ಬಿ.ಜೆ.ಪಿ. ಶಾಸಕರು, ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಆಗ್ರಹ.

ಪರೇಶ ಮೆಸ್ತ ಸಹಜ ಸಾವನ್ನ ಕೊಲೆ ಎಂದು ಬಿಂಬಿಸಿದ ಬಿಜೆಪಿಗೆ ಆಡಳಿತ ನಡೆಸುವ ನೈತಿಕ ಹಕ್ಕಿಲ್ಲಾ ಆಕ್ರೋಶ

ಭಟ್ಕಳ : ಹೊನ್ನಾವರದ ಪರೇಶ ಮೇಸ್ತಾ ಅವರ ಸಹಜ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದು ಚುನಾವಣೆಯಲ್ಲಿ ಆರಿಸಿ ಬಂದಿದ್ದ ಬಿ.ಜೆ.ಪಿ. ಶಾಸಕರು, ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ಆಗ್ರಹಿಸಿದರು.


ಭಟ್ಕಳದ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕಾಣೆಯಾಗಿದ್ದ ಪರೇಶ ಮೇಸ್ತ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದನ್ನೇ ಚುನಾವಣಾ ಬಂಡವಾಳವನ್ನಾಗಿ ಬಳಸಿಕೊಂಡಿದ್ದ ಬಿ.ಜೆ.ಪಿ. ಐವರು ಮುಸ್ಲೀಮರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸುತ್ತದೆ. ಅಂದಿನ ಮುಖ್ಯ ಮಂತ್ರಿ ಸಿ.ಓ.ಡಿ.ಗೆ ಪ್ರಕರಣ ಹಸ್ತಾಂತರ ಮಾಡಿದ್ದನ್ನು ವಿರೋಧಿಸಿ ನಮಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ, ನಾವೇನಿದ್ದರೂ ಸಿ.ಬಿ.ಐ. ಮೇಲೆ ನಂಬಿಕೆ ಇದ್ದವರು ಸಿ.ಬಿ.ಐ. ತನಿಖೆಯೇ ಆಗಬೇಕು ಎಂದು ಆಗ್ರಹಿಸಿ ಸಿ.ಬಿ.ಐ. ತನಿಖಗೆ ಒಪ್ಪಿಸಲಾಗಿತ್ತು. ಆದರೆ ಇಂದು ಸಿ.ಬಿ.ಐ. ಇವರ ಪರವಾಗಿ ವರದಿಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿ.ಬಿ.ಐ. ತನಿಖೆಯ ಮೇಲೆಯೇ ನಂಬಿಕೆ ಇಲ್ಲ ಎನ್ನುವ ಬಿ.ಜೆ.ಪಿ. ಬಣ್ಣ ಬಯಲಾಗಿದೆ. ಅಂದು ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ೨೦೮೨ ಜಬನರ ಮೇಲೆ ೬೭ ಪ್ರಕರಣಗಳು ದಾಖಲಾದುವು. ೩೬೧ ಜನರನ್ನು ಬಂಧಿಸಲಾಗಿತ್ತು, ೨೭೨ ಜನರ ಮೇಲೆ ರೌಡಿ ಶೀಟ್ ತೆರೆಲಾಗಿದೆ. ಪೊಲೀಸ್ ಇಲಾಖೆ ೧೬೯೯ ಜನರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ ಇದೆಲ್ಲವೂ ಇವರು ಚುನಾವಣೆಯಲ್ಲಿ ಗೆಲ್ಲಲಿಕ್ಕಾಗಿ ಮಾಡಿದ ದುಷ್ಕೃತ್ಯವಾಗಿದ್ದು ಈಗ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದೂ ದೂರಿದರು.
ನಿಮ್ಮದೇ ಸರಕಾರ ಕೇಂದ್ರದಲ್ಲಿದೆ, ನಿಮ್ಮದೇ ಸರಕಾರ ರಾಜ್ಯದಲ್ಲಿದೆ ಡಬ್ಬಲ್ ಇಂಜಿನ್ ಸರಕಾರ ಎನ್ನುವ ನೀವು ನಿಮ್ಮದೇ ಅವಧಿಯಲ್ಲಿ ಸಿಬಐ ನೀಡಿದ ವರದಿಯನ್ನು ಒಪ್ಪುತ್ತಿಲ್ಲ ಎನ್ನುತ್ತೀರಲ್ಲ ನಿಮ್ಮನ್ನು ನೋಡಿ ಜನ ನಗುವಂತಾಗಿದೆ. ಕಾನೂನಿನ ಅರಿವೇ ಇಲ್ಲದಂತಹ ನಿಮ್ಮ ಪು:ನ ಪರಿಶೀಲನೆಯ ನಾಟಕ ಸಾಕಾಗಿ ಹೋಗಿದೆ ಎಂದ ಅವರು ಜನರಲ್ಲಿ ಸುಳ್ಳನ್ನೇ ಸತ್ಯ ಎಂದು ನಂಬಿಸಿ ಮೋಸದಿಂದ ಆಯ್ಕೆಯಾದ ಬಿ.ಜೆ.ಪಿ. ಶಾಸಕ ಸುನಿಲ್ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸಂಸದ ಅನಂತಕುಮಾರ ಹೆಗಡೆ ರಾಜೀನಾಮೆ ನೀಡಲಿ ಎಂದೂ ಅವರು ಆಗ್ರಹಿಸಿದರು.
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪರೇಶ ಮೇಸ್ತನ ಸಾವಿನ ವರದಿಯನ್ನು ಬಿಂಬಿಸುತ್ತಿದೆಯೇ ಎನ್ನುವ ವರದಿಗಾರರ ಪ್ರಶ್ನೆಗುತ್ತರಿಸಿದ ಅವರು ಪರೇಶ ಮೇಸ್ತನ ಸಾವಿನ ವರದಿಯು ಚುನಾವಣೆಗೆ ಮೊದಲು ಬಂದಿದ್ದರಿದ ಬಿ.ಜೆ.ಪಿ. ಪಕ್ಷಕ್ಕೆ ದೊಡ್ಡ ಆಘಾತವಾಗಿದೆ. ಈ ಬಾರಿ ಚುನಾವಣೆಗೂ ಮುನ್ನವೇ ಜನರಿಗೆ ಸತ್ಯದ ಅರಿವಾಗಿದ್ದರಿಂದ ಬಿ.ಜೆ.ಪಿ.ಗೆ ಇದು ಮುಳುವಾಗಲಿದೆ ಎಂದರು.
ಬೃಹತ್ ಸಮಾವೇಶ: ಕುಮಟಾದಲ್ಲಿ ನ.೨೪ರಂದು ಬಿ.ಜೆ.ಪಿ. ದ್ವಂದ್ವ ನೀತಿಯನ್ನು ಜನತೆತೆ ತಿಳಿಸಲು ಹಾಗೂ ರಾಜ್ಯ-ಕೇಂದ್ರ ಸರಕಾರಗಳ ವೈಫಲ್ಯವನ್ನು ಜನರ ಮುಂದೆ ಇಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಳಾಗಿದ್ದು ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ರಾಜ್ಯ ಉಸ್ತುವಾರಿಗಳು, ಶಾಸಕರು, ಸಂಸದರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಪ್ರಮುಖರಾದ ಪರ್ವೇಜ್ ಕಾಶಿಮಜಿ, ಟಿ.ಡಿ.ನಾಯ್ಕ, ಸತೀಶ ನಾಯ್ಕ, ಸಂತೋಷ ನಾಯ್ಕ, ಖೈಸರ್ ಮೊಹತೆಶಂ, ಸುಲೇಮಾನ್ ಸಾಬ್, ಮಹಾಬಲೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ, ಗಣಪತಿ ನಾಯ್ಕ ಜಾಲಿ, ಮಹೇಶ ನಾಯ್ಕ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top