ಭಟ್ಕಳ ತಾಲೂಕ ಯಲ್ವಡಿ ಕವೂರ್ ಗ್ರಾಮ ಪಂಚಾಯತ ಅಲ್ಲಿ ಗ್ರಾಮ‌ ಸಭೆ

ಸಭೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ ಸಾರ್ವಜನಿಕರ ಆಗ್ರಹ

ಭಟ್ಕಳ : ತಾಲೂಕಿನ ಯಲ್ವಡಿ ಕವೂರ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಮರ್ಪಕ ನೀರಿನ ಪೂರೈಕೆ ಮಾಡುತ್ತಿಲ್ಲಾ ಎಂದು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸಿದರು

ತಾಲೂಕಿನ ಯಲ್ವಡಿ ಗ್ರಾಮಪಂಚಾಯತ ಅಲ್ಲಿ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಸಲಾಯಿತು. ಸಭೆಯಲ್ಲಿ ತಾಲೂಕಿನ ವಿವಿದ ಸರಕಾರಿ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವರದಿಯನ್ನು ಮಂಡಿಸಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿದರು ‌. ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ. ಕನ್ನಡ ಶಾಲೆಯ ನೂರು ಮಿಟರ್ ಒಳಗಡೆ ತಂಬಾಕು ಗುಟಕಾ ಬೀಡಿ ಸಿಗರೇಟಗಳಂತ ಮಾದಕ ಪದಾರ್ಥವನ್ನು ಮಾರಾಟ ಮಾಡಲಾಗುತ್ತಿದೆ ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹಿಸಿದರು ಹಾಗು ಪಂಚಾಯತ್ ವ್ಯಾಪ್ತಿಯ ಸರಕಾರಿ ಭಾವಿಯೊಂದಕ್ಕೆ ಖಾಸಗಿ ವ್ಯಕ್ತಿಯೋರ್ವ ಸ್ವಹಿತಾಸಕ್ತಿಗಾಗಿ ಪಂಪ ಸೆಟ್ ಒಂದನ್ನು ಇಳಿಸಿರುತ್ತಾನೆ ಇದು ಸಾರ್ವಜನಿಕರಿಗೆ ತೊಂದರೆಯನ್ನು ತಂದಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸಿದರು . ಈ ಬಗ್ಗೆ ಅಧ್ಯಕ್ಷ ಲಕ್ಷ್ಮಿ ನಾರಾಯಣ ಪ್ರತಿಕ್ರಿಯಿಸಿ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನಿಡಿದರು ಅಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎರ್ಪಟ್ಟಿದೆ ವಾಟರ್ ಮ್ಯಾನ್ ಮಾತ್ರ ನೀರಿನ ಕರವನ್ನು ವಸೂಲಿ ಮಾಡುತ್ತಿದ್ದಾನೆ ಈ ಕೂಡಲೆ ಸಮಸ್ಯೆ ಬಗೆಹರಿಸ ಬೇಕು ಎಂದು ಆಗ್ರಹಿಸಿದರು.

ಈ ಸಂದರ್ಬದಲ್ಲಿ ಪಂಚಾಯತ್ ಅಧ್ಯಕ್ಷರು ಪಧಾಧಿಕಾರಿಗಳು ಸದಸ್ಯರು ಹಾಗು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top