ಸಮಾಜವನ್ನು ಪ್ರೀತಿಸುವುದು ಗೌರವಿಸುವುದು, ಪ್ರತಿಯೊಬ್ಬನ ಧರ್ಮ:ಭೀಮಣ್ಣ ಟಿ ನಾಯ್ಕ ಹೇಳಿಕೆ

ಸಿದ್ದಾಪುರ : ಸಮಾಜವನ್ನು ಪ್ರೀತಿಸುವುದು ಗೌರವಿಸುವುದು, ಪ್ರತಿಯೊಬ್ಬನ ಧರ್ಮ ಹಾಗೂ ಆದ್ಯ ಕರ್ತವ್ಯ ವಾಗಿದೆ ನಾರಾಯಣ ಗುರುಗಳ ಸಂದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರತಿಯೊಬ್ಬರು ಶ್ರಮ ಪಡಬೇಕಾಗುತ್ತದೆ
ಎಂದು ಶಿರಸಿ ಆರ್ಯ ಈಡಿಗ ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮಣ್ಣ ಟಿ ನಾಯ್ಕ ಹೇಳಿದರು.
ಅವರು ಪಟ್ಟಣದ ರಾಘವೇಂದ್ರ ಮಠದಲ್ಲಿ ಬಿ. ಎಸ್. ಏನ್. ಡಿ. ಪಿ. ಸಂಘಟನೆ ತಾಲೂಕ ಘಟಕ ಆಯೋಜಿಸಿದ ನಾರಾಯಣ ಗುರುಗಳ 168 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಬ್ಬ ರಾಜಕೀಯ ವ್ಯಕ್ತಿಯಿಂದ ಸಮಾಜವನ್ನು ಉದ್ದಾರ ಮಾಡಲು ಸಾಧ್ಯವಿಲ್ಲ. ಸಮಾಜವನ್ನು ಸುಧಾರಣೆ ಮಾಡುವುದು ಅವರ ಹುಟ್ಟು ಗುಣದಿಂದ ಬರಬೇಕಾಗಿದೆ.
ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಿದಾಗ ಮಾತ್ರ ಗುರುಗಳ ತತ್ವ ಮತ್ತು ವಿಚಾರಗಳು ಪ್ರತಿಯೊಬ್ಬರಿಗೂ ತಿಳಿಯಲು ಸಾಧ್ಯವಾಗುತ್ತದೆ
. ಮಗು ಉತ್ತಮ ಸಮಾಜದಲ್ಲಿ ಬೆಳೆದಾಗ ಮಾತ್ರ ಸಮಾಜದ ಬಗ್ಗೆ ಉತ್ತಮ ಕಳಕಳಿ, ಆ ಮಗುವಿನಲ್ಲಿ ಬೆಳೆಯಲು ಸಾಧ್ಯ. ಉತ್ತಮ ಸಮಾಜದಲ್ಲಿ ಬೆಳೆದಾಗ ಮಾತ್ರ ಸ್ವಾಮೀಜಿಯವರು ಹೇಳಿದ ಸಂದೇಶಗಳು, ವಿಚಾರಗಳು ಮೊಳಕೆ ಒಡೆಯಲು ಸಾಧ್ಯ. ಉತ್ತಮ ಸಂಪನ್ಮೂಲ ವ್ಯಕ್ತಿಗಳ ಮಾತು ಕೇಳಿದಾಗ ಮಾತ್ರ ಆ ಮೊಳಕೆ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು
ಅತಿಥಿ ಗಣ್ಯರು ನಾರಾಯಣ ಗುರುಗಳ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ರಘುಪತಿ ನಾಯ್ಕ್ ಹೆಗ್ಗರಣಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ಸಾಧಕರು ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು
ಉಪನ್ಯಾಸಕ ರತ್ನಾಕರ ನಾಯ್ಕ್ ಉಪನ್ಯಾಸ ನೀಡಿದರು ಸಿಗಂದುರು ಕ್ಷೇತ್ರದ ಧರ್ಮಾಧಿಕಾರಿ ರಾಮ್ಮಪ್ಪನವರು ಸಂಘಟನೆಯ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು
ಬಿ.ಎಸ್.ಎನ್.ಡಿ.ಪಿ ಸಂಘಟನೆ ತಾಲೂಕಾ ಅಧ್ಯಕ್ಷ ವಿನಾಯಕ ನಾಯ್ಕ ಅಧ್ಯಕ್ಷತೆ ವಹಿಸಿದ್ದರು‌. ಈ ವೇಳೆ ನಿವೃತ್ತ ಸರ್ವೆಯರ್ ಡಿ.ಸಿ.ನಾಯ್ಕ ಅವರಗುಪ್ಪ, ನಿವೃತ್ತ ಅಭಿಯೋಜಕ ಬಿ.ಜಿ‌.ನಾಯ್ಕ ಹಲಗೇರಿ, ಬಿ.ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ, ಸಮಾಜದ ಪ್ರಮುಖರಾದ ಗೋಪಾಲ ನಾಯ್ಕ ಭಾಶಿ, ವಸಂತ ನಾಯ್ಕ ಮನಮನೆ, ವೀರಭದ್ರ ನಾಯ್ಕ, ಕೆ.ಜಿ.ನಾಗರಾಜ, ಕೆ.ಆರ್.ವಿನಾಯಕ, ಹೆಸ್ಕಾಂನ ರವಿ ನಾಯ್ಕ ಉಪಸ್ಥಿತರಿದ್ದರು.
ಭೂಮಾಪನ ಇಲಾಖೆಯ ಉಷಾ ನಾಯ್ಕ ನಿರೂಪಿಸಿದರು. ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು ಶಿಕ್ಷಕ ನಾಗರಾಜ್ ನಾಯ್ಕ್ ವಂದಿಸಿದರು
ಸಂಗೀತ ಕಾರ್ಯಕ್ರಮ ಜರುಗಿತು ನಾರಾಯಣ ಗುರುಗಳ ಜಯಂತಿ ಆಚರಣೆ ಕಾರ್ಯಕ್ರಮ ಯಶಸ್ವಿಯಾಯಿತು.

WhatsApp
Facebook
Telegram
error: Content is protected !!
Scroll to Top