ಭಟ್ಕಳ ತಾಲೂಕಿನಲ್ಲಿ ನಿಯಮ ಮಿರಿ ಹಲವಾರು ವರ್ಷಗಳಿಂದ ಒಂದೆ ಕಡೆ ಬೀಡು ಬಿಟ್ಟಿರುವ ಸರಕಾರಿ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತರಿಂದ ಮನವಿ

ಸಹಾಯಕ ಆಯುಕ್ತರ ಮೂಲಕ ಕರ್ನಾಟಕ ಸರಕಾರದ ಕಾರ್ಯದರ್ಶಿಗೆ ಮನವಿ

ಭಟ್ಕಳ : ತಾಲೂಕಿನ ಕಂದಾಯ ಇಲಾಖೆ ಸೇರಿದಂತೆ ವಿವಿದ ಇಲಾಖೆಯ ಸಿಬ್ಬಂದಿಗಳು ಹಲವಾರು ವರ್ಷಗಳಿಂದ ನಿಯಮ ಬಾಹಿರವಾಗಿ ಒಂದೆ ಕಡೆ ಬೀಡು ಬಿಟ್ಟಿರುವ ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡ ಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಇದರ ಭಟ್ಕಳ ತಾಲೂಕ ಘಟಕದ ಘಟಕದ ವತಿಯಿಂದ ತಾಲೂಕ ಸಹಾಯಕ ಅಯುಕ್ತರ ಮೂಲಕ ಕರ್ನಾಟಕ ಸರಕಾರದ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಭಟ್ಕಳ ತಾಲೂಕ ಉಪ ಆಯುಕ್ತರ ಕಛೇರಿ ತಾಲೂಕ ತಹಶಿಲ್ದಾರ್ ಕಛೇರಿ ಭೂ ಮಾಪಕರ ಕಛೇರಿ , ಸೇರಿದಂತೆ ತಾಲೂಕಿನ ವಿವಿದ ಸರಕಾರಿ ಇಲಾಖೆಗಳಲ್ಲಿ ನಿಯಮ ಮೀರಿ ಹಲವಾರು ವರ್ಷಗಳಿಂದ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಂದೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇದು ಮದ್ಯವರ್ತಿಗಳಿಗೆ ಸಹಕಾರಿಯಾಗಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತದೆ ಹಾಗೆ ಅಕ್ರಮ ದಾಖಲೆಗಳು ಸ್ರಷ್ಟಿಯಾಗುತ್ತದೆ . ಇಂತವುಗಳಿಗೆ ಕಡಿವಾಣ ಹಾಕುವ ಸಲುವಾಗಿ ಸರಕಾರ ಮತ್ತು ಇಲಾಖೆಗಳು ಮಾನದಂಡ ನಿಗದಿ ಮಾಡಿ ವರ್ಗಾವಣೆ ನಿಯಮಾವಳಿ ರೂಪಿಸಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಇಂತಹ ನಿಯಮಾವಳಿ ಸರಕಾರದ ಆದೇಶಗಳು ಅನ್ವಯವಾಗುದಿಲ್ಲವೆನೊ ಎಂಬಂತೆ ಇದೆ ಕಾರಣ ತಾವು ಭಟ್ಕಳ ತಾಲೂಕಿನಲ್ಲಿ ನಿಯಮ ಮೀರಿ ಒಂದೆ ಕರ್ತವ್ಯ ನಿರ್ವಹಿಸುವ ನೌಕರರನ್ನು ಗುರುತಿಸಿ ಬೇರೆಡೆ ವರ್ಗಾವಣೆ ಮಾಡುವುದರ ಮೂಲಕ ನಾಗರಿಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕ ಜಿಲ್ಲಾ ಕಾರ್ಯದರ್ಶಿ ಅರ್ಜುನ್ ಮಲ್ಯ ತಾಲೂಕ. ಅಧ್ಯಕ್ಷ ನಾಗೇಂದ್ರ ನಾಯ್ಕ ಉಪಾಧ್ಯಕ್ಷ ಶಂಕರ್ ನಾಯ್ಕ ತಾಲೂಕ ಕಾರ್ಯದರ್ಶಿ ನಾಗೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top