ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ  ಸುದ್ದಿಗೋಷ್ಟಿ

ಅಕ್ಟೋಬರ್ 10 ರಂದು ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ನಡೆಯಲಿರುವ ಪ್ರತಿಭಟನೆ ಮಾಹಿತಿ ಹಕ್ಕು ವೇದಿಕೆ ಸಜ್ಜು.

ಭಟ್ಕಳ ತಾಲೂಕ  ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ   ದಿನಾಂಕ 10/11/2022 ರಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ದರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ. ವೇದಿಕೆಯ ತಾಲೂಕ ಅಧ್ಯಕ್ಷ ಶಂಕರ್ ನಾಯ್ಕ ಹೇಳಿದರು

ಅವರು ಕರಾವಳಿ ಸಮಾಚಾರದ ಕಛೇರಿಯಲ್ಲಿ ನಡೆದ  ಸುದ್ದಿಘೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ  ನಮ್ಮ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ನಡೆದಿರುವ ಅವ್ಯವಹಾರ ಭ್ರಷ್ಟಾಚಾರದ ಬಗ್ಗೆ ನಮ್ಮ ಸಂಘದ ಪ್ರಧಾನ  ಕಾರ್ಯದರ್ಶಿ ನಾಗೇಶ ನಾಯ್ಕ ಅವರು ಸಾಕ್ಷಿ ಸಮೇತ ದೂರು ಸಲ್ಲಿಸಿರುತ್ತಾರೆ  ತನಿಖೆಯಲ್ಲಿ ಅವ್ಯವಹಾರ ಭ್ರಷ್ಟಾಚಾರ ನಡೆದಿರುವುದು ಸಾಭಿತಾಗಿದೆ  ಆದರೆ ಜಿಲ್ಲಾ ಪಂಚಾಯತ್ ಸಿ ಇ ಓ  ಅವರು ತಪ್ಪಿತಸ್ಥರ ವಿರುದ್ದ  ಸೂಕ್ತ ಕಾನೂನು ಕ್ರಮವನ್ನು ಇವರೆಗೂ ಕೈಗೊಂಡಿರುವುದಿಲ್ಲಾ ಈ ಹಿನ್ನೆಲೆಯಲ್ಲಿ ಇದೆ  ಬರುವ ಅಕ್ಟೋಬರ್ 10 ರಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ರಾಜ್ಯ ಸಂಘಟನೆಯ ಅಧ್ಯಕ್ಷರಾದ ರಮೇಶ ಕುಣಿಗಲ್ ಅವರ ನೇತ್ರತ್ವದಲ್ಲಿ  ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು .

ಈ ಸಂದರ್ಬದಲ್ಲಿ  ತಾಲೂಕ ಘಟಕದ  ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ  ಮಾತನಾಡಿ ಹೆಬ್ಳೆ ಗ್ರಾಮ ಪಂಚಾಯತಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಭಿತಾಗಿದೆ ಇಲ್ಲಿ ಅಧಿಕಾರಿಗಳಿಗೆ  ಶಿಕ್ಷೇಯಾದರೆ ಸಾಲದು ಇದಕ್ಕೆ ಪ್ರಮುಖ ಕಾರಣ ಅಧ್ಯಕ್ಷರು ಮತ್ತು ಸದಸ್ಯರ ಮೇಲು ಕ್ರಮ‌ ಕೈಗೊಳ್ಳಬೇಕು  ಪಂಚಾಯತ್ ವ್ಯವಸ್ಥೆಯಲ್ಲಿ ಮಾತ್ರ ಅಧ್ಯಕ್ಷರಿಗೆ ಚೆಕ್ಗಳಿಗೆ ಸಹಿ ಹಾಕುವ  ಪವರ ನೀಡಲಾಗಿದೆ ಇಂತ ಅಧಿಕಾರವನ್ನು ಇವರು ದುರುಪಯೋಗ ಪಡಿಸಿಕೊಂಡಿದ್ದಾರೆ ಇಂಥವರ ಮೇಲು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು

ಈ ಸಂದರ್ಬದಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರ್ಜುನ್ ಮಲ್ಯ ತಾಲೂಕ ಸಂಘಟನೆಯ ಅಧ್ಯಕ್ಷ ನಾಗೇಂದ್ರ ನಾಯ್ಕ ಸಹ ಕಾರ್ಯದರ್ಶಿ ವಸಂತ ದೇವಾಡಿಗ , ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top