Wednesday, March 29, 2023
Homeಸಿದ್ದಾಪುರಸಿದ್ದಾಪುರದಲ್ಲಿ ಅಪರಾದ ತಡೆ ಮಾಸಾಚರಣೆ

ಸಿದ್ದಾಪುರದಲ್ಲಿ ಅಪರಾದ ತಡೆ ಮಾಸಾಚರಣೆ

ಡಿ ವೈ ಎಸ್ ಪಿ ರವಿ ಡಿ ನಾಯ್ಕ ಅವರಿಂದ ಚಾಲನೆ

ಸಿದ್ದಾಪುರ:-ಅಪರಾಧ ತಡೆ ಮಾಸಾಚರಣೆ ಜಾಥಾಕ್ಕೆ ಡಿ ವೈ ಎಸ್ ಪಿ ರವಿ ಡಿ ನಾಯ್ಕ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆಯನ್ನು ನೀಡಿ ಅಪರಾಧವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು.
ಜಾಥಾವು ಪಟ್ಟಣದ ಪೊಲೀಸ್ ಠಾಣೆಯಿಂದ ಹೊರಟು ರಾಮಕೃಷ್ಣ ಹೆಗಡೆ ಸರ್ಕಲ್ ಮುಖಾಂತರ, ರಾಜಮಾರ್ಗ, ಅಶೋಕ ರಸ್ತೆ ಭಗತ್ ಸಿಂಗ್ ಸರ್ಕಲ್ ನಿಂದ ಪುನಃ ಪೊಲೀಸ್ ಠಾಣೆಗೆ ಆಗಮಿಸಿತು. ಜಾಥಾದಲ್ಲಿ ಎಂಜಿಸಿ ಕಾಲೇಜ್, ಹಾಳದಕಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ಧಿವಿನಾಯಕ ಪ್ರೌಢಶಾಲೆ, ಬೇಡ್ಕಣಿ ಪದವಿ ಕಾಲೇಜ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಉಪನ್ಯಾಸಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಕಲ್ಲೂರು ಶಾಲಾ ವಿದ್ಯಾರ್ಥಿಗಳು ಡೊಳ್ಳು ಕುಣಿತ ಜಾಥಾ ಕ್ಕೆ ಮೆರುಗು ತಂದಿತು. ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ಮೂಲಕ ಜಾತಾದಲ್ಲಿ ಭಾಗವಹಿಸಿದ್ದರು. ಅಪರಾಧ ತಡೆ ಮಾಸಾಚರಣೆ ಜಾಥಾ ದ ಮೂಲಕ ಅಪರಾಧ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ ಕೆ, ಪಿಎಸ್ಐ ರವರುಗಳಾದ ಮಹಂತಪ್ಪ ಕುಂಬಾರ್, ಮಲ್ಲಿಕಾರ್ಜುನಯ್ಯ ಕೊರಾನಿ, ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!