ಜನವರಿ 27 ರಿಂದ ಫೆಬ್ರುವರಿ 4 ರ ವರೆಗೆ ಬಿಳಿಗಿ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ :ರವಿ ಹೆಗಡೆ ಹೂವಿನಮನೆರವಿ ಹೆಗಡೆ ಹೂವಿನಮನೆ

ಸಿದ್ದಾಪುರ: ತಾಲೂಕಿನ ಐತಿಹಾಸಿಕ ಸ್ಥಳ ಬಿಳಿಗಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ 2023 ಜನವರಿ 27 ರಿಂದ ಫೆಬ್ರುವರಿ 4 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ತಿಳಿಸಿದರು.
ಅವರು ಇಂದು ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಸುವ್ಯವಸ್ಥಿತವಾಗಿ ವಿನೂತನ ಮಾದರಿಯಲ್ಲಿ ನಿರ್ಮಾಣವಾದ ನಂತರ ನಡೆಯುವ ಮೊದಲ ಜಾತ್ರೆ ಇದಾಗಿದೆ.
ಜಾತ್ರೆಯಲ್ಲಿ ಜನರ ಆರೋಗ್ಯ, ಬೆಳೆಗಳ ರಕ್ಷಣೆ, ಕುಟುಂಬಗಳಲ್ಲಿ ಯಾವುದೇ ತೊಂದರೆ ನೀಡದಂತೆ ದೇವರಲ್ಲಿ ಪ್ರಾರ್ಥಿಸಿ ವಿಶೇಷವಾಗಿ
ದುರ್ಗಾ ಶಾಂತಿ ಹವನ ಮಾಡಲಾಗುತ್ತಿದೆ. ದಾಸನಗದ್ದೆಯ ಅನಂತ್ ಗೌಡ ಜಾತ್ರಾ ಕಮಿಟಿ ಅಧ್ಯಕ್ಷರಾಗಿದ್ದು, ಜಾತ್ರೆ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ ನಡೆಸಲು ವಿವಿಧ ಸಮಿತಿ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಾತ್ರೆಯಲ್ಲಿ ಜನವರಿ 3 ರಂದು ಅನ್ನ ಸಂತರ್ಪಣೆ ನಡೆಯಲಿದೆ,
ಜನವರಿ 4 ರಂದು ಅಂಕೆ ಹಾಕಲಾಗುವುದು.
ಜಾತ್ರೆಯಲ್ಲಿ ಭಕ್ತರ ಸ್ವಚ್ಛತೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಸುವ್ಯವಸ್ಥಿತ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಹಿಂದಿನ ಜಾತ್ರೆಗಳಂತೆ ಮನೆಮನೆಗೆ ಹೋಗಿ ವರಾಡು (ವರಗಣೆ) ವಸೂಲಿ ಇರುವುದಿಲ್ಲ. ಸ್ವಯಂ ಪ್ರೇರಣೆಯಿಂದ ವರಾಡು ಹಣವನ್ನ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ವರಾಡು ಹಣ ನೀಡಿದವರಿಗೆ ದುರ್ಗಾ ಹವನದ ಪ್ರಸಾದ ವಿತರಣೆ ಮಾಡಲಾಗುವುದು.
ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಸಾರ್ವಜನಿಕರು ಸಹಕಾರ ನೀಡಬೇಕು ಅವ್ಯವಹಾರ ಮತ್ತು ಅನೈತಿಕ ಚಟುವಟಿಕೆಗೆ ಅವಕಾಶ ಇಲ್ಲ. ಅಂತ ಚಟುವಟಿಕೆಗಳನ್ನು ನಡೆಸುವವರಿಗೆ ಆರಕ್ಷಕ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ತಾಲೂಕಿನ ಹಾಗೂ ಬೇರೆ ಬೇರೆ ಜುಲ್ಲೆಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು.
ಪ್ಲಾಟ್ ಕಮಿಟಿ ಅಧ್ಯಕ್ಷ ಗಜಾನನ ನಾಯ್ಕ ಮಾತನಾಡಿ ಜನವರಿ 19ರಂದು ಪ್ಲಾಟ್ (ಅಂಗಡಿ) ಗಳ ಹರಾಜು ನಡೆಯಲಿದೆ. ಹರಾಜಿನಲ್ಲಿ ಪ್ಲಾಟ್ ಪಡೆದವರು ಅಂದೇ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ಕಾರ್ಯಕ್ರಮ ನೀಡುವವರು ಮುಂಚಿತವಾಗಿ ಕಮಿಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

ದೇವಸ್ಥಾನದ ಮುಖ್ತೇಸರ ಶ್ರೀಧರ್ ಹೆಗಡೆ, ಅನಂತ್ ಗೌಡ, ದಯಾನಂದ್ ಚಿನಿವಾರ್ ಹನುಮಂತ ಗೌಡ, ಎಂ ಟಿ ನಾಯ್ಕ, ಶಾಂತರಾಮ್ ಪೈ, ಗೋಪಿಚಂದ್ ಮಡಗಾಂವಕರ್ ನಾರಾಯಣ ಮಾಡಗಾಂವಕರ್, ವೀರೇಶ್ ಕಲ್ಕಣಿ, ಜಯಪ್ರಕಾಶ್ ಹೆಗ್ಗಾರಕೈ ಮೊದಲಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top