ಪತ್ರಕರ್ತ ಹಾಗು ಸಾಮಾಜಿಕ ಹೊರಾಟಗಾರ ಅರ್ಜುನ್ ಮಲ್ಯ ಅವರಿಗೆ ರಕ್ಷಣೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಭಟ್ಕಳ: ಪತ್ರಕರ್ತರು ಸಾಮಾಜಿಕ ಹೊರಾಟಗಾರರು ಆದ ಅರ್ಜುನ್ ಮಲ್ಯ ಅವರ ಮೇಲೆ ಹಲ್ಲೆ ನಡೆಸುವ ಬಗ್ಗೆ ಸುನಿಲ್ ನಾಯ್ಕ ಬಿಜೆಪಿ ವಾರಿಯರ್ಸ ವಾಟ್ಸಪದ ಗ್ರುಪ್ ಅಲ್ಲಿ ಚರ್ಚೆ ನಡೆಸಿರುವ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕದ ವತಿಯಿಂದ ಸಹಾಯಕ ಆಯುಕ್ತರು ಮತ್ತು ಭಟ್ಕಳ ಡಿ ವೈ ಎಸ್ ಪಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು .

  ಉತ್ತರ ಕನ್ನಡ ಭಟ್ಕಳದಲ್ಲಿ ವಾಸವಾಗಿರುವ ಅರ್ಜುನ್ ಮಲ್ಯ ಇವರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಉತ್ತರ ಕನ್ನಡ ಜಿಲ್ಲೆಯ ಈ ನಮ್ಮ ವೇದಿಕೆಯ ಹಾಗೂ ವಾಹಿನಿಯ ಮೂಲಕ ಸಂಘಟನಾ ಕಾರ್ಯದರ್ಶಿ ಪದಾಧಿಕಾರಿ ಆಗಿದ್ದು ಜೊತೆಗೆ ಕರಾವಳಿ ಸಮಾಚಾರ ಎಂಬ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದು ಈ ವಾಹಿನಿಯ ಮೂಲಕ ಸಂವಿಧಾನ ಬದ್ಧವಾಗೀ ನಾಗರೀಕರಿಗೆ ಅರಿವು ಮೂಡಿಸುವ ಜೊತೆಗೆ ದೇಶದ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದಿರುತ್ತಾರೆ, ಸುವ್ಯವಸ್ಥೆ ಸಮಾಜ ನಿರ್ಮಾಣ ಮಾಡುವಲ್ಲಿ ಉತ್ತಮ ಜವಾಬ್ದಾರಿಯುತ ಪ್ರಜೆಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಸಮಾಜ ದ್ರೋಹಿಗಳು ಭ್ರಷ್ಟಾಚಾರಿಗಳು ತಮ್ಮ ಅಕ್ರಮ ಆದಾಯಕ್ಕೆ ಎಲ್ಲಿ ಕಡಿವಾಣ ಬೀಳುವುದು ಎಂಬ ಭಯದಲ್ಲಿ ಪತ್ರಕರ್ತರು ಹಾಗೂ ಹೋರಾಟಗಾರರಾದ ಅರ್ಜುನ್ ಮಲ್ಯರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಂದರೆ ಸುನಿಲ್ ನಾಯ್ಕ ಬಿಜೆಪಿ ವಾರಿಯರ್ಸ ಎಂಬ ವಾಟ್ಸಪ್ ಗ್ರೂಪಿನಲ್ಲಿ ಹಲ್ಲೆ ಮಾಡುವುದಾಗಿ ಪ್ರಾಣಬೆದರಿಕೆ ಉಂಟು ಮಾಡುತ್ತಿರುವುದು ಕಂಡು ಬಂದಿದೆ, ಆದ್ದರಿಂದ ಅಂಥವರ ವಿರುದ್ಧ ಸೂಕ್ತವಾದಂತಹ ಕಾನೂನು ಕ್ರಮ ಕೈಗೊಂಡು ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರನ್ನು ರಕ್ಷಣೆ ಮಾಡುವಂತೆ ಈ ಮೂಲಕ ತಮ್ಮಲ್ಲಿ ಮನವಿ ಯನ್ನು ಸಲ್ಲಿಸಲಾಯಿತು .

ಈ ಸಂದರ್ಬದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ರಾಜು ನಾಯ್ಕ ತಾಲೂಕ ಅಧ್ಯಕ್ಷ ನಾಗೇದ್ರ ನಾಯ್ಕ, ಉಪಾಧ್ಯಕ್ಷ ಶಂಕರ್ ನಾಯ್ಕ, ಕಾರ್ಯದರ್ಶಿ ನಾಗೇಶ ನಾಯ್ಕ ಸಹ ಕಾರ್ಯದರ್ಶಿ  ವಸಂತ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top