ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ತಯಾರಿ.

ಕುಮಟಾದ ಜನಜಾಗ್ರತಿ ಸಬೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯಪರ ಕಾರ್ಯಕರ್ತರ ಬಲ ಪ್ರದರ್ಶನ

ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಚಾರ ಪ್ರಾರಂಬಿಸಿದ್ದು . ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಪಕ್ಷದ ಜನಜಾಗೃತಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖಂಡರು ಪರೇಶ ಮೇಸ್ತಾ ವಿಷಯ ಪ್ರಸ್ತಾಪಿಸಿದರು.

2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಲೇ ತಯಾರಿ ಶುರುಮಾಡಿಕೊಂಡಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಕಾಂಗ್ರೆಸ ಪಕ್ಷದ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಬಿಜೆಪಿ ಪಕ್ಷ ಹಿಂದಿನ ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆ ಬಗ್ಗೆ ಬಾಯಿ ತೆಗೆಯುತ್ತಿಲ್ಲ. ಸಿಎಂ ಬೊಮ್ಮಾಯಿ ಅವರು ಕೂಡ ಮಾತನಾಡುತ್ತಿಲ್ಲ. ಡಬಲ್ ಎಂಜೀನ್ ಸರ್ಕಾರದಲ್ಲಿ ಏನು ಮಾಡಿದ್ದೀರಾ? ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆಸ್ಪತ್ರೆ ಬಿಲ್ ನೀಡಿಲ್ಲ. ಕೋವಿಡ್ ಪರಿಹಾರವನ್ನೂ ನೀಡದೇ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ತಮ್ಮದೇ ಸಚಿವ ಸುರೇಶ ಅಂಗಡಿ ಸಾವನ್ನಪ್ಪಿದರೇ, ಬಿಜೆಪಿಯವರು ಮಾನವೀಯತೆ ತೋರಿಸಿಲ್ಲ. ಹೀಗಾಗಿ ನನ್ನ ಸಹೋದರ ಸುರೇಶ ಅಂತ್ಯಕ್ರಿಯೆ ನಡೆಸಿದ್ದರು ಎಂದರು. ಈ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿ ಇಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 140- 150 ಕಾಂಗ್ರೆಸ್ ಸ್ಥಾನ ಗಳಿಸಲಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಡಿ ಕೆ ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ.

ಮುಂದುವರಿದು ಮಾತನಾಡಿದ ಡಿಕೆಶಿ ಬಿಜೆಪಿ ವ್ಯವಸ್ಥಿತವಾಗಿ 27ಲಕ್ಷ ಜನರ ಓಟನ್ನ ತೆಗೆದು ಹಾಕಿದ್ದಾರೆ. ವೋಟರ್ ಲಿಸ್ಟಿಂದ ತೆಗೆಯಬೇಕಾದರೇ ಮನೆಗೆ ಹೋಗಿ ಪರಿಶೀಲಿಸಬೇಕು. ಅದನ್ನೆಲ್ಲಾ ಮಾಡದೇ ಕಾಂಗ್ರೆಸ್ಗೆ ಮತ ನೀಡುವ ಅಲ್ಪಸಂಖ್ಯಾತರು, ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರ ಹೆಸರನ್ನ ಲಿಸ್ಟಿಂದ ತೆಗೆದು ಹಾಕಿದೆ. ಈ ಬಗ್ಗೆ ಇಲೆಕ್ಷನ್ ಕಮಿಶನ್ ಗೆ ದೂರು ನೀಡಿ ಬಂದಿದ್ದೇನೆ. ಎಂದು ತಿಳಿಸಿದ್ರು. ಕುಮಟಾದಲ್ಲಿ ನಡೆದ ಸಭೆ ಐತಿಹಾಸಿಕವಾದ ಸಭೆ..ಪರೇಶ ಮೇಸ್ತಾ ವಿಚಾರ ಮಾತ್ರವಲ್ಲ. ನಿಮ್ಮನ್ನು ಜಾಗೃತಿಗೊಳಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮ ಸಂಘಟನೆಗೆ ಶಕ್ತಿ ನೀಡಿದ್ದಕ್ಕೆ ಶಿವಕುಮಾರ ಧನ್ಯವಾದ ಸಲ್ಲಿಸಿದರು. ಬಿಜೆಪಿಯವರು ಯಾವುದಾದರೂ ಮಾತು ನೀಡಿದಾಗ ಮಾತನ್ನ ಉಳಿಸಿಕೊಂಡಿದ್ದೀರಾ. ಬಸವಣ್ಣ, ಕುವೆಂಪು, ಸಂತ ಶಿಶುನಾಳ ಷರೀಪರ ಕರ್ನಾಟಕ ಇದು. ದ್ವೇಷ, ಅಸೂಯೆಯಿಂದಾಗಿ ಜನ ವಲಸೆ ಹೋಗ್ತಿದ್ದಾರೆ. ಮಕ್ಕಳಿಗೆ ಮನೆ ಇದೆ, ಜಮೀನು ಇದೆ ಉದ್ಯೋಗ ಇಲ್ಲ. ಪ್ರಧಾನಮಂತ್ರಿಗಳು 15 ಲಕ್ಷ ಕೋಡ್ತಿದ್ದೇನೆಂದು ಹೇಳಿದ್ರು ಆಗಿಲ್ಲ. ರಾಹುಲ್ ಗಾಂಧೀಯವರು ಕನ್ಯಾಕುಮಾರಿ ಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಮಾಡಿದವರನ್ನ ನೆನೆಸಿಕೊಳ್ತಾರೆ ದೇಶದ ಐಕ್ಯತೆ ಸಮಗ್ರತೆಗಾಗಿ ನಮ್ಮ ಕುಟುಂಬ ಸೇವೆ ಸಲ್ಲಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಬಿಜೆಪಿ ಸಾಧನೆ ಬಗ್ಗೆ ಕೇವಲ ಜಾಹೀರಾತು ನೀಡಿದ್ದು ಬಿಟ್ಟರೇ ಯಾರ ಬದುಕಿನಲ್ಲಿ ಬದಲಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂಕುನುಗ್ಗಲಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬಹಳ ಜನ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರಾದ ಆರ್ ವಿ ದೇಶಪಾಂಡೆ ಮತ್ತು ಐವನ್ ಡಿಸೋಜಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬಿಜೆಪಿಯವರು ಪರೇಶ ಮೇಸ್ತಾ ಕೊಲೆಯಾಗಿದೆಯೆಂದು ಗಲಾಟೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಸಿಬಿಐ ಗೆ ನೀಡಿದ್ದರು. ಈಗ ಸಿಬಿಐ ಕೊಲೆ ಅಲ್ಲವೆಂದು ಹೇಳಿದೆ. ಸಿಬಿಐ ಕೇಂದ್ರ ದ ಅಧೀನದಲ್ಲಿರುವ ಸಂಸ್ಥೆ. ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಪ್ರಚೋದನೆ ನೀಡುತ್ತಿದೆಎಂದು ಆರೋಪಿಸಿದ್ರು. ಒಟ್ಟಿನಲ್ಲಿ ಚುನಾವಣೆಗೆ ಇನ್ನೂ ಐದಾರು ತಿಂಗಳು ಇರುವ ಮುಂಚೆ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಪರೇಶ ಮೇಸ್ತಾ ಸಾವಿನ ಅನುಕಂಪದಿಂದ ಆಯ್ಕೆಯಾದ ಬಿಜೆಪಿಗೆ ಕಾಂಗ್ರೆಸ್ ಸಮಾವೇಶ ಯಾವ ರೀತಿಯಲ್ಲಿ ಹೊಡೆದ ನೀಡುತ್ತೋ ಕಾದು ನೋಡಬೇಕಾಗಿದೆ.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಶಾಸಕ ಯುಟಿ ಖಾದರ್, ಮಾಜಿ ಶಾಸಕರಾದ ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಸತೀಶ್ ಸೈಲ್, ವಿನಯಕುಮಾರ ಸೊರಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top