ಕೊಳಗಿಯವರು ಎಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಪುಸ್ತಕಗಳನ್ನು ನಮ್ಮ ಮುಂದಿಟ್ಟಿದ್ದಾರೆ:ಪತ್ರಕರ್ತ ಕನ್ನೇಶ ಕೋಲ್ ಸಿರ್ಸಿ

ಸಿದ್ದಾಪುರ:- ಕೊಳಗಿಯವರು ತಮ್ಮ ಗ್ರಹಿಕೆಗಳ ಮೂಲಕ ತಮಗಿರುವ ಸಾಮರ್ಥ್ಯ ವನ್ನು ಅಚ್ಚುಕಟ್ಟಾಗಿ ತಮ್ಮ ಪುಸ್ತಕಗಳಲ್ಲಿ ಪ್ರಚುರಪಡಿಸಿದ್ದಾರೆ. ಬರಹಗಾರರು, ಸಾಹಿತಿಗಳಿಗೆ ಅವರ ಕುಟುಂಬದ ಸಹಾಯ ಮಾಡಬೇಕಾಗುತ್ತದೆ. ಸವಾಲುಗಳು ಬೇರೆ ವ್ಯಕ್ತಿಗಳಿಗಿಂತ ಹೆಚ್ಚು ಬರಹಗಾರಲ್ಲಿರುತ್ತದೆ.
ಕೊಳಗಿಯವರು ಎಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಪುಸ್ತಕಗಳನ್ನು ನಮ್ಮ ಮುಂದಿಟ್ಟಿದ್ದಾರೆ. ತಮ್ಮ ಬರೆಹಗಳಲ್ಲಿ ವಿವಿಧ ಶ್ರೇಷ್ಠ ಸಾಹಿತಿಗಳ ಬರಹಗಳಂತೆ ಓದುಗರನ್ನು ಮುಟ್ಟಿದ್ದಾರೆ ಎಂದು ಪತ್ರಕರ್ತ ಕನ್ನೇಶ ಕೋಲ್ ಸಿರ್ಸಿ ಅಭಿಪ್ರಾಯ ಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ದ ವತಿಯಿಂದ ಪಟ್ಟಣದಲ್ಲಿ ನಡೆದ ಸಾಹಿತಿ ಗಂಗಾಧರ ಕೊಳಗಿ ರವರೊಂದಿಗೆ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ ನಾನು ಬರವಣಿಗಾಗಿ ಮಾಡಿದ ನರಳಾಟ ಕೇವಲ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ ತಮ್ಮ ಜೀವನದಲ್ಲಿ ಆದ ಅನುಭವಗಳನ್ನು, ತಾವು ಬರವಣಿಗೆಯಡೆ ಮುಖಮಾಡಲು ಪ್ರೇರಣೆ ಯಾದ ಸಂಗತಿಗಳ ಕುರಿತು ಹಂಚಿಕೊಂಡರು.
[{ ಬಾಕ್ಸ್ :-ಸಾಮಾನ್ಯ ಮನುಷ್ಯ ನಾಗಿ, ಸಾಹಿತಿಯಾಗಿ, ಪತ್ರಕರ್ತ ನಾಗಿ ನಿಮಗೆ ಯಾವುದು ಇಷ್ಟ?. ನಾನು ಸಾಮಾನ್ಯ ಮನುಷ್ಯ ನಾಗಿರುವುದಕ್ಕೆ ಹೆಚ್ಚು ಇಷ್ಟ ಪಡುತ್ತೇನೆ:- ಗಂಗಾಧರ ಕೊಳಗಿ ಸಾಹಿತಿ. }]
ಡಾ, ಶ್ರೀ ಧರ ವೈಧ್ಯ ಮಾತನಾಡಿ ಬರವಣಿಗೆಯಲ್ಲಿ
ನಮ್ಮ ಅನುಭವ ಬಹಳ ಪ್ರಮುಖ್ಯವಾಗುತ್ತದೆ. ಹೆಚ್ಚು ಹೆಚ್ಚು ಪುಸ್ತಕ ಗಳನ್ನು ಬರೆಯ ಬೇಕು.
ಸ್ಥಾನಿಕವಾಗಿ ಗುರುತಿಸಿವ ಕಾರ್ಯ ತಡವಾಗಿ ಆಗುತ್ತದೆ. ಓದುಗರ ಸಂಖ್ಯೆ ಹೆಚ್ಚಾಗಿಸಬೇಕು. ಹೆಚ್ಚೆಚ್ಚು ವಿಮರ್ಶೆಗಳು ಆಗಬೇಕು ಎಂದರು.
ಶಿವಾನಂದ ಹೊನ್ನೆಗುಂಡಿ, ಸುರೇಂದ್ರ ದಫೇದಾರ, ವೆಂಕಟೇಶ ಮಡಿವಾಳ, ಜಿ ಜಿ ಹೆಗಡೆ, ರತ್ನಾಕರ್ ನಾಯ್ಕ, ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗೋಪಾಲ್ ಭಾಶಿ ಅಧ್ಯಕ್ಷ ತೆ ವಹಿಸಿದ್ದರು.
ವೇದಿಕೆ ಯಲ್ಲಿ ಸಿ ಎಸ್ ಗೌಡರ್, ಪಿ ಬಿ ಹೊಸೂರ ಉಪಸ್ಥಿತರಿದ್ದರು.
ಅಣ್ಣಪ್ಪ ಶಿರಳಗಿ ಸ್ವಾಗತಿಸಿದರು. ಚಂದ್ರಶೇಖರ ನಾಯ್ಕ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top