ಬಿಜೆಪಿ ಜನ ವಿರೋದಿ ಕೆಲಸಕ್ಕೆ ಕೈ ಹಾಕಿದೆ ಬಿಮಣ್ಣ ನಾಯಕ ಆಕ್ರೊಶ

ಭಟ್ಕಳ ಶಿರಾಲಿ ಸಾರದ ಹೊಳೆಯಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಸುದ್ದಿಗೊಷ್ಟಿ

ಭಟ್ಕಳ : ಆಡಳಿತ ಪಕ್ಷವಾದ ಬಿಜೆಪಿ ಮುಂದಿನ ಚುನಾವಣೆಗೆ ಗೆಲುವನ್ನು ಸಾದಿಸಲು ವಾಮ ಮಾರ್ಗವನ್ನು ಹಿಡಿದಿದೆ ಭಟ್ಕಳ ಕ್ಷೇತ್ರದಲ್ಲಿ ಮತದಾರ ಪಟ್ಟಿಯಿಂದ 96 ಸಾವಿರಕ್ಕೂ ಅಧಿಕ ಮತದಾರರ ಹೆಸರನ್ನು ತೆಗೆದುಹಾಕಿದೆ ಎಂದು ಕಾಂಗ್ರೇಸ್ ಪಕ್ಷದ ದುರಿಣ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬೀಮಣ್ಣ ನಾಯ್ಕ ಆಕ್ರೋಶ ವ್ಯಕ್ತ ಪಡಿಸಿದರು.

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಮತದಾರರ ಪಟ್ಟಿಯಿಂದ ಸುಮಾರು 18,396 ಜನರ ಹೆಸರನ್ನು ಅಳಿಸಲಾಗಿದ್ದು, ಇಡೀ ಉತ್ತರ ಕನ್ನಡ ಜಿಲ್ಲೆಯ 92,516 ಜನರ ಹೆಸರನ್ನು ಅಳಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.

ಭಟ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ, ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯವರು ಹೊಲಸು ರಾಜಕಾರಣ ಮಾಡುತ್ತಿದ್ದು, ಮತದಾರರ ಪಟ್ಟಿಯಿಂದ ಜಾತ್ಯತೀತ ಜನರ ಹೆಸರನ್ನು ತೆಗೆಯಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುವ ಬದಲು ಬಿಜೆಪಿಯು ಮತ ಪಡೆಯುವ ನಿರೀಕ್ಷೆಯಿಲ್ಲದವರನ್ನು ವಂಚಿಸಲು ಪ್ರಯತ್ನಿಸುತ್ತಿದೆ.ಉತ್ತರ ಕನ್ನಡ ಜಿಲ್ಲೆಯ 92,516 ಜನರ ಹೆಸರನ್ನು ಅಳಿಸಲಾಗಿದೆ ಜಿಲ್ಲೆಯಲ್ಲಿ ಕಾರವಾರ ಮೊದಲನೇ ಸ್ಥಾನದಲ್ಲಿದ್ದು, ಹೆಚ್ಚು ಹೆಸರು ಡಿಲೀಟ್ ಆಗಿದ್ದು, ಭಟ್ಕಳ ಎರಡನೇ ಸ್ಥಾನದಲ್ಲಿದೆ. ಕಾರವಾರ 19,758, ಭಟ್ಕಳ 18,396, ಕುಮಟಾ 15,375, ಶಿರಸಿ 13,624, ಹಳಿಯ 13,537 ಹಾಗೂ ಯಲ್ಲಾಪುರ 11,826 ಜನರ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿದೆ

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಡೀ ಕರ್ನಾಟಕ ರಾಜ್ಯದ 27 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಹೇಳಿದ್ದರು. ಬೆಂಗಳೂರಿನಿಂದ ಮಾತ್ರ 6 ಲಕ್ಷ ಮಂದಿಯ ಹೆಸರನ್ನು ಅಳಿಸಲಾಗಿದೆ ಎಂದು ಆರೋಪಿಸಿದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಭಟ್ಕಳ ಮಾಜಿ ಶಾಸಕ ಮಾಂಕಾಳ್ ವೈದ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ್, ಕಾಂಗ್ರೆಸ್ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top