುಹಿಡಿದಿದ್ದರು ಆದರೆ ಗ್ರಾಮ‌ ಪಂಚಾಯತ್ ಅಜೆಂಡದಲ್ಲಿರುವಂತೆ ಕೊನೆಗೆ ನಿದಿ 2 ರ ವರದಿ ಒಪ್ಪಿಸಲಾಗುವುದು ಎಂದು ಜಿದ್ದಿಗೆ ಬಿದ್ದವರಂತೆ ವರ್ತಿಸಿದರು ಕೊನೆಗೆ ಸಾರ್ವಜನಿರ ಆಗ್ರಹಕ್ಕೆ ಸೊತು ನಿದಿ ಎರಡರ ಖರ್ಚುವೆಚ್ಚ ಓದಿ ಹೆಳಲಾಯಿತು

ಗ್ರಾಮ ಸಭೆಯಲ್ಲಿ ಅರಣ್ಯ ಅತಿಕ್ರಮಣದಾರರೊಬ್ಬರಿಗೆ ಜಿಪಿಎಸ್ ಇದ್ದರು ಕೆಲವು ಖಾಸಗಿ ವ್ಯಕ್ತಿಗಳು ತೊಂದರೆ ಕೊಡುತ್ತಿದ್ದು ಇದು ಅಮಾಯಕರಿಗೊಬ್ಬರಿಗೆ ಆಗುತ್ತಿರುವ ಅನ್ಯಾಯ ಎಂದು ಸಭೆಯಲ್ಲಿ ಅತಿಕ್ರಮಣದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಬದಲ್ಲಿ ಸದಸ್ಯ ಸೈಯದ್ಅಲಿ ನಕಲಿ ಜಿಪಿಯಸ್ ಎಂದು ಆರೋಪಿಸಿದ್ದು ಮುಂದಿನ ದಿನಗಳಲ್ಲಿ ಸತ್ಯ ಅಸತ್ಯಗಳ ಅನಾವರಣವಾಗ ಬೇಕಿದೆ ಅರಣ್ಯ ಇಲಾಖೆ ಈ ಬಗ್ಗೆ ಪ್ರಾಮಾಣಿಕ ಕರ್ತವ್ಯ ನಿರ್ವಹಿಸ ಬೇಕಿದೆ ಪಕ್ಷಪಾತ ನಡೆಸಿದ್ದಲ್ಲಿ ಅರಣ್ಯ ಇಲಾಖೆ ಬೆಲೆ ತೆರಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸದಸ್ಯರು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top