ಭಟ್ಕಳ ಹೆಬ್ಳೆ ಗ್ರಾಮ ಪಂಚಾಯತ್ ಪಿಡಿಓ ಪನಿಷ್ಮೆಂಟ್ ವರ್ಗಾವಣೆ ಬೆನ್ನಲ್ಲೆ ಸೆಕ್ರೇಟರಿ ನಿಂಗಪ್ಪ ನಾಯ್ಕ ವರ್ಗಾವಣೆ

ಭ್ರಷ್ಟಾಚಾರದ ಹಿನ್ನೆಲೆಯಲ್ಲೆ ವರ್ಗಾವಣೆಯೆ ಸಾರ್ವಜನಿಕರ ಮುಂದಿರುವ ಪ್ರಶ್ನೇ?

ಭ್ರಷ್ಟಾಚಾರಿಗಳ ಬೆನ್ನ ಮೂಳೆಯಲ್ಲಿ ನಡುಕ?

ಭಟ್ಕಳ : ತಾಲೂಕು ಹೆಭ್ಳೆ ಗ್ರಾಮ ಪಂಚಾಯತ್ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಪಿಡಿಓ ಅವರನ್ನು ಈಗಾಗಲೆ ಪಿಡಿಓ. ಹುದ್ದೆಯಿಂದ ಈಗಾಗಲೆ ತೆಗೆದು ಕಾರವಾರದ ಬೇರೆಯದ್ದೆ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು ಇದರ ಬೆನ್ನೆಲ್ಲೆ ಇದೆ ಪಂಚಾಯತ್ ಸೆಕ್ರೇಟರಿ ನಿಂಗಪ್ಪ ನಾಯ್ಕ ವರ್ಗಾವಣೆ ಮಾಡಲಾಗಿದ್ದು ಪಂಚಾಯತ್ ನಡೆದ ಭ್ರಷ್ಟಾಚಾರ ಕಾರಣದಿಂದಲೆ ಇವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಗುಸುಗುಸು ತಾಲೂಕಿನಾಧ್ಯಂತ ಕೇಳಿ ಬರುತ್ತಿದೆ.

ಈ ಹಿಂದೆ ಆರ್ ಟಿ ಐ ತಾಲೂಕ ಕಾರ್ಯದರ್ಶಿ ನಾಗೇಶ ನಾಯ್ಕ ಅವರು ಹೆಬ್ಳೆ ಗ್ರಾಮ ಪಂಚಾಯತ್ ವಿವಿದ ಬಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪವನ್ನು ಮಾಡಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತ್ ವತಿಯಿಂದ ಪರಿಶೀಲಿಸಿದ ಸಂದರ್ಬದಲ್ಲಿ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬಿತಾಗಿದೆ ಈ ಹಿನ್ನೆಲೆಯಲ್ಲಿ ಪಿಡಿಓ ಅವರಿಗೆ ಪಿಡಿಓ ಹುದ್ದೆ ಇಂದ ತೆಗೆದು ಕಾರವಾರಕ್ಕೆ ವರ್ಗಾವಣೆಗೆ ಮಾಡಲಾಗಿದೆ ಅಲ್ಲದೆ ಅಧ್ಯಕ್ಷರು ಮತ್ತು ಸದಸ್ಯರಿಗೆ ನಿಮ್ಮನ್ನು ಯಾವ ಕಾರಣಕ್ಕೆ ಅನರ್ಹಗೊಳಿಸಲು ಸರಕಾರಕ್ಕೆ ಶಿಪಾರಸ್ಸು ಮಾಡಬಾದರು ಎಂಬ ನೊಟಿಸನ್ನು ಈಗಾಗಲೆ ನೀಡಲಾಗಿತ್ತು ಇದರ ಬೆನ್ನಲ್ಲೆ ಈ ಹೆಬ್ಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅವರನ್ನು ಹೆಭ್ಳೆ ಗ್ರಾಮ ಪಂಚಾಯತ್ ಗ್ರೇಡ್ 1 ಪಂಚಾಯತ್ ಕಾರಣ ಹೆಬ್ಳೆ ಗ್ರಾಮ ಪಂಚಾಯತ್ಗೆ ಗ್ರೇಡ್ 1 ಕಾರ್ಯದರ್ಶಿಯನ್ನು ನೇಮಿಸುತ್ತೆವೆ ಎಂಬ ಕಾರಣವನ್ನು ಮುಂದಿಟ್ಟು ಮೊದಲಿರುವ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಸಂಜಯ್ ದೇವೆಂದ್ರ ಕೋಚೇರಿ ಅವರನ್ನು ನೇಮಕ ಮಾಡಲಾಗಿದೆ ಈ ವರ್ಗಾವಣೆ ಮೆಲ್ನೊಟಕ್ಕೆ ಆಡಳಿತಾತ್ಮಕವಾಗಿ ಕಂಡರು ಪರೋಕ್ಷವಾಗಿ ಈ ವರ್ಗಾವಣೆ ಭಷ್ಟಾಚಾರದ ಪನಿಷ್ಮೇಟ್ ವರ್ಗಾವಣೆ ಎಂಬ ಗುಸುಗುಸು ತಾಲೂಕಿನಾಧ್ಯಂತ ಕೇಳಿ ಬರುತ್ತಿದೆ ಒಟ್ಟಾರೆ ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತಲ್ಲಿ ಭ್ರಷ್ಟಾಚಾರ. ನಡೆಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿದಿಗಳಿಗೆ ಈಗಾಗಲೆ ಚಳಿ ಜ್ವರ ಪ್ರಾರಂಬವಾಗಿದ್ದು ಈಗ ನಡೆದಿರುವ ಕಾರ್ಯದರ್ಶಿ ವರ್ಗಾವಣೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರಿಗಳ ಜಂಟಾ ಬಲವೆ ಉಡುಗಿಹೊಗಿದ್ದು ಇನ್ನು ಮುಂದೆ ತಮಗೆ ಮಾರಿಹಬ್ಬ ಕನ್ಪಾರ್ಮ ಎಂಬ ಅಂಶ ಅವರಿಗೆ ಮನದಟ್ಟಾಗಿದೆ

ಇಂದು ಹೆಬ್ಳೆ ಗ್ರಾಮ ಪಂಚಾಯತಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದ ಇಂದು ಕ್ರಮ ಕೈಗೊಳ್ಖಲಾಗುತ್ತಿದೆ ಎಂದರೆ ಅದರ ಶ್ರೇಯಸ್ಸು ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಗೆ ಸಲ್ಲಬೇಕು ಹಾಗು ದಕ್ಷ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಸಿ ಇ ಓ ಪ್ರಿಯಾಂಗ್ ಅವರಿಗೆ ಸಲ್ಲಬೇಕು ಭ್ರಷ್ಟರ ವಿರುದ್ದ ಕಾರ್ಯಚರಣೆ ಹೀಗೆ ಮುಂದುವರಿಯಲ್ಲಿ ಭ್ರಷ್ಟರವಿರುದ್ದದ ಕಾರ್ಯಚರಣೆಯಲ್ಲಿ ನಮ್ಮ ಕರಾವಳಿ ಸಮಾಚಾರ ಯಾವಾಗಲು ಜೊತೆಗಿರುತ್ತದೆ ಈ ಭ್ರಷ್ಟಾಚಾರದ ಮುಖ್ಯಪಾತ್ರದಾರಿಗಳಾದ ಗ್ತಾಮ ಪಂಚಾಯತ್ ಕೆಲವು ಜನಪ್ರತಿನಿದಿಗಳಿಗೂ ಸರಿಯಾದ ಪಾಠ ಈ ಪ್ರಕರಣದಲ್ಲಿ ಆಗಬೇಕು ಎನ್ನುವುದು ಸಾರ್ವಜನಿಕರ ಕಳಕಳಿಯಾಗಿದೆ

WhatsApp
Facebook
Telegram
error: Content is protected !!
Scroll to Top