ಹೈಕೊರ್ಟ ಆದೇಶಕ್ಕೂ ಕ್ಯಾರೆ ಎನ್ನದ ಸಹಕಾರಿ ಸಂಘದ ಡಿ ಆರ್

ಭಟ್ಕಳ ಪಿ ಎಲ್ ಡಿ ಬ್ಯಾಂಕ್ ಆಡಳಿತ ಕಮಿಟಿ ಅನರ್ಹತೆಗೆ 29 c ಅಲ್ಲಿ ಆದೇಶವಿದ್ದರು ಪ್ರಕರಣವನ್ನು ಮುಗಿಸದೆ ಕಾಲಹರಣ

ಯಾರ ಹಿತಾಸಕ್ತಿಯನ್ನು ಕಾಯುತ್ತಿದ್ದಾರೆ ಸಹಕಾರಿ ಸಂಘದ ಡಿ ಆರ್ ಓ

ಭಟ್ಕಳ: ತಾಲೂಕಿನ ಹಣಕಾಸು ಸಂಸ್ಥೆ ಪಿ ಎಲ್ ಡಿ ಭ್ಯಾಂಕ್ ಆಡಳಿತ ಕಮಿಟಿ ಅನರ್ಹತೆ ಮಾಡುವಂತೆ ಸಹಕಾರಿ ಸಂಘಗಳ ಕಾಯ್ದೆ 1959 ಕಲಂ 29 c ಅಡಿಯಲ್ಲಿ ಆದೇಶ ಹೊರಡಿಸಿದರು ಉಚ್ಚ ನ್ಯಾಯಾಲಯ ಆದೇಶದ ಪ್ರಕಾರ 24 ಸಿಬ್ಬಂದಿಗಳ ವಿರುದ್ದ ಕ್ರಮ ಜರುಗಿಸದೆ ಕಾಲಹರಣ ಮಾಡುತ್ತ ಕೆಲವು ಹಿತಾಸಕ್ತಿಗಳನ್ನು ಕಾಯುತ್ತಿರುವುದು ಮೆಲ್ನೊಟಕ್ಕೆ ಕಂಡುಬರುತ್ತಿದೆ ಇದಕ್ಕೆ ಪುಷ್ಟಿ ಕೊಡುವಂತೆ ಈಗ ಸಹಕಾರಿ ಸಂಘಗಳ joint register ಕಾಲಹರಣ ಮಾಡದೆ ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತೆ ಸರಕಾರಿ ಸಂಘಗಳ DR Deputy register ಅವರಿಗೆ ಕಡಕ್ ನೊಟಿಸನ್ನು ನೀಡಿದ್ದಾರೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ

ವೀಕ್ಷಕರೆ ಹಿಂದಿನಿಂದಲೂ ಭಟ್ಕಳ ಪ್ರತಿಷ್ಡಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಪಿ ಎಲ್ ಡಿ ಭ್ಯಾಂಕ್ ಒಂದಿಲ್ಲೊಂದು ವಿವಾದಗಳನ್ನು ತಾನೆ ಹುಟ್ಟಿಹಾಕಿಕೊಂಡು ಆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಲುಗುತ್ತಲೆ ಬಂದಿದೆ ಈ ಬ್ಯಾಂಕ್ ಸಾರ್ವಜನಿಕ ಸೇವೆಗಿಂತ ಯಾವಾಗಲು ವಿವಾದಗಳಿಗೆ ಕುಖ್ಯಾತಿಯನ್ನು ಪಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲವೇನೊ ಇದಕ್ಕೆ ಒಂದು ಸ್ಪಷ್ಟ ದಾಖಲೆ ಎಂದರೆ ಸಿಬ್ಬಂದಿ ನೇಮಕಾತಿ ಈ ಹಣಕಾಸು ಸಂಸ್ಥೆ ಸಹಕಾರಿ ಸಂಘದ ಆಡಳಿತ ಕಮಿಟಿ ಸಂಘದ ಎಲ್ಲಾ ಕಾನೂನು ನಿಯಮಾವಳಿಯನ್ನು ಗಾಳಿಗೆ ತೂರಿ ,ಬರೊಬ್ಬರಿ 24 ಸಿಬ್ಬಂದಿಗಳನ್ನು ತಮ್ಮ ಮನೆಗೆ ನೇಮಕ ಮಾಡಿಕೊಳ್ಳುವಂತೆ ನೇಮಕ ಮಾಡಿಕೊಂಡಿತ್ತು ಮುಖ್ಯವಾಗಿ ಈ ಪಿ ಎಲ್ ಡಿ ಭ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ನಮ್ಮ ಘನವೆತ್ತ ಶಾಸಕ ಸುನಿಲ್ ನಾಯ್ಕ ಅವರು ಇದ್ದರು ಎನ್ನುವುದು ಗಮನಾರ್ಹ ಸಂಘತಿ ಆದರು ಕೂಡ ಅಲ್ಲಿ ಅಲ್ಲಿ ಸಹಕಾರಿ ಸಂಘದ ನಿಯಮ ಬಾಹಿರವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಯಾಕೆ ಶಾಸಕರಿಗೆ ಸಹಕಾರಿ ಸಂಘದ ನಿಯಮಗಳು ಗಮನಕ್ಕಿಲ್ಲವಾಗಿತ್ತೆ ಅಥವಾ ತಾವು ಮಾಡಿದ್ದೆ ಕಾನೂನು ಎಂಬ ಉಡಾಪೆಯಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಯಿತೆ ಇದಕ್ಕೆ ಶಾಸಕ ಸುನಿಲ್ ನಾಯ್ಕ ಉತ್ತರಿಸ ಬೇಕಾದ ಅನಿವಾರ್ಯತೆ ಇದೆ . ಹಿಂದೆ ನಡೆದ ಈ ಕಾನೂನು ಭಾಹಿರ ಸಿಬ್ಬಂದಿ ನೆಮಕಾತಿ ವಿರುದ್ದ ಶಂಕರ್ ರಾಮಕ್ರಷ್ಣ ನಾಯ್ಕ ಕಟಗಾರ್ ಕೊಪ್ಪ ಇವರು ಹೈ ಕೊರ್ಟಲ್ಲಿ ಕಾನೂನಿನ ಮೊರೆ ಹೊಗಿದ್ದರು ಹೈಕೊರ್ಟ ಶಂಕರ್ ನಾಯ್ಕ ಪರವಾಗಿ ತಿರ್ಪನ್ನು ನೀಡಿತ್ತು ಆ ಸಂದರ್ಬದಲ್ಲಿ ಸಂಸ್ತೆಯ ಅಧ್ಯಕ್ಷರು ಶಾಸಕರು ಆದ. ಸುನಿಲ್ ನಾಯ್ಕ ಮೆಲ್ಮನವಿ ಸಲ್ಲಿಸಿದ್ದರು ಹೈಕೊರ್ಟ ಅವರ ಮೆಲ್ಮನವಿಯನ್ನು ತಳ್ಳಿಹಾಕಿ ಸಹಕಾರಿ ಸಂಘಗಳ ಕಾಯ್ದೆ 1959 ಕಲಂ 29 c ಅಡಿಯಲ್ಲಿ ಯಾಕೆ ಅನರ್ಹಗೊಳಿಸ ಬಾರದು ಎಂದು ಕೇಳಿತ್ತು ಅಲ್ಲದೆ ಕಾನೂನು ಬಾಹಿರ ಸಿಬ್ಬಂದಿ ನೆಮಕಾತಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿತ್ತು ನಂತರದ ದಿನದಲ್ಲಿ ಆದರೆ ಹೈಕೊರ್ಟ ಆದೇಶ ವಿದ್ದರು ಸಹಕಾರಿ ಸಂಘದ ಡಿ ಆರ್ ತನಿಖೆಯ ನೆಪವನ್ನು ಮುಂದಿಟ್ಟುಕೊಂಡು ಈ ಬಗ್ಗೆ ಯಾವುದೆ ಕ್ರಮವನ್ನು ಕೈಗೊಂಡಿರುವುದಿಲ್ಲಾ ಯಾವುದೊ ಸ್ವ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವವರಂತೆ ಕಾಲಹರಣ ಮಾಡುತ್ತಿದ್ದರು ಇದನ್ನು ಗಮನಿಸಿದ ಸಹಕಾರಿ ಸಂಘಗಳ belagavia joint register ಅವರು ಕಾಲಹರಣ ಮಾಡದಂತೆ ಹೈಕೊರ್ಟ ಆದೇಶವನ್ನು ಪಾಲಿಸುವಂತೆ ಕಡಕ್ ನೊಟಿಸನ್ನೆ ನೀಡಿದೆ ಹಾಗಾದರೆ ಈ ಸಹಕಾರಿ ಸಂಘಗಳ Deputy register ಅವರಿಗೆ ಸ್ವಲ್ಪ ಕೂಡ ಜವಾಬ್ದಾರಿಗಳಿಲ್ಲವೆ ಇವರು ಯಾರ ಹಿತಾಸಕ್ತಿಗಳನ್ನು ಕಾಯ್ದು ಕೊಳ್ಳುತ್ತಿದ್ದಾರೆ ಹೈಕೊರ್ಟ ಆದೇಶ ಮಾಡಿ ವರ್ಷ ಕಳೆದರು ಹೈಕೊರ್ಟ ಆದೇಶ ಪಾಲಿಸುತ್ತಿಲ್ಲಾ ಎಂದರೆ ಇವರು ಹೈಕೊರ್ಟಗಿಂತ ದೊಡ್ಡವರೆ ಇವರು ನ್ಯಾಯಾಲಯವನ್ನು ಗೌರವಿಸುವುದಿಲ್ಲವೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ ಈ ಸಹಕಾರಿ ಸಂಘದ joint register ನೊಟಿಸನ್ನೆ ನಿಡಿದ್ದಾರೆ ಇವರು ತಮ್ಮದೆ ಇಲಾಖೆಯ ಈ ನೊಟಿಸಿಗಾದರು ಬೆಲೆ ಕೊಡುತ್ತಾರೋ ಎಂದು ಕಾದು ನೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top