ಭಟ್ಕಳ ತಾಲೂಕಿನಲ್ಲಿ ಮಾಧ್ಯಮದ ಮೇಲೆ ಹೆಚ್ಚಾಗುತ್ತಿರುವ ಹಲ್ಲೆ ಪ್ರಕರಣ

ಅಕ್ರಮ ಪ್ರಕರಣದ ಅನಾವರಣ ಮಾಡಿದ್ದನ್ನೆ ಮಹಾಪರಾದ ಎನ್ನುವಂತೆ  ಮಾಧ್ಯಮ ಸಂಪಾದಕ ಜಿವೋತ್ತಮ್ ಅವರ ಮೇಲೆ ಹಲ್ಲೆ :  ದೂರು ದಾಖಲು

ಭಟ್ಕಳ ತಾಲೂಕಿನಲ್ಲಿ ಮಾಧ್ಯಮದ ಸಂಪಾದಕರು ಹಾಗು ಪ್ರತಿನಿದಿಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು ಲೊಕಲ್ ಕಬರ್ ಸಂಪಾದಕರ ಜಿವೋತ್ತಮ್ ಪೈ ಅವರು ಅಕ್ರಮ ಮಣ್ಣು ಸಾಗಾಟದ ಬಗ್ಗೆ ವರದಿ ಬಿತ್ತರಿಸಿದ ಕಾರಣ ಹಲ್ಲೆಗೆ ಪ್ರಯತ್ನ ನಡೆಸಿ ಜೀವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ

ಭಟ್ಕಳ : ದಿನಾಂಕ 22-12-2022 ರಂದು ಅಪರಾಹ್ನ ಭಟ್ಕಳದಲ್ಲಿ ಅಕ್ರಮ ವಾಗಿ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಹಶಿಲ್ದಾರ ಸುಮಂತ ಬಿ.ಇ ಇವರಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರರು ಮುಟ್ಟಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟದ ವಾಹನ ಪರಿಶಿಲಿಸಿ ಅಕ್ರಮ ಎಂಬ ಕಾರಣಕ್ಕೆ ಅದನ್ನು ಗ್ರಾಮಿಣ ಠಾಣೆಯ ಸುಪರ್ದಿಗೆ ನೀಡಿರುವ ಬಗ್ಗೆ ಲೊಕರ ಖಬರ್‌ ನಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಅಶೋಕ ನಾಯ್ಕ ಮತ್ತು ಗಣಪತಿ ನಾಯ್ಕ ಇಬ್ಬರು ಲೊಕಲ್ ಖಬರ್‌ ನ ಸಂಪಾದಕ ಜೀವೋತ್ತಮ ಪೈ ಇವರಿಗೆ ತಾಲೂಕಾ ಆಡಳಿತ ಸೌಧದ ಎದರುಗಡೆ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಟಿ-ಶರ್ಟ್ ಕಾಲರ್‌ ಹಿಡಿದು ಹಲ್ಲೆಗೆ ಹತ್ನಿಸಿದ ಪ್ರಯತ್ನ ನಡೆದು ಕೊಲೆ ಬೆದರಿಕೆಯನ್ನು ಹಾಕಿದ್ದು ಈ ಸಂಭಂದ ಆರೋಪಿಗಳಿಬ್ಬರ ಮೇಲೆ ಪ್ರಕರಣ ಧಾಖಲಿಸಲಾಗಿದ್ದು, ಈ ಸಂಭಂದ ಆರಕ್ಷಕರು ತನಿಖೆಯನ್ನು ಮುಂದುವರೆಸಿದ್ದಾರೆ . ಭಟ್ಕಳದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಮಹಾಪರಾಧ ಎಂಬಂತೆ ಹಲ್ಲೆ ನಡೆಸುತ್ತಿದ್ದು ಮಾಧ್ಯಮದವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಇಂತವರಿಗೆ ರಾಜಕಿಯ ವ್ಯಕ್ತಿಗಳ ಕೃಪಾಕಟಾಕ್ಷವು ಕಾರಣವಿರಬಹುದು ಎಂದು ಸಾರ್ವಜನಿಕವಾಗಿ ಚರ್ಚೆಯಾಗಿತ್ತಿರುವ ವಿಷಯ. ವಾಗಿದ್ದು ಭಟ್ಕಳದಲ್ಲಿ ಕೆಲವು ರಾಜಕಿಯ ಹಿತಾಸಕ್ತಿಗಳು ಮಾಧ್ಯಮ ಸ್ವಾತಂತ್ರದ ಹರಣಕ್ಕೆ ಪ್ರಯತ್ನ ನಡೆಸುತ್ತಿದ್ದು

ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದೆ, ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರ ಬಗ್ಗೆ ಹಲ್ಲೆ ನಡೆಸುವ ಬಗ್ಗೆ ಚರ್ಚೆ ನಡೆಸುತ್ತಿರುವುದು ವಿಷಾದನೀಯ ಸಂಗತಿ ಈ ಬಗ್ಗೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಸಂವಿಧಾನದ 4 ನೇ ಅಂಗ ಎನಿಸಿಕೊಂಡ ಪತ್ರಕರ್ತರಿಗೆ ಜೀವಕ್ಕೆ ಭದ್ರತೆ ನೀಡುವಂತಹ ಕೆಲಸಗಳು ನಡೆಯಬೇಕಿದೆ.

ತಾಲೂಕಿನಲ್ಲಿ ಮಾಧ್ಯಮದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತೆಜೋವದೆ ಹತ್ಯಾ ಪ್ರಯತ್ನಗಳು ಕಾನೂನು ವೈಪಲ್ಯವಾಗುತ್ತಿರುವುದು ಜಗಜ್ಜಾಹಿರಗೊಳಿಸಿದೆ ಮಾಧ್ಯಮದ ಮೇಲೆ ಎಷ್ಟೇ ದಬ್ಬಾಳಿಕೆ ನಡೆಯಲ್ಲಿ ಮಾಧ್ಯಮ ತನ್ನ ಕೆಲಸವನ್ನು ಯಾವತ್ತು ನಿಲ್ಲಿಸಲು ಸಾಧ್ಯವಿಲ್ಲ ಇನ್ನಾದರು ಮಾಧ್ಯಮದ ಮೇಲೆ ನಡೆಯುತ್ತಿರುವ ದಬ್ಬಾಳಿಯನ್ನು ಪೊಲೀಸ್ ಇಲಾಖೆ ಗಂಭಿರವಾಗಿ ಪರಿಣಮಿಸಿ ಕ್ರಮಕೈಗೊಳಬೇಕಿದೆ ಒಂದು ವೇಳೆ ಪೋಲಿಸ್ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಮಾಧ್ಯಮ ಸಂಪಾದಕರದ್ದೊ ಪ್ರತಿನಿದಿಯದ್ದೊ ಹತ್ಯೆ ನಡೆದರು ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲಾ ಒಂದು ವೇಳೆ ಮಾಧ್ಯಮದವರ ಹತ್ಯೆ ನಡೆದಿದ್ದೆ ಆದಲ್ಲಿ ಅದಕ್ಕೆ ಭಟ್ಕಳ ತಾಲೂಕಾಡಳಿತ ಹಾಗು ಉತ್ತರ ಕನ್ನಡ ಪೋಲಿಸ್ ಇಲಾಖೆಯೆ ನೇರಹೊಣೆಯಾಗಲಿದೆ ಎನ್ನುವುದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ .

WhatsApp
Facebook
Telegram
error: Content is protected !!
Scroll to Top