ಭಟ್ಕಳದಲ್ಲಿ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ

ಇದಕ್ಕೆ ಜ್ವಲಂತ ಸಾಕ್ಷಿ ಮಾವಳ್ಳಿ ಪಂಚಾಯತ್ ಅವಿಶ್ವಾಸ ನಿರ್ಣಯ ಸಕಾರಣವಿಲ್ಲದೆ ಮುಂದುಡಿರುವುದು : ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳ ತಾಲೂಕಿನಲ್ಲಿ 40 % ಬಿಜೆಪಿ ಪಕ್ಷದೊಂದಿಗೆ ಅಧಿಕಾರಿಗಳು ಕೈಜೋಡಿಸಿರುವುದು ಮಾವಳ್ಳಿ ಗ್ರಾಮ ಪಂಚಾಯತ್ ಅವಿಶ್ವಾಸ ನಿರ್ಣಯವನ್ನು ಸಕಾರಣವಿಲ್ಲದೆ ಮುಂದುಡಿರುವುದು ಸಾಕ್ಷಿಕರಿಸಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಕಳವಳವನ್ನು ವ್ಯಕ್ತ ಪಡಿಸಿದರು .

ಅವರು ಭಟ್ಕಳ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಕಾಂಗ್ರೇಸನ ವಿವಿದ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅತಿ ಶಿಘ್ರದಲ್ಲಿ ಚುನಾವಣೆ ನಡೆಯಲಿದ್ದು ಚುನಾವಣೆಗೆ ಕಾರ್ಯಕರ್ತರು ಪಧಾಧಿಕಾರಿಗಳು ಸಿದ್ದರಾಗಬೇಕು ಎಂದು ಕರೆ ನೀಡಿದರು . ಶಾಸಕ ಸುನಿಲ್ ನಾಯ್ಕ ತನ್ನ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿಕೊಳ್ಳುವ ಸ್ವಹಿತಾಸಕ್ತಿಗಾಗಿ ಇರುವ ಕೆರೆಗಳನ್ನೆಲ್ಲಾ ಮುಚ್ಚಿಹಾಕಿ ಗಟಾರ್ ನಿರ್ಮಾಣ ಮಾಡದೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತಿರುವುದು ಭಟ್ಕಳ ನಾಗರಿಕರ ದುರ್ದೈವವೆ ಸರಿ ತಾಲೂಕಿನ ಅಧಿಕಾರಿಗಳು ಈ 40% ಬಿಜೆಪಿ ಪಕ್ಷದೊಂದಿಗೆ ಕೈಜೊಡಿಸಿದೆ ಇದಕ್ಕೆ ಉದಾಹರಣೆ ಎಂದರೆ ಮಾವಳ್ಳಿ ಗ್ರಾಮ ಪಂಚಾಯತ್ ಅವಿಶ್ವಾಸ ನಿರ್ಣಯವನ್ನು ಸಕಾರಣವಿಲ್ಲದೆ ಮುಂದುಡಿರುವುದು ಆಗಿದೆ . ಎಂದು ಕಳವಳ ವ್ಯಕ್ತ ಪಡಿಸಿದರು.

ಈ ಸಂದರ್ಬದಲ್ಲಿ ಕಾಂಗ್ರೇಸ ಪಕ್ಷದ ಸಂಯೋಜಕ ಭಾಸ್ಕರ್ ಪಟ್ಕಾರ್, ಮಾಜಿ ಶಾಸಕ ಜೇಡಿ ನಾಯ್ಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಯಶ್ರೀ ನಾಯ್ಕ ನಯನ ನಾಯ್ಕ, ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ, ಮಂಜುನಾಥ ನಾಯ್ಕ ಟಿ ಡಿ ನಾಯ್ಕ , ಸತೀಶ್ ಕುಮಾರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top