ಯಾವುದೇ ಕಾರಣಕ್ಕೂ ಅರಣ್ಯ ಸಾಗುವಳಿದಾರರನ್ನು ಒಕ್ಕಲಿಬ್ಬಿಸಬಾರದು ಅವರಿಗೆ ಹಕ್ಕು ಪತ್ರ ನೀಡಬೇಕು:ರೈತ ಮುಖಂಡ ವೀರಭದ್ರ ನಾಯ್ಕ

ಸಿದ್ದಾಪುರ:- ಯಾವುದೇ ಕಾರಣಕ್ಕೂ ಅರಣ್ಯ ಸಾಗುವಳಿದಾರರನ್ನು ಒಕ್ಕಲಿಬ್ಬಿಸಬಾರದು ಅವರಿಗೆ ಹಕ್ಕು ಪತ್ರ ನೀಡಬೇಕು ಎಂದು ದಿನಾಂಕ 19-10-2022 ರಂದು ನಡೆಯುವ ಪಾದಯಾತ್ರೆ ಗೆ ನಮ್ಮ ಬೆಂಬಲ ಇದೆ ಎಂದು ರೈತ ಮುಖಂಡ ವೀರಭದ್ರ ನಾಯ್ಕ ಹೇಳಿದರು.
ಅವರು ಪಟ್ಟಣದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ರಾಜ್ಯ ಅರಣ್ಯ ಭೂಮಿ ಹೋರಾಟಗಾರರ ಅಧ್ಯಕ್ಷರಾಗಿರುವ ರವೀಂದ್ರ ನಾಯ್ಕ ರವರು ಅರಣ್ಯ ವಾಸಿಗಳನ್ನು ಅರಣ್ಯ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲ್ ಎಬ್ಬಿಸಬಾರದೆಂದು ಭೂಮಿಯಿಂದ ಹೊರ ಹಾಕಬಾರದು ಅವರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಬಿಳಗಿ ಶ್ರೀ ಮಾರಿಕಾಂಬ ದೇವಸ್ಥಾನದಿಂದ ಸಿದ್ದಾಪುರದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಅರಣ್ಯ ಸಾಗುವಳಿದಾರರನ್ನು ಒಕ್ಕಲಿಬ್ಬಿಸಬಾರದು ಅವರಿಗೆ ಹಕ್ಕು ಪತ್ರ ನೀಡಬೇಕು, ಅವರನ್ನು ರಕ್ಷಣೆ ಮಾಡಬೇಕೆಂದು ಇದ್ದಕ್ಕೆ ಅನೇಕ ಸಂಘ ಸಂಸ್ಥೆಗಳು ತಮ್ಮ ಬೆಂಬಲ ಸೂಚಿಸಿವೆ ಎಂದರು.
ಬಿಎಸ್ ಎನ್ ಡಿ ಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ ಅರಣ್ಯ ಅತಿಕ್ರಮಣ ಹೋರಾಟದಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ರವರ ಪಾದಯಾತ್ರೆಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲ ಇದೆ.
ಜಿಪಿಎಸ್ ಆಗಿರುವ ಸ್ಥಳಗಳಲ್ಲಿಯೂ ಸಹ ಅರಣ್ಯ ಇಲಾಖೆಯವರು ಅಗಳ ಹೊಡೆದು ಗಡಿ ಗುರುತು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಣ್ಯ ವಾಸಿಗಳ ಪರವಾಗಿ ಅಫಿಡವಿಟ್ ಸಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಲಕ್ಷ್ಮಣ ನಾಯ್ಕ ಬೇಡ್ಕಣಿ ಮಾತನಾಡಿ ಈ ಕ್ಷೇತ್ರದಿಂದ ಪ್ರಚಂಡ ಬಹುಮತದಿಂದ ಆರಿಸಿ ತಂದು ಸ್ಪೀಕರನ್ನಾಗಿ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಮನಸ್ಸು ಮಾಡಿದರೆ 24 ಗಂಟೆಯ ಒಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಾಳೆ ನಡೆಯಲಿರುವ ಪಾದಯಾತ್ರೆಗೆ ಬಿಎಸ್ ಎನ್ ಡಿಪಿ, ಆಮ್ ಆದ್ಮಿ, ದಲಿತ ಸಂಘರ್ಷ ಸಮಿತಿ, ನಿವೃತ್ತ ನೌಕರ ಸಂಘ, ತಾಲೂಕು ಅಂಜುಮನೆ ಇಸ್ಲಾಂ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ), ತಾಲೂಕು ಯುವ ಒಕ್ಕೂಟ, ತಾಲೂಕು ವಕ್ಕಲಿಗರ ಸಂಘ, ಅಂಬೇಡ್ಕರ್ ಶಕ್ತಿ ಸಂಘ ಸೇರಿದಂತೆ ತಾಲೂಕಿನ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್ ಕೆ ಶಿವಾನಂದ, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶಿರಳಗಿ, ಹಲಗೇರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಂತ ನಾಯ್ಕ, ಗಣೇಶ ಬಾಲಿಕೊಪ್ಪ. ಮಂಜುನಾಥ ನಾಯ್ಕ ಕಾನ್ಮನೆ ಮೊದಲಾದವರು ಇದ್ದರು.

WhatsApp
Facebook
Telegram
error: Content is protected !!
Scroll to Top