ಚುನಾವಣೆ ಹತ್ತಿರ ಬಂದಾಗಕಾಂಗ್ರೆಸ್ ನಾಯಕರುಗಳು ಅತೀಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಿದ್ದಾರೆ:ರವಿ ಹೆಗಡೆ ಹೂವಿನಮನೆ

ಸಿದ್ದಾಪುರ:- ನ್ಯಾಯಯುತವಾಗಿ, ಬದುಕುವ ಅಗತ್ಯತೆಗಳಿಗೆ ಅನುಗುಣವಾಗಿ ಅವರು ಅತಿಕ್ರಮಣ ಮಾಡಿರುವುದು ಅವರಿಗೆ ಸಲ್ಲಬೇಕು. ನಾವು ಅದರ ಪರವಾಗಿದ್ದೇವೆ. ಚುನಾವಣೆ ಹತ್ತಿರ ಬಂದಾಗ ಕೆಲವು ಚುನಾವಣೆಗಾಗಿ ಕಾಂಗ್ರೆಸ್ ನಾಯಕರುಗಳು ಅತೀಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ರವಿ ಹೆಗಡೆ ಹೂವಿನಮನೆ ಹೇಳಿದರು.


ಅವರು ಪಟ್ಟಣದ ಬಾಲಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದೇಶದ ಎಲ್ಲ ರಾಜ್ಯಗಳಲ್ಲಿ ಅತಿಕ್ರಮಣದಾರರ ಸಮಸ್ಯೆ ಇದೆ. ಒಂದು ರಾಜ್ಯ ವನ್ನು ಒಂದು ಯುನಿಟ್ ಮಾಡಬೇಕು ಎಂದು ಕೋರಿದ್ದೇವೆ. ಜರುಗಿಸುವ ಕ್ರಮಕ್ಕೆ ಪೂರಕವಾಗಿ ಒಂದು ನಿರ್ದಿಷ್ಟ ದಿನಾಂಕ ನಿಗದಿಮಾಡಿ ಆ ದಿನಾಂಕಕ್ಕೆ ಅನುಗುಣವಾಗಿ ಮಂಜೂರಿ ಮಾಡಿಕೊಡುವಂತೆ ಬೇಡಿಕಡ ಸಲ್ಲಿಸಲಾಗುವುದು. ಅತಿಕ್ರಮಣ ಹೋರಾಟಗಾರರಿಗೆ ರಾಜಕೀಯೇತರ ಪರಿಹಾರದ ಅಗತ್ಯತೆ ಇದೆ. ಕೇವಲ ರಾಜಕಾರಣದ ಪರಿಹಾರವಲ್ಲ. ಕಾನೂನಿನ ಅಡಿಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಂಜೂರಿ ಜರುಗಿಸಬೇಕಾದುದರಿಂದ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿದ್ದು ಕೆಲವು ಕ್ರಮಗಳನ್ನು ಜರುಗಿಸಲಾಗುವುದು. ಈಗ ಮಾಡುತ್ತಿರುವ ಹೋರಾಟ ಕೇವಲ ಚುನಾವಣಾ ಗಿಮಿಕ್. ಅದಕ್ಕೆ ಯಾವುದೇ ಮಹತ್ವ ಇಲ್ಲಾ ಎಂದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಮಾರುತಿ ನಾಯ್ಕ ಹೊಸೂರ, ಗುರುರಾಜ ಶಾನಭಾಗ್, ನಂದನ ಬೋರ್ಕರ್, ರಾಜೇಂದ್ರ ಕಿಂದ್ರಿ, ಸುರೇಶ ನಾಯ್ಕ, ಮಂಜುನಾಥ ಭಟ್, ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ತಿಮ್ಮಪ್ಪ ಎಂ ಕೆ, ತೋಟಪ್ಪ ನಾಯ್ಕ, ಆದರ್ಶ ಪೈ, ಕೃಷ್ಣಮೂರ್ತಿ ಐಸೂರ್, ವಿಜೇತ ಗೌಡರ್, ಕೃಷ್ಣಮೂರ್ತಿ ನಿಡಗೋಡ, ರಾಮು ಹೊಸೂರ್, ಮೊದಲಾದವರು ಇದ್ದರು.

WhatsApp
Facebook
Telegram
error: Content is protected !!
Scroll to Top