ಸರಕಾರದ ಹಣದಲ್ಲಿ ಸ್ವ ಹಿತಾಸಕ್ತಿಗಾಗಿ ರಸ್ತೆ ನಿರ್ಮಾಣ

ಐದು ಲಕ್ಷದ ಅಂದಾಜು ವೆಚ್ಚದಲ್ಲಿ ಎನ್ ಎಚ್ 66 ಇಂದ ರಮಾನಂದ ಅವಭ್ರತ್ ಅವರ ಮನೆಯವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ

ಭಟ್ಕಳ : ತಾಲೂಕಿನ ಬೆಳ್ಕೆ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಳ ಜಿಲ್ಲಾ ಪಂಚಾಯತನ ಲಕ್ಷಾಂತರ ಅನುದಾನದಲ್ಲಿ ರಾಷ್ಟ್ರಿಯ ಹೆದ್ದಾರಿ 66 ರಿಂದ ರಮಾನಂದ ಅವಭ್ರತ್ ಅವರ ಮನೆಯವರೆಗೆ ವಯಕ್ತಿಕ ಹಿತಾಸಕ್ತಿಗಾಗಿ ಸಾರ್ವಜನಿಕರ ತೆರಿಗೆಯ ಹಣವನ್ನು ಪೊಲು ಮಾಡಿದ್ದು ಈ ಬಗ್ಗೆ ಸ್ಪಷ್ಟನೆ ಕೇಳಿದರೆ ಇಲಾಖಾ ಅಧಿಕಾರಿಗಳು ನುಣುಚಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಹೌದು ವೀಕ್ಷಕರೆ ನಮ್ಮ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸರಕಾರದ ಅನುದಾನ ಎಂದರೆ ಯಾರದ್ದೊ ದುಡ್ಡು ಎಲ್ಲಮನ ಜಾತ್ರೆ ಎಂಬಂತಾಗಿದೆ ಇಲ್ಲಿ ಪುಕ್ಸಟೆ ಸಿಗುತ್ತದೆ ಎಂದರೆ ತನಗೊಂದಿರಲಿ ಹೆಚ್ಚಿದ್ದರೆ ನನ್ನ ಅಪ್ಪಂಗೂ ಒಂದಿರಲಿ ಎಂಬ ವರ್ತನೆ ಎಲ್ಲೆಡೆ ಕಾಣ ಬಹುದಾಗಿದೆ ಯಾರದ್ದೊ ವಯಕ್ತಿಕ ಹಿತಾಸಕ್ತಿಗಾಗಿ ವಯಕ್ತಿಕವಾಗಿ ಒಬ್ಬೊಬ್ಬರ ಮನೆಗಳಿಗೆ ಲಕ್ಷಾಂತರ ವೆಚ್ಚಮಾಡಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಇಲ್ಲಿ ಯಾರಿಗೂ ಸಾರ್ವಜನಿಕ ಹಿತಾಸಕ್ತಿಯೆ ಬೇಕಾಗಿಲ್ಲ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರಿಯ ಹೆದ್ದಾರಿ 66 ಇಂದ ರಮಾನಂದ ಅವಭ್ರತ ಅವರ ಮನೆಯವರೆಗೆ ಐದು ಲಕ್ಷ ಅಂದಾಜು ವೆಚ್ಚದಲ್ಲಿ ಒಬ್ಬನೆ ಒಬ್ಬ ವ್ಯಕ್ತಿಯ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ 73 ಮಿಟರ್ ಉದ್ದ ಮೂರು ಮಿಟರ್ ಅಗಲದ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಲಾಗಿದೆ . ವೀಕ್ಷಕರ ಇಲ್ಲಿ ನಿರ್ಮಾಣವಾದ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ರಮಾನಂದ ಅವಭ್ರತ್ ಅವರ ಒಬ್ಬರನೆಗೆ ಹೊಗಲು ನಿರ್ಮಾಣ ಮಾಡಲಾಗಿದೆ ಅಲ್ಲೆ ಪಕ್ಕದಲ್ಲಿ ಇನ್ನೊಂದು ಮನೆ ಇದ್ದು ಈ ರಸ್ತೆ ಆ ಮನೆಯವರಿಗೆ ಯಾವುದೆ ಪ್ರಯೋಜನವಿಲ್ಲವಾಗಿದೆ. ಒಟ್ಟಾರೆ ರಮಾನಂದ ಅವಭ್ರತ್ ಅವರ ಮನೆಗಾಗಿ ಸರಕಾರ 5 ಲಕ್ಷ ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಿದೆ ಇದರ ಹಿಂದೆ ದೂರ ದೂರದವರೆಗೆ ಯಾವುದೆ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲಾ ಇಲ್ಲ ಸ್ವ ಹಿತಾಸಕ್ತಿ ಸ್ಯಾಟಿಸ್ಪ್ಯಾಕ್ಶನ್ ಗಾಗಿ ಜನ ಸಾಮಾನ್ಯ ತುಂಬಿರುವ ಲಕ್ಷ ಲಕ್ಷ ತೆರಿಗೆಯ ಹಣವನ್ನು ಪೋಲು ಮಾಡಲಾಗಿದೆ . ವಿಕ್ಷಕರೆ ಈ ಕಾಮಗಾರಿಗೆ ಹಾಕಲಾಗಿರುವ ಬೊರ್ಡ ಅನ್ನು ಗಮನಿಸಿ ಇಲ್ಲಿ ಅನುಷ್ಟಾನ ಇಲಾಖೆಯ ಹೆಸರಿಲ್ಲಾ , ಗುತ್ತಿಗೆ ದಾರನ ಹೆಸರಿಲ್ಲಾ ಈ ಕಾಮಗಾರಿಯ ಹೆಚ್ಚಿನ ವಿವರ ಯಾರಿಗೂ ಸಿಗಭಾರದು ಎಂಬ ಉದ್ದೇಶದಿಂದ ಈ ಬೊರ್ಡ ಹಾಕಲಾಗಿದೆಯೇನೊ ಎಂದು ಅನ್ನಿಸುವಂತಿದೆ ಸಾರ್ವಜನಿಕ ವಲಯದಲ್ಲಿ ಈ ಕಾಮಗಾರಿಯನ್ನು ಶಾಸಕರ ಆಪ್ತರಾದ ಪ್ರಮೋದ ಜೋಷಿ ಅವರು ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿದ್ದಾರೆ ಎಂಬ ಮಾಹಿತಿ ಬಂದಿತ್ತು ಈ ಹಿನ್ನೆಲೆಯಲ್ಲಿ ಪ್ರಮೋದ್ ಜೋಷಿ ಅವರನ್ನು ಸಂಪರ್ಕಿಸಿದ್ದರೆ ತಾನು ಈ ಕಾಮಗಾರಿ ನಡೆಸೆ ಇಲ್ಲಾ ಈ ಬಗ್ಗೆ ನನಗೆ ಯಾವುದೆ ವಿವರಣೆ ಗೊತ್ತಿಲ್ಲಾ ಎಂಬ ಮಾತನ್ನು ಹೇಳುತ್ತಾರೆ ದೂರ ದೂರದವರೆ ಕಾಮಗಾರಿ ಗುತ್ತಿಗೆದಾರನು ಕಾಣಿಸುತ್ತಲೆ ಇಲ್ಲಾ ನಾಪತ್ತೆ ನಾರಾಯಣ ನಂತಾಗಿದ್ದಾನೆ ಈ ಬಗ್ಗೆ ಭಟ್ಕಳದಲ್ಲಿರುವ ಜಿಲ್ಲಾ ಪಂಚಾಯತ್ ಕಛೇರಿಗೆ ಸಂಪರ್ಕಿಸಿ ಸ್ಪಷ್ಟನೆ ಕೇಳಿದರೆ ಇದರ ಬಗ್ಗೆ ನಮಗೆ ಏನು ತಿಳಿದಿಲ್ಲಾ ಇದು ನಮ್ಮ ವ್ಯಾಪಿಗೆ ಬರುವುದಿಲ್ಲಾ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನವನ್ನು ನಡೆಸಲಾಗುತ್ತದೆ. ಕೊನೆಗೆ ನಮ್ಮ ಕರಾವಳಿ ಸಮಾಚಾರ ಈ ಬಗ್ಗೆ ವಿಚಾರಿಸುತ್ತಾ ಹೊದಾಗ ಇದು ಗ್ರಾಮಿಣ ಅಭಿವೃದ್ದಿ ಹಾಗು ಪಂಚಾಯತ್ ಅಭಿವೃದ್ದಿ ಇಲಾಖೆ ಇಲಾಖೆ ಅಡಿಯಲ್ಲಿ ಲ್ಯಾಂಡ್ ಆರ್ಮಿ ನಿರ್ಮಾಣ ಮಾಡಿದ ಕಾಮಗಾರಿ ಎಂದು ತಿಳಿದು ಬಂದಿದೆ ರಸ್ತೆ ನಿರ್ಮಾಣದ ಬಗ್ಗೆ ಈ ಎರಡು ಇಲಾಖೆಯಲ್ಲಿ ಕೇಳಿದರೆ ಈ ಬಗ್ಗೆ ನಮಗೆನೂ ತಿಳಿದಿರುತ್ತದೆ ಇದು ಜಿಲ್ಲಾ ಪಂಚಾಯತ್ ಅಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿರುತ್ತದೆ .ಕಾಮಗಾರಿ ಎಲ್ಲಿ ನಡೆಯಬೇಕು ಯಾವ ಪ್ರಮಾಣದಲ್ಲಿ ನಡೆಯಬೇಕು ಎಂಬ ರೂಪು ರೇಶೆಗಳನ್ನು ಜಿಲ್ಲಾ ಪಂಚಾಯತ್ ಮಾಡುತ್ತದೆ ನೀವು ಜಿಲ್ಲಾ ಪಂಚಾಯತ್ ಸಿ ಇ ಓ ಅವರನ್ನೆ ಕೇಳಿಕೊಳ್ಳಿ ಎಂಬ ಮಾತನ್ನು ಹೇಳಿತ್ತಾರೆ ಹಾಗಾದರೆ ಈ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸ್ವಲ್ಪ ಕೂಡ ಬುದ್ದಿ ಇಲ್ಲವೆ ಇವರು ಬುದ್ದಿಗೆಡಿಗಳೆ . ಈ ಅದಿಕಾರಿಗಳು ಇವರ ಮನೆಯ ಹಣವನ್ನು ತಂದು ಕಾಮಗಾರಿ ನಡೆಸುತ್ತಾರೊ ಇವರು ಯಾರದ್ದೊ ಹಿತಾಸಕ್ತಿ ಕಾಪಾಡಲು ಇನ್ಯಾರದ್ದೊ ಮನೆಗೆ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಾರೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೆ? ಈ ಅಧಿಕಾರಿಗಳು ಯಾರದ್ದೋ ಮನೆಗೆ ರಸ್ತೆ ನಿರ್ಮಿಸುತ್ತಾರೆ ಆ ರಸ್ತೆಗೆ ಶಾಸಕ ಸುನಿಲ್ ನಾಯ್ಕ ಗುದ್ದಲಿ ಪೂಜೆ ಮಾಡುತ್ತಾರೆ ಹಾಗಾದರೆ ಶಾಸಕ ಸುನಿಲ್ ನಾಯ್ಕ ಅವರಿಗೂ ಗೊತ್ತಾಗಲಿಲ್ಲವಾ ? ಅಥವಾ ಶಾಸಕರ ದಾರಿ ತಪ್ಪಿಸಲಾಯಿತೆ? ಶಾಸಕರೆ ತಮ್ಮ ರಾಜಕಿಯ ಹಿತಾಸಕ್ತಿಗಾಗಿ ಇಲ್ಲಿ ರಸ್ತೆ ನಿರ್ಮಾಣ ಮಾಡಿದರೆ ಶಾಸಕರೆ ಈ ಬಗ್ಗೆ ಉತ್ತರಿಸ ಬೇಕಾಗಿದೆ.

ತಾಲೂಕಿನ ಕೆಲವು ಹಳ್ಳಿಗಳಲ್ಲಿ ರಸ್ತೆ ವಸತಿ ಒಳಚರಂಡಿಗಳಂತ ಮೂಲಭೂತ ಸೌಕರ್ಯಗಳ ವಂಚಿತವಾಗಿದೆ ಅಂಥಹದರಲ್ಲಿ ತಾಲೂಕಿನಲ್ಲಿ ಯಾರದ್ದೊ ಹಿತಾಸಕ್ತಿಗಾಗಿ ಇನ್ಯಾರದ್ದೊ ಮನೆಯ ಮುಂದೆ ರಸ್ತೆ ನಿರ್ಮಿಸುತ್ತಾರೆ ಉದಾಹರಣೆ ಇದೆ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ‌ ಪಂಚಾಯತ್ ಹಿಂಬಾದಲ್ಲಿರುವ ಆರೋಗ್ಯ ಕೆಂದ್ರ ಮತ್ತು ಕೆನರಾ ಬ್ಯಾಂಕ್ ತೆರಳುವ ರಸ್ತೆ ಕಿತ್ತುಹೊಗಿದ್ದು ಅದನ್ನು ಸರಿ ಪಡಿಸಿ ಎಂದು ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ನಾಯ್ಕ ಶಾಸಕರಲ್ಲಿ ಮನವಿ ಮಾಡುತ್ತ ಬಂದರು ಶಾಸಕರು ಆಶ್ವಾಸನೆ ನಿಡುತ್ತಾ ಬಂದರೆ ಹೊರತು ರಸ್ತೆ ನಿರ್ಮಿಸಲಿಲ್ಲ ಆದರೆ ಅದೆ ವಯಕ್ತಿಕ ಹಿತಾಸಕ್ತಿಗಾಗಿ ರಮಾನಂದ ಅವಭ್ರತ್ ಅವರ ಮನೆಯ ಮುಂದೆ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತದೆ ಇದೆಂತ ವ್ಯವಸ್ಥೆ ಸ್ವಾಮಿ ಇಲ್ಲಿ ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲವೆ ಸಾರ್ವಕನಿಕ ಹಿತಾಸಕ್ತಿಗಿಂತ ವಯಕ್ತಿಕ ಹಿತಾಸಕ್ತಿಗಳೆ ಇವರಿಗೆ ಹೆಚ್ಚಾಯಿತೆ

ಈ ಬಗ್ಗೆ ಬೆಳ್ಕೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ನಾಯ್ಕ ಮಾತನಾಡಿದ್ದು ಹೀಗೆ

ಒಟ್ಟಾರೆ ತಾಲೂಕಿನಲ್ಲಿ ಈ ಅಧಿಕಾರಿಗಳು ಜನಪ್ರತಿನಿದಿಗಳು ಸರಕಾರದ ಅನುದಾನಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿಗಳೆನ್ನುವಂತೆ ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top