ಭಟ್ಕಳ ತಾಲೂಕ ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ

ಭಟ್ಕಳ ತಾಲೂಕಾಡಳಿತದ ಸಹಯೋಗದಲ್ಲಿ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಸಹಾಯಕ ಆಯುಕ್ತರಾದ ಮಮತಾ ದೇವಿ ದ್ವಜಾರೋಹಣ ಮಾಡುವುದರ ಮೂಲಕ ಕನ್ನಡ ರಾಜ್ಯೋತ್ಸಕ್ಕೆ ಚಾಲನೆ ನಿಡಿದರು.

ಈ ಸಂದರ್ಬದಲ್ಲಿ ಸಹಾಯಕ ಆಯುಕ್ತ ಮಮತಾ ದೇವಿ ಮಾತನಾಡುತ್ತ ಕನ್ನಡ ರಾಜ್ಯೊತ್ಸವ ಎಂದರೆ ನಮಗೆ ಸಡಗರದ ದಿನವಾಗಿದೆ ಕನ್ನಡ ಅಭಿಮಾನ ಕೇವಲ ಇದೊಂದೆ ದಿನಕ್ಕೆ ಸೀಮಿತವಾಗದಿರಲಿ ಎಂದು ಆಶಿಸುತ್ತೆನೆ ನಮ್ಮ ಹಿರಿಯರು ನಮಗೆ ನಮ್ಮ ಭಾಷೆಗೆ ಗೌರವವನ್ನು ಒದಗಿಸಿಕೊಟ್ಟಿದ್ದಾರೆ. ಇದನ್ನು ಉಳಿಸಿ ಬೆಳಸಿಕೊಂಡು ಹೊಗುವುದು ನಮ್ಮ ಕರ್ತವ್ಯ ಎಂದು ಹೇಳಿದರು

ಈ ಸಂದರ್ಬದಲ್ಲಿ ಸಾಮಾಜಿಕ ವಲಯದಲ್ಲಿ ಸೇವೆ ಸಲ್ಲಿಸಿದ ಸಾದಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಟ್ಕಳ ಕಸಾಪ ತಾಲೂಕ ಅಧ್ಯಕ್ಷ ಗಂಗಾದರ ನಾಯ್ಕ ಅವರು ಕನ್ನಡದ ಇಂಪು ಕಂಪಿನ ಬಗ್ಗೆ ಉಪನ್ಯಾಸವನ್ನು ನೀಡಿದರು.

ಪಶ್ಚಿಮ ಘಟ್ಟ ಅರಣ್ಯವಲಯದ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಕನ್ನಡದ ಸಂಭ್ರಮ ಕೇವಲ ಕರ್ನಾಟಕ ರಾಜ್ಯೋತ್ಸವಕ್ಕೆ ಮಾತ್ರ ಸಿಮಿತವಾಗದಿರಲಿ ದಿನ ನಿತ್ಯವೂ ನಾವು ಕನ್ನಡವನ್ನು ಬೆಳೆಸೊಣ ಉಳಿಸೋಣ ಎಂದು ಹೇಳಿದರು

ಇದೆ ಸಂದರ್ಬದಲ್ಲಿ ಶಾಸಕ ಸುನಿಲ್ ನಾಯ್ಕ ಮಾತನಾಡಿ ಕನ್ನಡ ರಾಜ್ಯೋತ್ಸವದ ಈ ದಿ‌ನ ನಮಗೆ ತುಂಬ ಸಂಭ್ರಮದ ದಿನ ಪ್ರತಿಯೊಬ್ಬರು ಕನ್ನಡದ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು ಇದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ತಾಲೂಕ ತಹಶಿಲ್ದಾರರಾದ ಸುಮಂತ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯಾತಿಗಣ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಶಾಲಾ ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು

ಈ ಸಂದರ್ಬದಲ್ಲಿ ಈಶಾನ್ಯ ವಲಯ ಅರಣ್ಯ ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ ಡಿ ವೈ ಎಸ್ ಪಿ ಬೆಳ್ಳಿಯಪ್ಪ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ್ , ಪುರಸಭಾ ಮುಖ್ಯಾಧಿಕಾರಿ ಸುರೇಶ್ ನಾಯ್ಕ , ಅಧ್ಯಕ್ಷ ಪರ್ವೆಜ್ ಖಾಶಿಂ , ತಾಲೂಕ ಪಂಚಾಯತ್ ಪ್ರಭಾರೆ ಕಾರ್ಯನಿರ್ವಣಾಧಿಕಾರಿ ಪ್ರಭಾಕರ್ ಚಿಕ್ಕನ್ ಮನೆ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top