Sunday, January 29, 2023
Homeವಿಶೇಷ ವರದಿಭಟ್ಕಳ ಶಿರಾಲಿ ಸಾರದ ಹೊಳೆ ನಾಮದಾರಿ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪದಗ್ರಹಣ

ಭಟ್ಕಳ ಶಿರಾಲಿ ಸಾರದ ಹೊಳೆ ನಾಮದಾರಿ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪದಗ್ರಹಣ

ಪಕ್ಷ ‘ ಕಾರ್ಯಕರ್ತರು ಗುರುತಿಸಿದ ಹಿನ್ನೆಲೆಯಲ್ಲಿ ವೆಂಕಟೇಶ ನಾಯ್ಕ ಅವರಿಗೆ ಹುದ್ದೆ ಒಲಿದು ಬಂದಿದೆ

ಭಟ್ಕಳ ತಾಲೂಕ ಶಿರಾಲಿ ಸಾರದಹೋಳೆ ನಾಮದಾರಿ ಸಭಾಭವನದಲ್ಲಿ ಕಾಂಗ್ರೇಸ್ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರಾಗಿ ನೇಮಕಗೊಂಡ ವೆಂಕಟೇಶ್ ನಾಯ್ಕ ಅವರ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು

ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷರಾದ ಭಿಮಣ್ಣ ನಾಯ್ಕು ಉದ್ಗಾಟಿಸಿ ಮಾತನಾಡಿನಿಮ್ಮ ಅಧ್ಯಕ್ಷತೆಯಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು. ತಾಲೂಕಿನಲ್ಲಿ ಎಷ್ಟು ಅನುಧಾನ ಬಂದಿದೆ ಅನ್ನೋದನ್ನ ಪ್ರತಿ ಶಾಸಕರು ಜನತೆ ಮುಂದೆ ಇಡಬೇಕು. ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಬಿಜೆಪಿ ಸರಕಾರದ ವೈಪಲ್ಯವನ್ನು ಪ್ರತಿ ಬೂತಮಟ್ಟದಲ್ಲಿ ಜನ ಸಾಮನ್ಯರಿಗೆ ತಿಳಿಸುತ್ತ ಸಂಘಟನೆ ಬೆಳೆಸಬೇಕು. ಜನಪರವಾದ ಎಲ್ಲಾ ಕಾರ್ಯಕ್ರಮಗಳನ್ನು ಹಂತಹಂತವಾಗಿ ತೆಗೆಯುತ್ತ ಬಂದಿದ್ದಾರೆ. ಪರೇಶ್ ಮೇಸ್ತ ಸಾವು ಸಹಜ ಸಾವು ಎನ್ನುವುದು ಸಿ ಬಿ ಐ ನೀಡಿದ ವರದಿ ಮರು ತನಿಖೆ ಆಗಬೇಕು ಎಂದು ಬಿಜೆಪಿ ನಾಟಕ ಮಾಡುತ್ತಿದೆ ಇದು ಇವರು . ಮಾಡುತ್ತಿರುವ ಕೆಟ್ಟ ರಾಜಕಿಯ ಬಿಜೆಪಿ ಜನ ವಿರೋದಿ ಕೆಲಸವನ್ನು ಮಾಡುತ್ತಿದೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಭಟ್ಕಳವೊಂದರಲ್ಲಿ ಮತದಾರರ ಪಟ್ಟಿಯಿಂದ 18395 ಮತಗಳನ್ನು ಡಿಲೀಟ್ ಮಾಡಲಾಗಿದೆ ಇದು ಅಕ್ಷಮ್ಯ ಅಪರಾದವಾಗಿದೆ ಸ್ವಾರ್ಥ ರಾಜಕಾರಣಕ್ಕಾಗಿ ಜನರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು

ಇದೆ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಕಾರ್ಯಕರ್ತರೆ ಪಕ್ಷದ ಆಸ್ತಿ ಕಾರ್ಯಕರ್ತರಿದ್ದರೆ ಮಾತ್ರ ಪಕ್ಷ ಪಕ್ಷದಲ್ಲಿ ಎಲ್ಲಾ ನಿರ್ದಾರವನ್ನು ಪಕ್ಷದ ಹಿರಿಯರು ತೆಗೆದುಕೊಳ್ಳುತ್ತಾರೆ ವೆಂಕಟೇಶ ಆಯ್ಕೆಯನ್ನು ರಾಜ್ಯದಲ್ಲೆ ಮಾಡಿರುತ್ತಾರೆ ಹಿಂದಿ ಸಂತೋಷ ನಾಯ್ಕ ಅವರು ಪಕ್ಷಕ್ಕಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅವರಿಗೆ ದನ್ಯವಾದಗಳು ಹಾಗೆ ವೆಂಕಟೇಶ ನಾಯ್ಕ ಅವರ ಕುಟುಂಬ ದಶಕಗಳಿಂದ ಪಕ್ಷಕ್ಕಾಗಿ ತುಂಬ ದುಡಿದಿದೆ ವೆಂಕಟೇಶ ನಾಯ್ಕ ಕೂಡ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ ಇದನ್ನು ಪಕ್ಷದ ಹಿರಿಯರು ಗುರುತಿಸಿದ್ದಾರೆ ಅದರ ಫಲ ಇಂದು ವೆಂಕಟೇಶ ನಾಯ್ಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಮಾಜಿ ಶಾಸಕರು ಪಕ್ಷದ ಹಿರಿಯ ದುರಿಣರು ಆದ ಆರ್ ಎನ್ ನಾಯ್ಕ, ಪದಗ್ರಹಣ ಮಾಡಿದ ವೆಂಕಟೇಶ ನಾಯ್ಕ ಪಕ್ಷದ ಹಿರಿಯರು ಮಾತನಾಡಿದರು

ಕಾರ್ಯಕ್ರಮದಲ್ಲಿ ರಾಜೇಶ್ ನಾಯ್ಕ, ಸ್ವಾಗತಿಸಿದರೆ ನಿರೂಪಣೆ ನಾಗರಾಜ ಸಂಜನಾ ನಡೆಸಿಕೊಟ್ಟರು

ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯಾತ ಮೊರ್ಚಾದ ಅಬ್ದುಲ್ ಮಜಿದ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಶ್ರಿ ಮೊಗೇರ್, ಚಂದ್ರಶೇಕರ್ ಗೌಡರ್, ಭಟ್ಕಳ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು ಇತರ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!