ಸಿದ್ದಾಪುರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಬಿದಿಗಿಳಿದು ತಮ್ಮ ಹಕ್ಕಿಗಾಗಿ ಪ್ರತಿಭಟನೆ

ಅರಣ್ಯ ಅತಿಕ್ರಮಣ ಸಕ್ರಮಣಕ್ಕಾಗಿ ಹೊರಾಟ

ಸಿದ್ದಾಪುರ:- ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಸಿಡಿದೇದ್ದ ಜನಸಮೂಹ. ತಮ್ಮ ಹಕ್ಕಿಗಾಗಿ ಹೋರಾಡಿದ ಸಾವಿರಾರು ಜನ.

ಜಿಪಿಎಸ್ ಮಾಡಿರುವ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸ ಬಾರದು, ಜಿಪಿಎಸ್ ಮಾಡಿರುವುದನ್ನು ಪನರ್ಪರಿಶೀಲಿಸಬೇಕು ಎಂದು ಮುಂತಾಗಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಬಿಳಗಿ ಮಾರಿಕಾಂಬ ದೇವಸ್ಥಾನ ದಿಂದ ಹೋರಟ ಪಾದಯಾತ್ರೆ ಯಲ್ಲಿ ತಾಲೂಕಿನ ಮೂಲೆಗಳಿಂದ ಜನಸಮೂಹ ಕಿತ್ತೆದ್ದು ಬಂದು ತಮ್ಮ ಹಕ್ಕಿಗಾಗಿ ಹೋರಾಡಿದರು.
ತಮ್ಮ ಇಳಿ ವಯಸ್ಸಿನಲ್ಲಿಯೂ ಹೋರಾಟದಲ್ಲಿ ಭಾಗವಹಿಸಿದ ಮಾಜಿ ಕಂದಾಯ ಸಚಿವರು, ಮಾಜಿ ವಿಧಾನ ಸಭಾಧ್ಯಕ್ಷರು ಆದ ಕಾಗೋಡ ತಿಮ್ಮಪ್ಪ ಮಾತನಾಡಿ ಹೋರಾಟದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ನಾನು ಹೋರಾಟ ಮಾಡಿದ್ದೇನೆ. ಈ ನಿಮ್ಮ ಕೂಗು ವಿಧಾನಸೌಧದಲ್ಲಿ ಮೊಳಗಬೇಕೆಂದರೆ ರವಿಂದ್ರ ನಾಯಕರನ್ನು ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಕಲಿಸಬೇಕು ಎಂದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ಅರಣ್ಯ ಅತಿಕ್ರಮಣದಾರ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರನಾಥ ನಾಯ್ಕ ಮಾತನಾಡಿ ಅರಣ್ಯ
ಅಧಿಕಾರಿಗಳಿಂದ ಯಾವುದೇ ತೊಂದರೆ ಆಗಬಾರದು. ಜಿಪಿಎಸ್ ಆಗಿರುವ ಜಾಗದಿಂದ ಜನರನ್ನು ಒಕ್ಕಲೆಬ್ಬಿಸಬಾರದು. ಜಿಪಿಎಸ್ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಸಮಾಜಕಲ್ಯಾಣ ಇಲಾಖೆಯ ಗೆ ಅರ್ಜಿಗಳನ್ನು ನೀಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬರುವವರೆಗೂ ಕದಲುವುದಿಲ್ಲಾ ಎಂದು ಪಟ್ಟುಹಿಡಿದರು.
ನಂತರ ಡಿಎಫ್ಒ ಅಜ್ಜಯ್ಯ ಅವರು ಸ್ಥಳಕ್ಕೆ ಆಗಮಿಸಿ ನಮ್ಮ ಅಧಿಕಾರಿಗಳಿಂದ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳುತ್ತೇನೆ. ಜಿಪಿಎಸ್ ಆಗಿರುವ ಜಾಗದಿಂದ ಒಕ್ಕಲೆಬ್ಬಿಸುವುದಿಲ್ಲಾ. ಜಿಪಿಎಸ್ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು. ಸಮಾಜಕಲ್ಯಾಣ ಇಲಾಖೆಯ ಗೆ ಅರ್ಜಿಗಳನ್ನು ನೀಡಲು ಅವಕಾಶ ಮಾಡಿಕೊಡುವ ಭರವಸೆ ನೀಡಿದರು. ನಂತರ ದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಿಲ್ಲಿಸಿದರು.
ಅರಣ್ಯ ಅತಿಕ್ರಮಣದಾರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ತಿ.ನ.ಶ್ರೀನಿವಾಸ, ಅರಣ್ಯ ಅತಿಕ್ರಮಣದಾರ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ರಮೇಶ ಹೆಗಡೆ ತೀರ್ಥಹಳ್ಳಿ,
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಆಮ್ ಆದ್ಮಿ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ , ವಿ ಎನ್ ನಾಯ್ಕ, ಬಿಎಸ್ ಎನ್ ಡಿ ಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್ ಕೆ ಶಿವಾನಂದ, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶಿರಳಗಿ, ಅಂಜುಮನೆ ಇಸ್ಲಾಂ ಸಮಿತಿ ನಾಸಿರ್ ಖಾನ್, ಕೆಟಿ ನಾಯ್ಕ ಹೆಗ್ಗೇರಿ ಸೇರಿದಂತೆ ಸಾವಿರಾರು ಅತಿಕ್ರಮಣ ದಾರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

WhatsApp
Facebook
Telegram
error: Content is protected !!
Scroll to Top